ಜೆಡಿಎಸ್ ಪ್ರದೀಪಗೌಡರಿಂದ ನಾಮಪತ್ರ ಸಲ್ಲಿಕೆ

ಕೊಪ್ಪಳ,ಏ.೧೪: ನಗರದ ಬನ್ನಿಕಟ್ಟಿ ಬಳಿ ಇರುವ ಗೌರಿಶಂಕರ ದೇವಸಾನದಿಂದ ನಾಳೆ ದಿ.೧೫ ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್ ನಾಮಪತ್ರ ಸಲ್ಲಿಕೆಗೆ ತೇರಳಲಿದ್ದಾರೆ.
ಬೆಳಿಗ್ಗೆ ೯.೩೦ ಕ್ಕೆ ಆರಂಭಗೊಳ್ಳಲಿರುವ ಮೆರವಣಿಗೆಯಲ್ಲಿ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿಯವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಬಿ.ಖಾದ್ರಿ, ತಾಲೂಕಾಧ್ಯಕ್ಷ ಅಂದಪ್ಪ ಮರೆಬಾಳ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್. ರಮೇಶ ಓಣಬಳ್ಳಾರಿ, ಜಿಲ್ಲಾ ಎಸ್.ಟಿ. ಘಟಕದ ಅಧ್ಯಕ್ಷ ಮಲ್ಲಪ್ಪ ಫ.ಬೇಲೇರಿ, ಹಿರಿಯ ಮುಖಂಡ ವಿರೇಶ ಮಹಾಂತಯ್ಯನಮಠ ,ಮಾಜಿ. ಜಿ.ಪಂ. ಸದಸ್ಯ ಹೆಚ್.ಮೋತಿಲಾಲ್, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಹಾಗೂ ಹಿರಿಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

Related posts

Leave a Comment