ಕುಷ್ಟಗಿಯ ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

 ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಹೇಮಾವತಿ @ ಹನುಮವ್ವ ಗದಾರಿ (೪೧) ಎಂಬ ಮಹಿಳೆಯು ಕುಷ್ಟಗಿಗೆ ಗೌಂಡಿ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಗೆ ಬಾರದೇ ಎಲ್ಲಿಯೋ ಕಾಣಿಯಾಗಿದ್ದು, ಈ ಮಹಿಳೆಯ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ಇಂತಿದೆ : ಎತ್ತರ ೦೫ ಫೀಟು, ಸಾದಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ, ಚಾಕಲೇಟ ಕಲರಿನ ಸೀರೆ ಕೆಂಪು ಬಣ್ಣದ ಜಂಪರ್ ತೊಟ್ಟಿದ್ದು, ಕೊರಳಲ್ಲಿ ಕರಿಮಣಿ ಸರದಲ್ಲಿ ಎರಡು ತಾಳಿ ಹಾಗೂ ಎರಡು ಕಿವಿಯಲ್ಲಿ  ಕಡ್ಡಿ ಹಾಕಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. 
ಈ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ, ಸಾರ್ವಜನಿಕರು ಕೊಪ್ಪಳ ಎಸ್.ಪಿ. ಮೊ.೯೪೮೦೮೦೩೭೦೧, ೦೮೫೩೯-೨೩೦೧೧೧, ಡಿಎಸ್‌ಪಿ ಗಂಗಾವತಿ ಮೊ.೯೪೮೦೮೦೩೭೨೧, ೦೮೫೩೩-೨೩೦೮೫೩, ಸಿಪಿಐ ಕುಷ್ಟಗಿ ಮೊ.೯೪೮೦೮೦೩೭೩೨, ೦೮೫೩೬-೨೬೭೦೩೩, ಪಿಎಸ್‌ಐ ಕುಷ್ಟಗಿ ಮೊ.೯೪೮೦೮೦೩೭೫೭, ೦೮೫೩೬-೨೬೭೦೩೩ ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಕುಷ್ಟಗಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Related posts

Leave a Comment