ನವೋದಯ ವಿದ್ಯಾಲಯ ಫೆ.೦೬ ರಂದು ಶಾಲಾ ವಾರ್ಷಿಕೋತ್ಸವ.

ಕೊಪ್ಪಳ,
ಫೆ.೦೪ (ಕ ವಾ) ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕುಕನೂರಿನ ಜವಾಹರ
ನವೋದಯ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ ಫೆ.೦೬ ರಂದು ಬೆಳಿಗ್ಗೆ ೧೧ ಗಂಟೆಗೆ
ನಡೆಯಲಿದೆ.
     ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ನವೋದಯ ವಿದ್ಯಾಲಯ ಸಮಿತಿ
ಹೈದ್ರಾಬಾದ್ ವಲಯ ಧಾರವಾಡ ಕ್ಲಸ್ಟರ್‌ನ ಸಹಾಯಕ ಆಯುಕ್ತ ಟಿ.ಗೋಪಾಲಕೃಷ್ಣ ಹಾಗೂ
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ಯಾಮಸುಂದರ ಅವರು ಮುಖ್ಯ ಅತಿಥಿಗಳಾಗಿ
ಪಾಲ್ಗೊಳ್ಳುವರು ಎಂದು ಜವಾಹರ ನವೋದಯ ವಿದ್ಯಾಲಯ ಕುಕನೂರಿನ ಪ್ರಾಚಾರ್ಯರು
ತಿಳಿಸಿದ್ದಾರೆ.
ಫೆ.೦೭ ರಂದು ಗಂಗಾವತಿಯಲ್ಲಿ ರಾಜ್ಯಮಟ್ಟದ ಜಂಪ್‌ರೋಪ್ ಸ್ಪರ್ಧೆ.
ಕೊಪ್ಪಳ
ಫೆ.೦೪ (ಕ ವಾ) ಪ್ರಸಕ್ತ ಸಾಲಿನ ರಾಜ್ಯಮಟ್ಟದ  ಪ್ರಾಥಮಿಕ ಮತ್ತು
ಪ್ರೌಢಶಾಲಾ ಮಕ್ಕಳ ಬಾಲಕ, ಬಾಲಕಿಯರ ಜಂಪ್‌ರೋಪ್ ಸ್ಪರ್ಧೆ ಫೆ.೦೭ ರಂದು ಬೆಳಿಗ್ಗೆ ೦೮
ಗಂಟೆಗೆ ಗಂಗಾವತಿಯ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಆಯೋಜಿಸಲಾಗಿದೆ.
     ರಾಜ್ಯದ
ಎಲ್ಲ ಜಿಲ್ಲೆಗಳ ಜಿಲ್ಲಾ ಮಟ್ಟದ ಜಂಪ್‌ರೋಪ್ ಸ್ಪರ್ಧೆಯಲ್ಲಿ ವಿಜೇತರಾದವರು ಹಾಗೂ
ಆಯ್ಕೆಯಾದ ಜಿಲ್ಲಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸಲಿಚ್ಛಿಸುವ
ಎಲ್ಲ ವಿಜೇತ ತಂಡಗಳು ಫೆ.೦೬ ಸಂಜೆ ೦೫ ಗಂಟೆ ಒಳಗೆ ಗಂಗಾವತಿಯ ಲಿಟಲ್ ಹಾರ್ಟ್ಸ್
ಶಾಲೆಯಲ್ಲಿ ವರದಿ ಮಾಡಿಕೊಳ್ಳಬೇಕು. ಜಿಲ್ಲಾ ವಿಜೇತರ ಪ್ರವೇಶ ವರದಿಯನ್ನು ಫೆ.೦೩
ರೊಳಗಾಗಿ ಕೊಪ್ಪಳ ಡಿಡಿಪಿಐ ಕಚೇರಿಗೆ ಕಳುಹಿಸಿಕೊಡಬೇಕು. ಆಯಾ ಜಿಲ್ಲಾ ತಂಡದ
ಮೇಲ್ವಿಚಾರಕರು ಬಿಡುಗಡೆ ಪತ್ರ, ಕ್ರೀಡಾಪಟುಗಳ ಧೃಢೀಕರಿಸಿದ ಗುರುತು ಪತ್ರಗಳನ್ನು
ಕಡ್ಡಾಯವಾಗಿ ತರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ವಸತಿ
ಸೌಲಭ್ಯ ಕಲ್ಪಿಸಲಾಗಿದ್ದು, ಬಾಲಕಿಯರ ತಂಡಗಳಿಗೆ ಕಡ್ಡಾಯವಾಗಿ ಮಹಿಳಾ ಶಿಕ್ಷಕರನ್ನು
ತಂಡದ ಮೇಲ್ವಿಚಾರಕರಾಗಿ ನಿಯೋಜಿಸಬೇಕು. ಜಿಲ್ಲಾ ತಂಡಗಳ ಮೇಲ್ವಿಚಾರಕರ ಪೂರ್ವಸಿದ್ಧತಾ
ಸಭೆಯನ್ನು ಫೆ.೦೬ ರಂದು ಸಾಯಂಕಾಲ ೦೬ ಗಂಟೆಗೆ ಜರುಗಿಸಲಾಗುವುದು.
       ಹೆಚ್ಚಿನ
ಮಾಹಿತಿಗಾಗಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೈ.ಸುದರ್ಶನರಾವ್, ಮೊ: ೯೪೮೨೪೦೪೮೪೮.
ಕ್ಷೇತ್ರ ಶಿಕ್ಷಣ ಕಾರ್ಯಾಲಯ ಗಂಗಾವತಿಯ ದೈಹಿಕ ಶಿಕ್ಷಣ ಪರಿವೀಕ್ಷಕ ತಿಪ್ಪಯ್ಯ ಹಿರೇಮಠ,
ಮೊ:೯೦೦೮೩೬೩೬೭೦. ಹನುಮಸಾಗರ ಜಂಪ್‌ರೋಪ್ ಸಂಸ್ಥೆಯ ಕಾರ್ಯಾಧ್ಯಕ್ಷ ಅಬ್ದುಲ್ ರಜಾಕ್,
ಮೊ:೯೯೦೦೩೯೯೨೪೩. ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಭೋಗೇಶರಾವ್
ಹೇರೂರ, ಮೊ:೯೩೪೩೫೨೯೦೨೯ ಅಥವಾ ಗಂಗಾವತಿ ಲಿಟಲ್ ಹಾರ್ಟ್ಸ್ ಶಾಲೆಯ ದೈಹಿಕ ಶಿಕ್ಷಕ
ಚಂದ್ರಶೇಖರ, ಮೊ:೮೯೦೪೯೯೦೦೨೧ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ
ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ ಅವರು ತಿಳಿಸಿದ್ದಾರೆ. 
Please follow and like us:
error