fbpx

ರಂಗೋಲಿ ಮೂಲಕ ಕನಕದಾಸರನ್ನು ಸ್ಮರಿಸಿದ ಮಾತೆಯರು.

ಭಾಗ್ಯನಗರ-30- ಇಲ್ಲಿನ ಪಯೋನಿಯರ್ ಪಬ್ಲಿಕ್ ಸ್ಕೂಲ್‌ನಲ್ಲಿ ಕನಕದಾಸರ ಜಯಂತಿ ಹಾಗೂ ದೀಪೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.  ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳ ತಾಯಂದಿರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ೨೫ಸ್ಪರ್ಧಿಗಳು ಸುಂದರ ರಂಗೋಲಿಗೆ ಚಿತ್ತಾಕರ್ಷಕ ಬಣ್ಣಗಳನ್ನು ತುಂಬಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.  ಉಪ್ಪು, ಮರಳು ಮುಂತಾದ ಪ್ರಾಕೃತಿಕ ವಸ್ತುಗಳನ್ನು ಬಳಸಿ ಶಂಖ, ಚಕ್ರ, ದೀಪ, ಚಿಟ್ಟೆ ಮುಂತಾದ ಚಿತ್ರಗಳು ನೋಡುಗರ ಕಣ್ಮನ ಸೆಳೆದವು.  ಮೊದಲ ಬಹುಮಾನವನ್ನು ವಂದನಾ ಪವಾರ್, ಎರಡನೇ ಬಹುಮಾನವನ್ನು ಸಂಗೀತಾ ಕಬಾಡಿ ಮತ್ತು  ಮೂರನೇ ಬಹುಮಾನವನ್ನು ಮಧು ದಲ್ಬಂಜನ್ ಪಡೆದರು.  ಸಂಸ್ಥೆಯ ಶಿಕ್ಷಕ ವೃಂದದವರು ಪುಷ್ಪ ರಂಗೋಲಿಯನ್ನು ರಚಿಸಿದರು.  ಸಂಜೆ ನಡೆದ ದೀಪೋತ್ಸವದಲ್ಲಿ ಭಾರತ ಭೂಪಟವನ್ನು ರಚಿಸಿ ದೀಪಗಳಿಂದ ಅಲಂಕರಿಸಲಾಯಿತು.  ಶಿಕ್ಷಕ ಸಮೂಹ ಪ್ರಾರ್ಥಿಸಿ, ವಂದಿಸಿದರು.  ಮಾಧವಿ ಪಾಟೀಲ್ ನಿರೂಪಿಸಿ ,ಶ್ರೀದೇವಿ ಕಡಕೋಳ್ ವಂದಿಸಿದರು.  ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಎ.ಕಬ್ಬೇರ್, ಸಹ ಕಾರ್ಯದರ್ಶಿ ಉಮೇಶ್ ವೈ.ಕಬ್ಬೇರ್, ಖಜಾಂಚಿ ಲಕ್ಷ್ಮಣಸಾ ನಿರಂಜನ್, ನಿರ್ದೇಶಕರಾದ ವಿಜಯಲಕ್ಷ್ಮಿ

ಇಟ್ಟಂಗಿ, ರೇಣುಕಾ ಪ್ರಸಾದ್ ಹಾಗೂ ಪ್ರಾಂಶುಪಾಲ ಆರ್.ದತ್ತಾತ್ರೇಯ ಸಾಗರ್ ಪಾಲ್ಗೊಂಡಿದ್ದರು.

Please follow and like us:
error

Leave a Reply

error: Content is protected !!