ಪಿಂಚಣಿ ಯೋಜನೆ : ಮೇ.೨೪ ರಂದು ಕಾರ್ಯಾಗಾರ

  ಕೊಪ್ಪಳ ಜಿಲ್ಲೆಯಲ್ಲಿರುವ ವಕ್ಫ್ ಸ್ವತ್ತುಗಳಾದ ಮಸ್ಜೀದ್, ದರ್ಗಾ, ಆಶೋರಖಾನಾ ಇತ್ಯಾದಿ ಧಾರ್ಮಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರಿಗೆ (ಮುಜಾವರ) ರಾಷ್ಟ್ರೀಯ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಲು ಮೇ.೨೪ ರಂದು ಗಂಗಾವತಿಯಲ್ಲಿ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ. 
  ಗಂಗಾವತಿಯ ದಾರೂಲ್ ಉಲೂಮ್ ಖಾದ್ರಿಯಾದಲ್ಲಿ ಅಂದು ಮಧ್ಯಾಹ್ನ ೨ ಗಂಟೆಗೆ  ನಡೆಯಲಿರುವ ಕಾರ್ಯಾಗಾರದಲ್ಲಿ ವೆ ಟೂ ವೆಲ್ತ್ ಎ ಕಾಫಿ ವೆನಚೂರ್ ಸಂಸ್ಥೆಯ ಪ್ರಸಾದ ಎನ್. ಪಾಟೀಲ್ ಅವರು ರಾಷ್ಟ್ರೀಯ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಲಿದ್ದಾರೆ. ಈ ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವ ಮುಜಾವರಗಳು ತಮ್ಮ ೦೨ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ ಸ್ಥಳದ ೦೨ ಛಾಯಾಚಿತ್ರಗಳೊಂದಿಗೆ ಕಾರ್ಯಾಗಾರದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಸ್ತಫಾ ಕಮಾಲ್ ಪಾಶಾ   ತಿಳಿಸಿದ್ದಾರೆ. 
Please follow and like us:

Related posts

Leave a Comment