ಹಳೆಯ ಪಿಂಚಣಿ ಯೋಜನೆ ಜಾರಿಗೆ:ಬೀರಪ್ಪ್ಪ ಅಂಡಗಿ ಚಿಲವಾಡಗಿ ಒತ್ತಾಯ

ಕೊಪ್ಪಳ:ರಾಜ್ಯ ಸರ್ಕಾರವುಎಪ್ರೀಲ್ ೧,೨೦೦೬ರ ನಂತರ ನೇಮಕಗೊಂಡರಾಜ್ಯ ಸರ್ಕಾರಿ ನೌಕರರಿಗೆಜಾರಿಗೆ ಮಾಡಿರುವನೂತನ ಪಿಂಚಣಿಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿಯೋಜನೆಯನ್ನುಕೇಂದ್ರ ಸರ್ಕಾರವು ಜಾರಿಗೊಳಿಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪಅಂಡಗಿ ಚಿಲವಾಡಗಿ ಒತ್ತಾಯಿಸಿದ್ದಾರೆ.
              ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ,ರಾಜ್ಯ ಸರ್ಕಾರವುಎಪ್ರೀಲ್ ೧,೨೦೦೬ ರ ನಂತರ ನೇಮಕಗೊಂಡರಾಜ್ಯ ಸರ್ಕಾರಿ ನೌಕಕರಿಗೆ ನೂತನ ಪಿಂಚಣಿ ಎಂಬ ಹೊಸ ಯೋಜನೆಯನ್ನುಜಾರಿಗೆತಂದಿದೆ.ನೂತನ ಪಿಂಚಣಿಯೋಜನೆಯು ನೌಕಕರಿಗೆ  ಪೂರಕವಾಗಿರದೆ ಮಾರಕವಾಗಿದೆ.ನೂತನ ಪಿಂಚಣಿಯೋಜನೆಯಲ್ಲಿಯೋಜನೆಗೆ ಒಳಪಡುವ ನೌಕರರ ಮೂಲ ವೇತನ ಹಾಗೂ ತುಟ್ಟಿ ಭತ್ಯೆಯ ಶೇಕಡಾ ೧೦ ರಷ್ಟು ನೌಕರರ ವೇತನದಲ್ಲಿಕಟಾವಣೆ ಮಾಡುತ್ತದೆ.ಅದರಂತೆ ಸರ್ಕಾರವುಕೂಡಾ ನೌಕರರಿಗೆ ಶೇಕಡಾ ೧೦ ರಷ್ಟು ಹಣವನ್ನು ಸಂದಾಯ ಮಾಡುತ್ತಿದೆ.ಆದರೆ ನಮ್ಮಒಟ್ಟು ಹಣವನ್ನು ಶೇರು ಪೇಟೆಯಲ್ಲಿ ತೊಡಗಿಸಿ ನಂತರಅಂದರೆ ನಾವು ನಿವೃತ್ತಿಹೊಂದಿದ ನಂತರ ನಮಗೆ ಸೇವಾ ಅವಧಿಯಲ್ಲಿಕಟಾವಣೆಗೊಂಡಒಟ್ಟು ಮೊತ್ತವನ್ನುಅಂದು ಷೇರುಪೇಟೆ ಹೊಂದಿರುವ ಬೆಲೆಯಲ್ಲಿಕಟಾವಣೆಯಒಟ್ಟು ಮೊತ್ತದ ಶೇಕಡಾ ೬೦ ರಷ್ಟು ಹಣವನ್ನು ಮಾತ್ರನೀಡುತ್ತಾರೆ.ಉಳಿದ ಶೇಕಡಾ ೪೦ ರಷ್ಟು ಹಣದಿಂದ ಪಿಂಚಣಿ ನೀಡುತ್ತಾರೆ.ನೀಡಲಾಗುವ ಶೇಕಡಾ ೬೦ ರಷ್ಟು ಹಣಕ್ಕೆ ಶೇಕಡಾ ೩೫ ರಷ್ಟು ತೆರಿಗೆಯನ್ನು ಪಾವತಿಸಬೇಕು.ಇದರಿಂದ ನಮಗೆ ಲಾಭವಾಗುತ್ತದೆಯೋಅಥವಾ ನಷ್ಟವಾಗುತ್ತದೆಯೋ ಎಂಬ ಪ್ರಶ್ನಗೆ ಸ್ಪಷ್ಟವಾದಯಾವುದೇ ಮಾಹಿತಿಯಿಲ್ಲ.ರಾಜ್ಯ ಸರ್ಕಾರವುಯೋಜನೆಯನ್ನುಜಾರಿಗೆತಂದು ೯ ವರ್ಷ ಕಳೆದರೂ ಕೂಡಾಯೋಜನೆಯ ಬಗ್ಗೆ ನೌಕರರಿಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿರುವುದಿಲ್ಲ.
