ಜೆಡಿಎಸ್‌ಗೆ ಜನಮತ ದೊರೆತಿದ್ದು ಗೌಡ್ರ ಗೆಲುವು ನಿಶ್ಚಿತ: ರಮೇಶ ನಾಮಕಲ್

ಕೊಪ್ಪಳ, ಮೇ.೦೧: ನಮ್ಮ ಜೆಡಿಎಸ್ ಅಭ್ಯರ್ಥಿ ಕವಲೂರ ಗೌಡ್ರಗೆ ಕ್ಷೇತ್ರದ ತುಂಬೆಲ್ಲಾ ಜನಮತ ದೊರೆತಿದ್ದು ಗೌಡ್ರ ಗೆಲುವು ಖಚಿತವೆಂದು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ರಮೇಶ ನಾಮಕಲ್ ಭವಿಷ್ಯ ನುಡಿದರು. 
ಅವರು ಬುಧವಾರ ತಾಲೂಕಿನ ಕಾಸನಕಂಡಿ ಗ್ರಾಮದಲ್ಲಿ ನೆರೆದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಪ್ರದೀಪಗೌಡ್ರ ಸರಳ ಸಜ್ಜನಿಕೆಗೆ ಕ್ಷೇತ್ರದಲ್ಲಿ ಉತ್ತಮ ಅನುಕಂಪ ಹಾಗೂ ಅವರ ಕಿಲ್ಲೆದರ್ ಮನೆತನ ಕುರಿತು ಜನತೆಗೆ ಗೊತ್ತಿದೆ ಇದರಿಂದ ಕ್ಷೇತ್ರದಲ್ಲಿ ನಿರೀಕ್ಷೆಗೂ ಮಿರಿ ಬಹುಮತ ಪಡೆಯುವ ಮೂಲಕ ಜಯ ಸಾಧಿಸಲಿದೆ. ಕುಮಾರಣ್ಣ ಪ್ರಣಾಳಿಕೆಯಲ್ಲಿರುವ ಅಧಿಕಾರ ದೊರೆತ ೨೪ ಗಂಟೆಗಳಲ್ಲಿ ಎಲ್ಲಾ ಬಾಂಕ್‌ಗಳಲ್ಲಿನ ಸಾಲಮನ್ನಾ ಸೇರಿದಂತೆ, ಮಾಶಾಸನ ಹೆಚ್ಚಳ, ಗರ್ಭೀಣಿಯರಿಗೆ ಐದು ಸಾವಿರ ಧನ ಸಹಾಯ ನೀಡುವುದು ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗಲಿ ಅದಕ್ಕಾಗಿ ಜನತೆ ಜ್ಯಾತ್ಯಾತೀತ ಜನತಾದಳಕ್ಕೆ ಬಾರಿ ಪ್ರಮಾಣದಲ್ಲಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಜೆಡಿಎಸ್ ತಾಲೂಕ ಕಾರ್ಯದರ್ಶಿ ಶೇಖಣ್ಣ ಲಕ್ಷಾಣಿ ಮಾತನಾಡಿ, ಕುಮಾರಸ್ವಾಮಿಯವರ ಜನಪರ ಕಾರ್ಯಗಳನ್ನು ನಮ್ಮ ಗೌಡರು ತಮ್ಮ ಮನೆ ಮನೆ ಬಾಗಿಲಿಗೆ ತಂದು ತಲುಪಿಸಲಿದ್ದಾರೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರದೀಪಗೌಡ ವಿ.ಮಾಲಿ ಪಾಟೀಲ್, ಪಕ್ಷ ಮುಖಂಡರಾದ ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಜೆಡಿಎಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಟಿ.ಟಿ. ಪಾಟೀಲ್, ಚಂದ್ರಶೇಖರಗೌಡ್ರ ವಿ. ಪಾಟೀಲ್, ಮುಖಂಡರಾದ ಎಂ.ಡಿ. ಹುಸೇನ್‌ಮಾಸ್ಟರ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹನುಮೇಶ ಕಡೆಮನಿ, ತಾಲೂಕಾಧ್ಯಕ್ಷ ರಮೇಶ ಬೇಳೂರು, ವಿರುಪಾಕ್ಷಗೌಡ, ಕಳಕನಗೌಡ ಹಲಗೇರಿ, ರಮೇಶ ಹದ್ಲಿ, ಸೋಮಶೇಖರ, ಮಲ್ಲಿಕಾರ್ಜುನ ಶೆಟ್ಟಿ, ಸೋಮಶೇಖರ, ದೇವಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply