You are here
Home > Koppal News > ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾಥಿಗಳಿಗೆ ಬಹುಮಾನ.

ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾಥಿಗಳಿಗೆ ಬಹುಮಾನ.

ಕೊಪ್ಪಳ ಡಿ,22 ರಾಜ್ಯ ಸಹಕಾರ ಮಹಾ ಮಂಡಳ, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್,ಸಹಕಾರ ಇಲಾಖೆ, ಸ್ವಾಮಿವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ, ಶ್ರೀಮತಿ ಶಕುಂತಲಾ ಹೆಚ್. ಹುಡೇಜಾಲಿಮಠ. ರವರು ವಹಿಸಿದ್ದರು.
    ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಫರ್ದೆಯಲ್ಲಿ ಪ್ರಥಮ ಸ್ಥಾನವನ್ನು ಕುಮಾರಿ ಅಕ್ಷತಾ ಪಿ. ನಂದಿಕೋಲ್‌ಮಠ. ೯ ನೇ ತರಗತಿ.  ಅನ್ನದಾನೇಶ್ವರ ಪ್ರೌಢ ಶಾಲೆ, ಹನಮಸಾಗರ. ದ್ವಿತೀಯ ಸ್ಥಾನವನ್ನು ಕುಮಾರಿ ಸುಮಯ್ಯಾ ಬೇಗಂ. ೧೦ ನೇ ತರಗತಿ. ಎಂ.ಎನ್.ಎಂ. ಪ್ರೌಢ ಶಾಲೆ, ವಿದ್ಯಾಗಿರಿ
    ಕಾಲೇಜು ವಿದ್ಯಾರ್ಥಿಗಳಿಗೆ ಜರುಗಿದ ಚರ್ಚಾ ಸ್ಫರ್ಧೆಯಲ್ಲಿ ಸಹಕಾರ ವಿಷಯದ ಪರವಾಗಿ ಪ್ರಥಮ ಸ್ಥಾನವನ್ನು ಕುಮಾರಿ ದ್ರಾಕ್ಷಾಯಣಿ ಟಿ.ಕೆ. ಪಿ.ಯು.ಸಿ. ಪ್ರಥಮ ವರ್ಷ. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್ ಕೊಪ್ಪಳ. ದ್ವಿತೀಯ ಸ್ಥಾನವನ್ನು ಕುಮಾರ ಮುತ್ತಣ್ಣ ಶ್ಯಾಡಲಗೇರಿ. ಪಿ.ಯು.ಸಿ. ಪ್ರಥಮ ವರ್ಷ. ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜು, ಕೊಪ್ಪಳ. ಹಾಗೂ ತೃತೀಯ ಸ್ಥಾನವನ್ನು ಕುಮಾರಿ ದೀಪಾ ಬಿ.ಸಿ. ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗ. ಶ್ರೀ ಸ್ವಾಮಿವಿವೇಕಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜು, ಕೊಪ್ಪಳ., ಗಂಗಾವತಿ. ಹಾಗೂ ತೃತೀಯ ಸ್ಥಾನವನ್ನು ಕುಮಾರ ಯಮನೂರ ಡಿ. ಬುರಡಿ. ೯ ನೇ ತರಗತಿ.
ಆದರ್ಶ ವಿದ್ಯಾಲಯ, ಕನಕಗಿರಿ. ಕುಮಾರಿ ಭೀಮಮ್ಮ ಎಸ್. ಸರಕಾರಿ ಪ್ರೌಢ ಶಾಲೆ, ಯರಡೋಣ. 
ಭುವನೇಶ್ವರಿ ರಾಜಶೇಖರ ಅಂಗಡಿ. ಶಾರದಾ ಪ್ರೌಢ ಶಾಲೆ, ಕೊಪ್ಪಳ ಇವರು ಸಮಾಧಾನಕರ ಬಹುಮಾನ