ಇತ್ತಿಚೇಗೆ ಬಂದ ಹೊಸ ಆದೇಶದಂತೆ ಸೇವಾ ಶುಲ್ಕ ಪ್ರತಿಯೊಂದು ವ್ಯವಹಾರಕ್ಕೆ ೦.೦೧ ರಷ್ಟು ಹಣವನ್ನುಕಟಾವಣೆ ಮಾಡುವರು.ಉದಾ: ಮೂಲ ವೇತನ ೧೬ಸಾವಿರ ಇದ್ದರೆ ೧೯೨ರೂ ಕಟಾವಣೆಯಾಗುತ್ತದೆ.ಇಲ್ಲಿಯವರೆಗೆ ಸುಮಾರು೮೦೦ ಎನ್.ಪಿ.ಎಸ್.ನೌಕರರು ಮೃತರಾಗಿದ್ದುಇಲ್ಲಿಯವರೆಗೆಅವರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಸಿಕ್ಕಿಲ್ಲ.
ಆರ್ಥಿಕ ಹೊರೆ ಎಂಬ ವಿಷಯವನ್ನು ಸರ್ಕಾರ ವ್ಯಕ್ತಪಡಿಸುತ್ತದೆ.ಆದರೆ ಆರ್ಥಿಕ ಹೊರೆಯ ಪ್ರಶ್ನೆ ಬರುವುದಿಲ್ಲ.ನೌಕರನ ವೇತನದ ಶೇಕಡಾ ೧೦ ರಷ್ಟು ಹಾಗೂ ಅಷ್ಟೇ ಹಣವನ್ನು ಸರ್ಕಾರವುಕೂಡಾನೀಡುವುದರಿಂದಆರ್ಥಿಕ ಹೊರೆಎಂಬುವುದು ಬರುವುದಿಲ್ಲ.ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವಉದ್ದೇಶ ಸರ್ಕಾರದ್ದಾಗಿದೆ. ೭ನೇ ವೇತನಆಯೋಗದಅಧ್ಯಕ್ಷರಾದ ಎ.ಕೆ.ಮಾತೂರಅವರ ನೇತೃತ್ವದ ಸಮಿತಿಯು.ಎನ್.ಪಿ.ಎಸ್.ಯೋಜನೆಯು ಭದ್ರತೆಇಲ್ಲದಯೋಜನೆಯಾಗಿದೆ.ಅಲ್ಲದೇ ಕುಟುಂಬ ಪಿಂಚಣಿಯ ಬಗ್ಗೆ ಪ್ರಸ್ತಾಪವಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.ಹಳೆಯ ಪಿಂಚಣಿಯೋಜನೆಗೆ ಒಳಪಡುವ ನೌಕರರಿಂದಯಾವುದೇ ವಂತಿಕೆಯನ್ನು ಪಡೆಯುವುದಿಲ್ಲ,ಪಿಂಚಣಿಗ್ಯಾರಂಟಿಇದೆ,ಪಿಂಚಣಿಯನ್ನುಅವರಕೊನೆಯ ವೇತನದ ಶೇಕಡಾ ೫೦ ರಷ್ಟು ಮೊತ್ತವನ್ನು ನಿಗಧಿ ಮಾಡುತ್ತಾರೆ.ಪಿಂಚಣಿಯನ್ನು ಸರ್ಕಾರವು ನಿಗಧಿ ಪಡಿಸುತ್ತದೆ.ಕುಟುಂಬ ಪಿಂಚಣಿಯೋಜನೆಇದೆಆದರೆ ನೂತನ ಪಿಂಚಣಿಯೋಜನೆಗೆ ಒಳಪಡುವ ನೌಕರರಿಂದ ಮೂಲವೇತನ ಹಾಗೂ ತುಟ್ಟಿ ಭತ್ಯೆಯ ಶೇಕಡಾ ೧೦ರಷ್ಟು ವಂತಿಕೆ,ಪಿಂಚಣಿಗ್ಯಾರಂಟಿಇಲ್ಲಾ,ಪಿಂಚಣಿ ಷೇರುಪೇಟೆಯಲ್ಲಿಇದ್ದಂತೆ,ಪಿಂಚಣಿಯನ್ನು ಷೇರು ಮಾರುಕಟ್ಟೆ ನಿಗಧಿ ಮಾಡುತ್ತದೆ,ಯಾವುದೇಕುಟುಂಬ ಪಿಂಚಣಿಯ ಬಗ್ಗೆ ಪ್ರಸ್ತಾಪವಿಲ್ಲ. 
