೨೦೧೩-೧೪ನೇ ಸಾಲಿನ ಎನ್.ಎಸ್.ಶಿಬಿರ ಉದ್ಘಾಟನೆ:

 ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ೨೦೧೩-೧೪ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಶ್ರೀಮಲಿಯಮ್ಮ ದೇವಸ್ಥಾನದಲ್ಲಿ ಉದ್ಘಾಟಿಸಲಾಯಿತು.
ಶಿಬಿರವನ್ನು ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಬಸವರಾಜ ಪೂಜಾರ ರವರು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಷೆ ಬೆಳೆಸುವುದರ ಜೊತೆಗೆ ಆಲೋಚಿಸುವ ಶಕ್ತಿಯನ್ನು ಶಿಬಿರಗಳು ಬೆಳೆಸುತ್ತವೆ. ಸ್ವಯಂ ಪ್ರರಿತರಾಗಿ ತಮ್ಮ ಕೆಲಸ ಕಾರ್ಯಗಳನ್ನ ಮಾಡುವ ಶಕ್ತಿ ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ವಿಕಾಸನ ಮಾಡುತ್ತದೆ. ಇಂತಹ ಶಿಬಿರಗಳು ಯಶಸ್ಸಿನ ದಾರಿ ದೀಪಗಳಾಗಿ ವಿದ್ಯಾರ್ಥಿಗಳಲ್ಲಿ ಬದಲಾವಣೆಯನ್ನು ತರುತ್ತವೆ. ಶಿಬಿರಗಳಲ್ಲಿ ಸಹಬೋಜನಾ, ಸಹಬಾಗೀತ್ವ, ಇತ್ಯಾದಿಗಳನ್ನು ಕಲಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎನ್.ಸಿ.ಸಿ ಕಮಾಂಡೆಂಟ್ ಲೆಪ್ಟ್‌ನೆಂಟ್ ಡಾ.ದಯಾನಂದ ಸಾಳುಂಕೆಯವರು ಶಿಬಿರಗಳಲ್ಲಿ ಏಕತೆ ಬೆಳಸುವುದರ ಜೊತೆಗೆ ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಬೆಳೆಸುತ್ತವೆ. ಕೆಲಸ ಮಾಡುವ ಪ್ರಜ್ಞೆಯನ್ನು ಬೆಳೆಸಿ ತಾಳ್ಮೆ, ಏಕಾಗ್ರತೆ, ಒಳ್ಳೆಯ ಗುಣಗಳನ್ನು ಬೆಳೆಸುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ   ಪರೀಕ್ಷಿತರಾಜ ಅವರು ಶಿಬಿರಗಳಿಂದ ಸಹೋದರತ್ವವನ್ನು ಬೆಳೆಸಿ ಮಾನಸಿಕವಾಗಿ ಸದೃಢಗೊಳ್ಳುವಂತೆ ಮಾಡುತ್ತದೆ. ಬೌದ್ಧಿಕವಾಗಿ ಬೆಳವಣಿಗೆಯನ್ನು ಮಾಡುತ್ತದೆ. ನಿಷ್ಠೆಯನ್ನು ಸಹ ಬೆಳೆಸುತ್ತದೆ ಎಂದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು

ವೇದಿಕೆ ಮೇಲೆ ಪ್ರಾಧ್ಯಾಪಕರಾದ  ಬಿ.ಶ್ರೀನಿವಾಸ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಿ.ಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಯಮನೂರಪ್ಪ ಸ್ವಾಗತಿಸಿದರೆ, ಕೊನೆಗೆ ಮಾರುತಿ ಇಂದ್ರಮ್ಮನವರ ವಂದಿಸಿದರು. ಹನುಮಂತ ವಾಲ್ಮೀಕಿ ಮತ್ತು ಹನುಮನಗೌಡ ಕಾರ್ಯಕ್ರಮ ನಿರೂಪಿಸಿರು. ಈ ಶಿಬಿರದಲ್ಲಿ ೫೦ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Leave a Reply