ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರು

 ; ಡಾ. ದಯಾನಂದ ಸಾಳುಂಕೆ.
ಕೊಪ್ಪಳ. ನಮ್ಮ ಭಾರತದ ಭವ್ಯಪರಪರೆಯನ್ನು ಜಗತ್ತಿಗೆ ಸ್ವಾಮಿ ವಿವೇಕಾನಂದರು ಪರಿಚಯಸಿದ  ವೀರಸನ್ಯಾಸಿ ಎಂದು ಶ್ರೀ ಗವಿಸಿದ್ದೇಶ್ವರ ಮಹವಿದ್ಯಾಲಯದ ಹಿಂದಿ ಪ್ರಾಧ್ಯಾಪಕರಾದ ಡಾ. ದಯಾನಂದ ಸಾಳುಂಕೆ ಅವರು ನುಡಿದರು. ಅವರು ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ದ್ವಿತೀಯ ಪಿ.ಯು.ಸಿ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.  ಸಂಸ್ಕೃತಿಯನ್ನು ಸಂಸ್ಕರಿಸಿ ಯುವಕರಿಗೆ ಪರಿಚಯಸಿದರು, ಏಕತೆ, ಏಳಿಗೆ, ಹೊಸತನತರುವದಕ್ಕೆ ವಿವೇಕಾನಂದರು ಅಪಾರವಾಗಿ ಶ್ರಮಿಸಿದರು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಧಿಗಳಾಗಿ ಪ್ರಾಧ್ಯಪಕರಾದ  ಶಿವಕುಮಾರ ಕುಕನೂರ,   ಬಸವರಾಜ ಸಸಿಮಠ ಭಾಗವಹಿಸಿ ಮಾತನಾಡಿದರು.  ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳ ಪರವಾಗಿ ಕನಕಪ್ಪ, ಶ್ರೀಧರ, ಶ್ರೀದೇವಿ ಕಿಡಿದಾಳ, ಆಕ್ಷತ ತಮ್ಮ ಅನಿಸಿಕೆ ಹಂಚಿಕೊಂಡರು.  
ಲಕ್ಷ್ಮೀ. ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಹನುಮೇಶ ಆಗೋಲಿ  ಸ್ವಾಗತಿಸಿದರೆ ಕೊನೆಗೆ ಅನ್ನಪೂರ್ಣ. ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶರಣಪ್ಪಗೌಡ ನೆರವೇರಿದರು. 

Please follow and like us:
error

Related posts

Leave a Comment