fbpx

ಶಿಕ್ಷಕರಿಲ್ಲದಿದ್ದರೆ ಈ ಜಗತ್ತಿಗೆ ಅಜ್ಞಾನದ ಅಂಧಕಾರ ಕವಿದಿರುತ್ತಿತ್ತು.

ಕೊಪ್ಪಳ:

 ಹೀಗಾಗಿ ಶಿಕ್ಷಕರು ಅಂದ್ರೆ ಜಗತ್ತನ್ನು ನಿತ್ಯ ಬೆಳಕಿನೆಡೆಗೆ ಕರೆದೊಯುವ ಮಾರ್ಗದರ್ಶಕರು ಎಂದು ನಿವೃತ್ತ ಉಪನ್ಯಾಸಕ   ಎಸ್. ಜಿ. ಹೊಸಬಾವಿ ಹೇಳಿದರು.

ಅವರು ಕೊಪ್ಪಳ ತಾಲೂಕಿನ ಇರಕಲ್ಲಗಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ’ಗುರು ವಂದನಾ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಇವತ್ತಿನ  ನಮ್ಮ ಪೀಳಿಗೆಯ ಮನಸ್ಥಿತಿ ವಿಭಿನ್ನ ಸ್ತರದಲ್ಲಿದೆ. ಹೀಗಾಗಿ ಎರಡು ದಶಕಗಳ ಹಿಂದಿಗಿಂತ ಇವತ್ತಿನ ಶಿಕ್ಷಕರು ಪೀಳಿಗೆಯನ್ನು ಸಮರ್ಥ ದಾರಿಯಲ್ಲಿ ಕರೆದೊಯ್ದು ಅವರ ಭವಿಷ್ಯಕ್ಕೆ ಹೊಳಪು ನೀಡುವ ಜವಾಬ್ದಾರಿ ಹೆಚ್ಚಿನದಾಗಿದೆ ಎಂದರು.
 ಸನ್ಮಾನಿತಗೊಂಡ ಕಾಲೇಜಿನ ಉಪನ್ಯಾಸಕರ ಪರವಾಗಿ ಮಾತನಾಡಿದ ಉಪನ್ಯಾಸಕ   ಆರ್. ಎಸ್. ಸರಗಣಾಚಾರ ಅವರು ’ಶಿಕ್ಷಕ ವೃತ್ತಿ ಅತ್ಯಂತ ಪಾವಿತ್ರ್ಯತೆಯಿಂದ ಕೂಡಿದೆ. ಸಮಾಜ ರೂಪಿಸುವ ಮಹತ್ತರ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ. ನಮಗೆ ಈ ಸನ್ಮಾನಗಳು ಬರೀ ನಿಮಿತ್ಯ ಮಾತ್ರ. ನಮ್ಮ ವಿದ್ಯಾರ್ಥಿಗಳು ಅಪಾರವಾದ ಸಾಧನೆ ಮಾಡಿದಾಗ ಅದೇ ನಮಗೆ ನಿಜವಾದ ಸನ್ಮಾನವಿದ್ದಂತೆ’ ಎಂದರು.
ಈ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ವಿಚಾರಧಾರೆ ಹಾಗೂ ಶಿಕ್ಷಕ ವೃತ್ತಿ ಬಗ್ಗೆ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ   ಎ. ಜಿ. ಶರಣಪ್ಪ ಮಾತನಾಡಿ ಇವತ್ತು ಕಾಲ ಅತ್ಯಂತ ಸ್ಫರ್ಧಾತ್ಮಕವಾಗಿದೆ. ಇಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಲ್ಲಿ ಶಿಸ್ತಿನ ವಿದ್ಯಾಭ್ಯಾಸ, ಜ್ಞಾನದ ಹಂಬಲ ಅವಶ್ಯ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಿಗಾಗಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಉಪನ್ಯಾಸಕರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆ ಮೇಲೆ ಜಿ. ಪಂ. ಸದಸ್ಯರಾದ ಶ್ರೀಮತಿ ಕಸ್ತೂರೆಮ್ಮ ಪಾಟೀಲ್, ಗಾ. ಪಂ. ಅಧ್ಯಕ್ಷರಾದ ಶ್ರೀಮತಿ ಶಿವಮ್ಮ ನಾಯ್ಕ, ನಿವೃತ್ತ ಶಿಕ್ಷಕ ಲಿಂಗಯ್ಯ ಕಲ್ಮಠ, ಶಿವಪ್ಪ ಮನ್ನಾಪೂರ, ತೋಟಪ್ಪ ಪಟ್ಟಣಶೆಟ್ಟರ್ ಹಾಗೂ ಗ್ರಾ. ಪಂ. ನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.ಪ್ರತಿ ವರ್ಷ ಗುರುವಂದನಾ ಕಾರ್ಯಕ್ರಮವನ್ನು ಸ್ವಂತ ಖರ್ಚಿನಲ್ಲಿ ನಡೆಸಿಕೊಡುವ ಗ್ರಾಮದ ಗಣ್ಯರಾದ  ವೀರಬಸಪ್ಪ ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಪ್ರಭಾವತಿ ಪ್ರಾರ್ಥಿಸಿದರು. ಪಾರ್ವತಿ ಓಬಳಬಂಡಿ ಸ್ವಾಗತಿಸಿದರು, ಗಂಗನಗೌಡ ನಿರೂಪಿಸಿದರು. ಜ್ಯೋತಿ ಬೆರಗಿ ವಂದಿಸಿದರು.
Please follow and like us:
error

Leave a Reply

error: Content is protected !!