೫ ವರ್ಷಗಳ ಆಳ್ವಿಕೆ ಮಾಡುವಜನಪ್ರತಿನಿದಿಗಳಿಗೆ ಪಿಂಚಣಿಇದೆ ೩೫ ವರ್ಷ ಸೇವೆ ಮಾಡುವ ಸರಕಾರಿ ನೌಕರರಿಗೆ ಪಿಂಚಣಿ ನೀಡದಿರುವುದುಖಂಡನೀಯ ಸಂಗತಿಯಾಗಿದೆ.ಡಿಸೆಂಬರ್ ೧೯,೨೦ರಂದುಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರರಾಸಾಯನಿಕಸಚಿವರಾದಅನಂತಕುಮಾರರವರು ನೂತನ ಪಿಂಚಣಿಯೋಜನೆಯ ರದ್ದುಗೊಳಿಸುವ ಕುರಿತು ಪ್ರಧಾನಮಂತ್ರಗಳ ಜೊತೆಯಲ್ಲಿ ಮಾತನಾಡುವ ಭರವಸೆಯನ್ನು ನೀಡಿದ್ದಾರೆ.
ಭಾರತದೇಶದಎರಡುರಾಜ್ಯಗಳಾದ ಪಶ್ಚಿಮಬಂಗಾಳ ಮತ್ತುತ್ರಿಪುರಾದಲ್ಲಿ ಮಾತ್ರಇನ್ನೂಎನ್.ಪಿ.ಎಸ್.ಯೋಜನೆಯನ್ನು ಜಾರಿಗುಳಿಸಿರುವುದಿಲ್ಲ.ಈಯೋಜನೆಗೆ ಒಳಪಡುವ ನೌಕರರ ಹಣಕ್ಕೆ ಕನಿಷ್ಠ ಮಟ್ಟದ ಭದ್ರತೆಯುಕೂಡಾಇಲ್ಲವಾಗಿದ್ದರಿಂದಕೂಡಲೆಕೇಂದ್ರಸರ್ಕಾರವು ನೂತನ ಪಿಂಚಣಿಯೋಜನೆಯನ್ನು ರದ್ದುಗೊಳಿಸಿ,ಹಳೆಯ ಪಿಂಚಣಿಯೋಜನೆಯನ್ನು ಜಾರಿಗೊಳಿಸಿ ರಾಜ್ಯದಲ್ಲಿರುವ೯೪ ಸಾವಿರಎನ್.ಪಿ.ಎಸ್.ನೌಕರರ ಹಿತವನ್ನುಕಾಪಾಡಬೇಕು ಹಾಗೂ ಯೋಜನೆಯು ಎಪ್ರೀಲ್ ೨ ರಂದುಜಾರಿಗೆ ಬಂದಿರುವುದರಿಂದ ಅಂದು ರಾಜ್ಯಾಧ್ಯಂತಹಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡುವುದರ ಮೂಲಕ ತಾಲೂಕನಲ್ಲಿ ತಹಸಿಲ್ದಾರವರಿಗೆ,ಜಿಲ್ಲೆಯಲ್ಲಿ ಜಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುತ್ತದೆ.ಎಪ್ರೀಲ್ ೧೨ ರಂದು ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ರಾಜ್ಯ ಮಟ್ಟದಒಂದು ದಿನದಧರಣಿಯನ್ನು ನಡೆಸಲಾಗುವುದು.ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸಂಘಟನೆಯಾದನಂತರದೆಹಲಿಯಜಂತರಮಂತರದಲ್ಲಿಧರಣಿಮಾಡುವುದರ ಮೂಲಕ ಪ್ರಧಾನಮಂತ್ರಿಗಳಿಗೆ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಡ ಮಾಡಲಾಗುವುದುಎಂದು ಹೇಳಿದರು.
   ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ ಮಾತನಾಡಿ,ನೂತನ ಪಿಂಚಣಿಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘವನ್ನು ಸರಕಾರಿ ನೌಕರರ ಸಂಘದ ವೃಂಧ ಸಂಘವಾಗಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬಿ.ಪಿ.ಮಂಜೇಗೌಡವರು ಪರಿಗಣಿಸಿದ್ದು, ಸಂಘದಿಂದ ಈಗಾಗಲೇ ದೆಹಲಿ ಚೆಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಎನ್.ಪಿ.ಎಸ್.ಯೋಜನೆಯನ್ನು ರದ್ದಿಗಾಗಿ ಹಮ್ಮಿಕೊಳ್ಳುವ  ಹೋರಾಟಕ್ಕೆ ಸರ್ಕಾರಿ ನೌಕರರ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
         ಪತ್ರಿಕಾಗೋಷ್ಠಿಯಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಶಿವಪ್ಪ ಜೋಗಿ,ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯ ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಶೇಖರ ಹೆಳವರ.ಜಿಲ್ಲಾಧ್ಯಕ್ಷರಾದ ಬಾಳಪ್ಪ ಕಾಳೆ,ಜಿಲ್ಲಾ ಉಪಾಧ್ಯಕ್ಷರಾದ ಹನುಮಂತಪ್ಪ ಕುರಿ ಹಾಜರಿದ್ದರು.
Please follow and like us:
error