ಗಿಡಗಂಟೆಗಳ ಕರುಳಿನ ಹಾಡು- ದಿ.ಗವಿಸಿದ್ಧ ಎನ್.ಬಳ್ಳಾರಿ

ಹಸಿದ ಒಡಲುಗಳಿಗೆ ಕುಸಿದ ಮನ ಮನೆಗಳಿಗೆ ಕೊರಳ ದನಿಗಳಿಗೆ ಓಗೂಡಿ, ಭೂಶೃಂಗ ಸಭೆಯ ಶೋಭೆಯ ಮೇಲೆ ಕೂಡದಿರಲಿ ಗೂಬೆ ಕೂಗಿಕೊಳ್ಳಲಿ ಕೋಗಿಲೆ ಮಾವು ಬೇವುಗಳ ಸಸ್ಯ ಸಾಮ್ರಾಜ್ಯದ ಮೇಲೆ ಕುಣಿಯಲಿ ನವಿಲುಳು ಹಸಿರು ವನಸಿರಿಯ ಗಿರಿಸಾಲು ಬೆಟ್ಟಗಳ ಮೇಲೆ ಹಗಲು ಮುಗಿಲು ರಾತ್ರಿ ಧಾತ್ರಿ ಸಾಕ್ಷಿಯಾಗಿ ಕೊಲ್ಲದಿರಿ ಸಸ್ಯಶ್ಯಾಮಲೆಯ ಸಿರಿಸಂತಾನದಂಗಾಂಗ ಮರಗಿಡಗಳಣ ನಾಡಗುಡಿ ಗೋಪುರ ಶಿಲೆಸಾಕ್ಷಿಯಾಗಿ ಇಳಿದು ಮಣ್ಣಿನಾಳದ ಬೇರುಗಳ ಕತೆ ವ್ಯಥೆಗಳ ನೀರಿಲ್ಲದ ಹಾಡು ನಿಸ್ಸಾರ ಬಂಜರು ಭೂಮಿಯ ಪಾಡು ಜಲಬತ್ತಿಹೋದ ಈ ಮಣ್ಣ ಹಾಡು ಹಸಿದ ಒಡಲುಗಳಿಗೆ ಕುಸಿದ ಮನ ಮನೆಗಳಿಗೆ ಓಗೊಡಿ, ಭೂಶೃಂಗ ಸಭೆಯ ಶೋಭೆಯ ಮೇಲೆ ಕೂಡದಿರಲಿ ಗೂಬೆ ಟಿಸಿಲೊಡೆದ ಟೊಂಗೆ ಟೊಂಗೆಗಳ ಬೋಳು ಹಾಳಾದ ಎಲೆಹೂಕಾಯಿಗಳು ನಿಲ್ಲಲಿ ಕಡಿಯುವ ಕುಸಂಸ್ಕೃತಿ ಬೆಳೆಯಲಿ ಬೆಳೆಸುವ ಸಂಸ್ಕೃತಿ ನಾವು ಉಣ್ಣುವ ಅನ್ನ ಕುಡಿಯುವ ನೀರು ಉಸಿರುವ ಗಾಳಿ ನೋಡುವ ಬೆಳಕು ಉಳಿಯಲಿ ನಿರಂತರ ಆಗದಿರಲಿ ಸ್ಥಿತ್ಯಂತರ ನೋಡಲ್ಲಿ ಈ ನೆಲದಾಯಿಯ ಪಾಡು ಎದೆಯೊಳಿಲ್ಲ ಕಾಮಧೇನುವಿನ ಹಾಲು ಇಲ್ಲ ಕಲ್ಪವೃಕ್ಷದ ನೆರಳು ಬಿಗಿದಿರಲು ವಿಷ ಬಳ್ಳಿಗಳಿಂದಿವಳ ಕೊರಳು ವಿಷವೃಕ್ಷದಿಂದವಳ ಕರಳು ಹಸಿದ ಒಡಲುಳಿಗೆ ಕುಸಿದ ಮನ ಮನೆಗಳಿಗೆ ಗಿಡಗಂಟೆಗಳ ಕೊರಳದನಿಗಳಿಗೆ ಓಗೂಡಿ.

Please follow and like us:
error