ಜಿ.ಪಂ. ಸದಸ್ಯರು, ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರಿಗೆ ಜು. ೨೦ ರಿಂದ ತರಬೇತಿ.

ಕೊಪ್ಪಳ ಜು. ೧೬  ಜಿಲ್ಲಾ ಪಂಚಾಯತಿ, ಯುನಿಸೆಫ್ ಹಾಗೂ ೬  ಸೆನ್ಸ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲೆಯ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರುಗಳು, ತಾಲೂಕಾ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಬದಲಾವಣೆಯ ನಿರ್ವಹಣೆ ಹಾಗೂ ನಾಯಕತ್ವ ಕುರಿತಂತೆ ಎರಡು ದಿನಗಳ ತರಬೇತಿ ಶಿಬಿರ ಜು. ೨೦ ಮತ್ತು ೨೧ ರಂದು ಎರಡು ದಿನಗಳ ಕಾಲ ನಗರದ ಗ್ರ್ಯಾಂಡ್ ಪವಾರ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
     ಈಗಾಗಲೆ ಜಿಲ್ಲೆಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನಡೆಸಿದ ತರಬೇತಿಯು ಅತ್ಯಂತ ಪರಿಣಾಮಕಾರಿಯಾಗಿರುವ ಬಗ್ಗೆ ಶಿಬಿರಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ತರಬೇತಿಯು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಲ್ಲಿ ಅಭಿವೃದ್ಧಿಯ ದೃಷ್ಟಿಕೋನವನ್ನು ಬಿಂಬಿಸುವುದು, ಒತ್ತಡಗಳ ನಿರ್ವಹಣೆ ಹಾಗೂ ನಾಯಕತ್ವದ ಮನೋಭಾವ ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ತಿಳಿಸಿದ್ದಾರೆ.
Please follow and like us:
error

Related posts

Leave a Comment