ಡಾ|| ಕಲಾಂಗೆ ಅಂಜುಮನ್ ಕಮೀಟಿ ಸಲಾಂ.

ಕೊಪ್ಪಳ,ಜು.೩೧: ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ನಿಧನಕ್ಕೆ ಇಲ್ಲಿನ ಅಂಜುಮನ್ ಖಿದ್ಮತೆ ಮುಸ್ಲಮಿನ್ ಕಮೀಟಿ ಅಧ್ಯಕ್ಷ ಎಂ.ಪಾಷಾ ಕಾಟನ್ ನೇತೃತ್ವದ ಅಂಜುಮನ್ ಕಮೀಟಿ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸುವುದರ ಮೂಲಕ ಡಾ|| ಕಲಾಂಗೆ ಅಂತೀಮ ಸಲಾಮ್ ಸಲ್ಲಿಸಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ನಗರದ ಅಂಜುಮನ್ ಕಮೀಟಿಯ ಕಛೇರಿ ಸಭಾಂಗಣದಲ್ಲಿ ಜರುಗಿದ ಪದಾಧಿಕಾರಿಗಳ ಸಭೆ ನಡೆಸಿ ಡಾ|| ಕಲಾಂರವರ ಬಗ್ಗೆ ಮಾತನಾಡಿದ ಕಮೀಟಿ ಅಧ್ಯಕ್ಷ ಎಂ.ಪಾಷಾ ಕಾಟನ್‌ರವರು, ಕಲಾಂರವರ ಗುಣಗಾನವನ್ನು ಮಾಡಿದರು. ಅವರು ಒಬ್ಬ ಮಹಾನ್ ನಾಯಕರಾಗಿದ್ದು, ದೇಶ ಕಂಡ ಅಪರೂಪದ ನಾಯಕ ಕಲಾಂ ಆಗಿದ್ದಾರೆ. ಅವರು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಎಂ.ಪಾಷಾ ಕಾಟನ್ ಹೇಳಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಈ ಸಂದರ್ಭದಲ್ಲಿ ಕಮೀಟಿಯ ಪದಾಧಿಕಾರಿಗಳಾದ ಮಾನ್ವಿ ಪಾಷಾ, ಪೀರಾ ಹುಸೇನ ಚಿಕನ್, ಹಬೀಬ್ ಪಾಷಾ, ಕಬೀರ್ ಸಿಂದೋಗಿ, ಮೆಹಬೂಬ ಅರಗಂಜಿ, ಬಸೀರ್ ಮೆಕಾನಿಕ್, ಮೌಲಾಹುಸೇನ ಸಿಕಲ್ಗಾರ್, ಮಹೆಬೂಬ ಅಯಾಜ್, ಮುಸ್ತಪಾ ೮೫, ಜಾವೀದ್ ಜೆಡ್‌ಪಿ, ಯೂಸುಫ್ ಇಪ್ಪು, ಸಲೀಂ ಪಲ್ಟನ್ ಸೇರಿದಂತೆ ನಿವೇದಿತಾ ಶಾಲೆಯ ಮುಖ್ಯಸ್ಥ ವೆಂಕಟೇಶ ಮತ್ತಿತರರು ಪಾಲ್ಗೊಂಡು ಡಾ|| ಕಲಾಂರವರಿಗೆ ಅಂತಿಮ ಸಲಾಂ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

Please follow and like us:
error