ಪಡೆದಿರುತ್ತಾರೆ.
    ಚರ್ಚಾ ಸ್ಫರ್ದೆಯಲ್ಲಿ ವಿಷಯದ ವಿರೋಧವಾಗಿ ಪ್ರಥಮ ಸ್ಥಾನವನ್ನು ಕುಮಾರಿ ಬನಶಂಕರಿ. ಪಿ.ಯು.ಸಿ. ಪ್ರಥಮ ವರ್ಷ. ಬೆಸ್ಟ್ ಪಿ.ಯು. ಕಾಲೇಜು, ಕನಕಗಿರಿ. ದ್ವಿತೀಯ ಸ್ಥಾನವನ್ನು ಕುಮಾರಿ ಸುಧಾ ಎಸ್.ಎ. ಪಿ.ಯು.ಸಿ. ದ್ವಿತೀಯ ವರ್ಷ. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಕೊಪ್ಪಳ. ಹಾಗೂ ತೃತೀಯ ಸ್ಥಾನವನ್ನು ಕುಮಾರ ವೀರೇಶ ಹನಮಂತಪ್ಪ. ಪ್ರಥಮ ಪಿ.ಯು.ಸಿ. ಲಾಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು, ಗಂಗಾವತಿ.
    ಕುಮಾರಿ ದ್ರಾಕ್ಷಾಯಣಿ ಟಿ.ಕೆ. ಹಾಗೂ ಕುಮಾರಿ ಬನಶಂಕರಿ. ಇವರು ಚರ್ಚಾ ಸ್ಫರ್ದೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ರಾಜ್ಯ ಮಟ್ಟದ ಚರ್ಚಾ ಸ್ಫರ್ದೆಗೆ ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾಗಿರುತ್ತಾರೆ.
ಬಹುಮಾನ ವಿತರಣಾ ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್  ನಿರ್ದೇಶಕರುಗಳಾದ, ನೀಲಕಂಠಯ್ಯ ಹಿರೇಮಠ, ಗವಿಸಿದ್ದೇಶ ಹೆಚ್. ಹುಡೇಜಾಲಿಮಠ, ತೋಟಪ್ಪ ಕಾಮನೂರು, ಕೆ. ಮುನಿಯಪ್ಪ. ಮುಖ್ಯ ಆಡಳಿತ ಅಧಿಕಾರಿಗಳು, ಕೊಪ್ಪಳ ವೈಧ್ಯಕೀಯ ಆರೋಗ್ಯ ವಿಜ್ಞಾನ ಸಂಸ್ಥೆ, ಕೊಪ್ಪಳ, ಬಸವರಾಜ ಪಾಟೀಲ ಕೊಂಕಲ್. ಉಪನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕ-ಪರಿಶೋಧನಾ ಇಲಾಖೆ, ಕೊಪ್ಪಳ., ಎಸ್.ಕೆ. ಸಿದ್ನೆಕೋಪ್ಪ. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕೊಪ್ಪಳ, ವೀರೇಶ ಕೊಪ್ಪಳ. ಉಪನ್ಯಾಸಕರು, ಸ್ವಾಮಿವಿವೇಕಾನಂದ ಪದವಿ ಪೂರ್ವ ಕಾಲೇಜು, ಕೊಪ್ಪಳ., ಎಲ್.ಬಿ. ವಿವೇಕಿ ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಕೊಪ್ಪಳ, ಶರಣಬಸಪ್ಪ ಕಾಟ್ರಳ್ಳಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಸಹಕಾರ ಯೂನಿಯನ್ ನಿ, ಕೊಪ್ಪಳ, ರಾಜಶೇಖರ ಹೊಸಮನಿ, ವ್ಯವಸ್ಥಾಪಕರು, ಜಿಲ್ಲಾ ಸಹಕಾರ ಯೂನಿಯನ್ ನಿ, ಕೊಪ್ಪಳ, ಇವರುಗಳು ಉಪಸ್ಥಿತರಿದ್ದರು.

Leave a Reply

Top