You are here
Home > Koppal News > ಹುಬ್ಬಳ್ಳಿಯ ಜೈನ್ ಕಾಲೇಜಿಗೆ ನವೀನ ಕುಮಾರ ಮೆಹತಾ ಪ್ರಥಮ

ಹುಬ್ಬಳ್ಳಿಯ ಜೈನ್ ಕಾಲೇಜಿಗೆ ನವೀನ ಕುಮಾರ ಮೆಹತಾ ಪ್ರಥಮ

 ನಗರದ ವರ್ತಕ ಪದಮ್‌ಚಂದ್ ಮೆಹತಾ ಇವರ ಪುತ್ರ ಕು. ನವೀನ ಕುಮಾರ ಮೆಹತಾ ಹುಬ್ಬಳ್ಳಿಯ ಪ್ರತಿಷ್ಠಿತ ಜೈನ್ ಕಾಲೇಜ್ ಆಫ್ ಬಿ.ಬಿ.ಎ ಮತ್ತು ಬಿ.ಸಿ.ಎ ಕಾಲೇಜಿನಲ್ಲಿ ಬಿ.ಸಿ.ಎ. ಓದುತ್ತಿದ್ದು ಐದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಗರಿಷ್ಠ ೭೦೦ ಕ್ಕೆ ೬೪೨ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ . ನವೀನ್ ಕುಮಾರ್‌ನ ಈ ಸಾಧನೆಗೆ ಡಾ.ಪ್ರಕಾಶ ಬಳ್ಳಾರಿ , ಹೇಮಂತ್ ತುಪ್ಪದ,  ಜಂಬಣ್ಣ ನಂದ್ಯಾಪುರ, ಶಿವಬಸಪ್ಪ ಮಸ್ಕಿ, ಬಸವರಾಜ ಪಟ್ಟಣಶೆಟ್ಟಿ, ಜಿತೇಂದ್ರ ಜಾಂಗಡಾ, ಚಂದ್ರಶೇಖರ ಹೆಡ್ಮಾಸ್ತರ್, ರವುಪ್ ಕಿಲ್ಲೇದಾರ, ಮಂಜುನಾಥ ಆನಿಪಲ್ಲೇದ ಅಭಿನಂದಿಸಿದ್ದಾರೆ. ನವೀನ್ ಕುಮಾರ್ ಕೊಪ್ಪಳದ ಹಿರಿಯ ಲಯನ್ಸ್ ಕ್ಲಬ್ ಸದಸ್ಯರಾದ ಚಂಪಾಲಾಲ್ ಜೀ ಯವರ ಮೊಮ್ಮಗ.

Leave a Reply

Top