ಬಾಲಕ ಕಾಣೆ ಪತ್ತೆಗೆ ಸಹಕರಿಸಿ

ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದ ರಾಜೇಶ ತಂದೆ ಮಲ್ಲಪ್ಪ ಬಿಚಗತ್ತಿ (೧೪) ಎಂಬ ಬಾಲಕ ಬೆಳಗಾವಿಗೆ ಹೋಗುತ್ತೇನೆಂದು ಹೇಳಿ ಹೊಸಳ್ಳಿ ಗ್ರಾಮದ ತಮ್ಮ ಮನೆಯಿಂದ ಹೋದವನು ಕಾಣೆಯಾಗಿದ್ದು, ಬಾಲಕನ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ್ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

 ಬಾಲಕ ರಾಜೇಶ, ಬೆಳಗಾವಿಯಲ್ಲಿ ಸುಮಾರು ೨-೩ ವರ್ಷದಿಂದ ತಮ್ಮ ಮಾವ ಗೋಪಾಲನ ಮನೆಯಲ್ಲಿ ಇದ್ದು, ಕಳೆದ ಅಕ್ಟೋಬರ್-೧೭ ರಂದು ಜಿಲ್ಲೆಯ ಹೊಸಳ್ಳಿಗೆ ಬಂದಿದ್ದ. ಕಳೆದ ಅಕ್ಟೋಬರ್-೨೦ ರಂದು ಬೆಳಗಾವಿಗೆ ಹೋಗುತ್ತೇನೆ ಎಂದು ಹೇಳಿ ಹೊಸಳ್ಳಿಯ ತಮ್ಮ ಮನೆಯಿಂದ ಹೋದವನು ನಾಪತ್ತೆಯಾಗಿದ್ದಾನೆ. ಕಾಣೆಯಾದ ವ್ಯಕ್ತಿಯ ಹೆಸರು ಮತ್ತು ಚಹರೆ ವಿವರ ಇಂತಿದೆ. ರಾಜೇಶ ತಂದೆ ಮಲ್ಲಪ್ಪ ಬಿಚಗತ್ತಿ (೧೪) ಸಾ|| ಹೊಸಳ್ಳಿ ತಾ||ಜಿ|| ಕೊಪ್ಪಳ, ಜಾತಿ : ಕುರುಬರ, ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾನೆ, ಎತ್ತರ ೪’ ೫’, ದುಂಡು ಮುಖ, ಸಾದಾರಣ ಮೈಕಟ್ಟು, ಸಾದಾಗಪ್ಪು ಮೈಬಣ್ಣ, ಈ ಹುಡುಗನು ಕೆಲವು ಚಿತ್ರನಟರ ಮಿಮಿಕ್ರಿ ಮಾಡುತ್ತಾನೆ, ಕಪ್ಪು ಬಣ್ಣದ ಬಿಳಿ ಗೀರಿನ ಟಿ.ಶರ್ಟ್, ನೀಲಿ ಜೀನ್ಸ ಪ್ಯಾಂಟ್ ಧರಿಸಿರುತ್ತಾನೆ.  ಈ ಚಹರೆಯುಳ್ಳ ಬಾಲಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಮುನಿರಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಎಸ್.ಪಿ. ೦೮೫೩೯-೨೩೦೧೧೧, ಡಿ.ಎಸ್.ಪಿ. ೦೮೫೩೯-೨೨೨೪೩೩, ಸಿ.ಪಿ.ಐ. ಗ್ರಾಮೀಣ ವೃತ್ತ ಕೊಪ್ಪಳ ೦೮೫೩೯-೨೨೧೩೩೩, ಪಿ.ಎಸ್.ಐ. ಮುನಿರಾಬಾದ್ ೦೮೫೩೯-೨೭೦೩೩೩ ಈ ದೂರವಾಣಿಗಳಿಗೆ ಸಂಪರ್ಕಿಸುವಂತೆ  ತಿಳಿಸಿದೆ. 

Leave a Reply