೧೨ ರಂದು ಧರ್ಮಾಭಿವೃದ್ಧಿ ಸಭೆ

 ಕೊಪ್ಪಳ, – ಅಖಿಲ ಭಾರತ ಮಟ್ಟದಲ್ಲಿ ಅಪಾರ ಭಕ್ತ ಸಮೂಹ ಹೊಂದಿರು ಕಣ್ವಮಠದ ಯಾದಗಿರಿ ಜಿಲ್ಲೆಯ ಸೊರಪೂರ ತಾಲೂಕಿನ ವೀರಘಟ್ಟ ಹುಣಸಿಹೊಳೆಯಲ್ಲಿ ದಿ. ೧೨ರಂದು ಶ್ರೀಮತ್ ಕಣ್ವಮಠೀಯ ಧರ್ಮಾಭಿವೃದ್ಧಿ ಕಾರ್ಯನಿರ್ವಾಹಕ ಸಭೆ ಜರುಗಲಿದೆ.
 ಶ್ರೀಮಟದ ನೂತನ ಪೀಠಾಧಿಪತಿಗಳಾದ ಶ್ರೀಮದ್ ವಿದ್ಯಾವಾರಿಧಿ ತೀರ್ಥ ಶ್ರೀಪಾದಂಗಳು ಸೂಚನೆ ಮೇರೆಗೆ ಸಭೆ ಆಯೋಜಿ ಸಲಾಗಿದೆ. ಕೊಪ್ಪಳ ಮತ್ತು ರಾಯಚೂರ, ಬಳ್ಳಾರಿ, ಯಾದಗಿರಿ, ಗುಲಬರ್ಗಾ, ಬಿಜಾಪೂರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರು ಆಗಮಿಸಲಿದ್ದು.
    ದಿ. ೧೧ ಹಾಗೂ ದಿ. ೧೨ರಂದು ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ಕಣ್ವಮಠೀಯ ಧರ್ಮಾಭಿವೃದ್ಧಿ ಸಭೆ ಜರುಗಲಿದ್ದು, ಸಭೆಯಲ್ಲಿ ವೇದ ವಿದ್ಯಾಪೀಠ, ನಿತ್ಯನೈಮಿತ್ತಿಕ ಪೂಜಾಧಿ ಕೈಂಕಾರ್ಯ ಹಾಗೂ ಅಭಿವೃದ್ಧಿಗಾಗಿ ಸಮರ್ಥ ಜವಾಬ್ದಾರಿ ಆಸಕ್ತಿ ನಿರ್ವಹಿಸುವ ಇಚ್ಛಾಶಕ್ತಿವುಳ್ಳ ಮಠೀಯ ಶಿಷ್ಯರು ಭಾಗಹಿಸುವಂತೆ ಶ್ರೀಮಠ   ತಿಳಿಸಿದೆ.

Leave a Reply