ಅತ್ಯಾಚಾರವೆಸಗಿ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ

 ಗಂಗಾವತಿ ತಾಲೂಕು ಮರಕುಂಬಿ ಗ್ರಾಮದ ಮರಿಯಮ್ಮ ಎಂಬ ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿ ಅದೇ ಗ್ರಾಮದ ದುರುಗಪ್ಪ ತಾಯಿ ದುರುಗಮ್ಮ ಗುಡಿಸಾಲಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಪ್ಪಳದ ಒಂದನೆ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.
  ಹನುಮಂತ ದೇವರ ಗುಡಿಯ ಹಿಂಭಾಗದಲ್ಲಿ ಬೆತ್ತಲೆ ಮಾಡಿ ಸಂಭೋಗ ಮಾಡಿದ ದುರುಗಪ್ಪ ತಾಯಿ ದುರಗಮ್ಮ ಗುಡಿಸಲಿ ಇತನಿಗೆ ೧ನೇ ತ್ವರಿತ ವಿಲೇವಾರಿ ನ್ಯಾಯಾಲಯ ಆರೋಪಿಗೆ ೮ ವರ್ಷ ಕಠಿಣ ಶಿಕ್ಷೆ, ರೂ.೫೦೦೦/- ದಂಡ ವಿಧಿಸಿದೆ.
ಮರಕುಂಬಿ ಗ್ರಾಮದಲ್ಲಿ ಕಳೆದ ೨೦೧೧ ರ ಡಿಸೆಂಬರ್ ೦೬ ರಂದು ಬೆಳಗಿನ ಜಾವ ೪.೦೦ ಗಂಟೆಯ ಸುಮಾರಿಗೆ ಪೀರ ದೇವರ ಹಬ್ಬದ ನಿಮಿತ್ಯದ ಕತಲ್ ರಾತ್ರಿಯ ದಿವಸ ದುರುಗಪ್ಪ ಎಂಬಾತ ಅದೇ ಗ್ರಾಮದ ಮರಿಯಮ್ಮಳನ್ನು ಅದೇ ಗ್ರಾಮದ ಹನುಮಂತ ದೇವರ ಗುಡಿಯ ಹಿಂಭಾಗದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ೧ನೇ ತ್ವರಿತ ವಿಲೇವಾರಿ ನ್ಯಾಯಾಧೀಶರಾದ ಲೆಕ್ಕದಪ್ಪ ಜಂಬಗಿ ಅವರು, ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ಭಾ.ದ.ಸ. ಕಲಂ: ೩೭೬ ರ ಅಡಿ ೮ ವರ್ಷ ಕಠಿಣ ಶಿಕ್ಷೆ ಮತ್ತು ರೂ.೫೦೦/- ದಂಡ, ದಂಡ ಕೊಡಲು ತಪ್ಪಿದಲ್ಲಿ ೬ ತಿಂಗಳ ಸಾದಾ ಶಿಕ್ಷೆ. ಹಾಗೂ ಭಾ.ದ.ಸ. ಕಲಂ: ೩೦೨ ರ ಅಪರಾಧಕ್ಕಾಗಿ ಜೀವಾವದಿ ಶಿಕ್ಷೆ, ರೂ.೧೦,೦೦೦/- ದಂಡ. ದಂಡ ಕೊಡಲು ತಪ್ಪಿದಲ್ಲಿ ೧ ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಲ್.ಎಸ್. ಸುಳ್ಳದ   ಇವರು ವಾದಿಸಿದ್ದರು.

Leave a Reply