ವಾರ್ತಾ ಇಲಾಖೆಯಿಂದ ಪತ್ರಿಕೋದ್ಯಮ ಪದವೀಧರರಿಗೆ ಕೌಶಲ್ಯ ತರಬೇತಿ

 : ವಾರ್ತಾ ಇಲಾಖೆಯು ೨೦೧೩-೧೪ನೇ ಸಾಲಿನಲ್ಲಿ ’ಪರಿಶಿಷ್ಠ ಜಾತಿ ವಿಶೇಷ ಘಟಕ ಯೋಜನೆ’ ಹಾಗೂ ’ಗಿರಿಜನ ಉಪಯೋಜನೆ’ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿ ಕೌಶಲ್ಯ  ತರಬೇತಿ ಕಾರ್ಯಕ್ರಮ ಹಾಗೂ ನಿರೂಪಣಾ ಕೌಶಲ್ಯ ತರಬೇತಿ ಕಾರ್ಯಕ್ರಮ ಏರ್ಪಡಿಸುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಿದೆ.
ಅಭ್ಯರ್ಥಿಯು ಪತ್ರಿಕೋದ್ಯಮ/ ಸಮೂಹ ಸಂವಹನ/ ವಿದ್ಯುನ್ಮಾನ ಮಾಧ್ಯಮ ವಿಷಯದಲ್ಲಿ ಕನಿಷ್ಠ ಶೇಕಡ ೫೦ರಷ್ಟು ಅಂಕದೊಂದಿಗೆ ಪದವಿ/ಸ್ನಾತಕ ಪದವಿ/ಪಿ.ಜಿ ಡಿಪ್ಲೊಮಾ ಪಡೆದಿರಬೇಕು. ಅಭ್ಯರ್ಥಿಯು ೧೮ ರಿಂದ ೩೫ ವರ್ಷ ವಯೋಮಿತಿಯಲ್ಲಿರಬೇಕು. ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸ್ವವಿವರಗಳೊಂದಿಗೆ ಅ. ೩೧ ರೊಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ಸಂ.೧೭, ಭಗವಾನ ಮಹಾವೀರ ರಸ್ತೆ, ಬೆಂಗಳೂರು ೫೬೦೦೦೧ ಇಲ್ಲಿಗೆ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಇಲಾಖಾ ಅಂತರ್ಜಾಲ ತಾಣ www.karnatakavarthe.org ಇಂದ ಪಡೆಯಬಹುದಾಗಿದೆ. 
Please follow and like us:
error