ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಮಾಜಿ ಸಚಿವರಾದ ಎಂ. ಮಲ್ಲಿಕಾರ್ಜುನ ನಾಗಪ್ಪ ನೇಮಕ

ಕೊಪ್ಪಳ : ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ (ಕೆ.ಹೆಚ್.ಡಿ.ಸಿ)ಮಾಜಿ ಸಚಿವರಾದ ಎಂ. ಮಲ್ಲಿಕಾರ್ಜುನ ನಾಗಪ್ಪ ನವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರು ಹಾಗೂ ಜಿಲ್ಲಾ ನೇಕಾರ ಒಕ್ಕೂಟದ ಕಾರ್ಯಾಧ್ಯಕ್ಷರಾದ  ನಾಗರಾಜ ಬಳ್ಳಾರಿ, ಭಾಗ್ಯನಗರ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ನೇಕಾರರ ಒಕ್ಕೂಟದ ಕೊಪ್ಪಳ ತಾಲೂಕಾ ಕಾರ್ಯಾಧ್ಯಕ್ಷರಾದ ರಮೇಶ ಹ್ಯಾಟಿ, ಕಿನ್ನಾಳದ ರವಿ ಬುಡ್ಡೋಡಿ, ಹಾಗೂ ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

Leave a Reply