ಅಬಕಾರಿ ತನಿಖಾ ತಂಡದಿಂದ ೪೪ ಲೀ ಮದ್ಯ ವಶ, ೧೦ ಜನರ ಬಂಧನ

ಕೊಪ್ಪಳ ಸೆ. ೧೪ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಕಂಟ್ರೋಲ್ ರೂಂ ಹಾಗೂ ಸಂಚಾರಿ ತನಿಖಾ ತಂಡವನ್ನು ರಚಿಸಲಾಗಿದ್ದು ಇದುವರೆಗೂ ೪೪. ೦೭ ಲೀ. ಮದ್ಯ, ೧೧. ೨ ಲೀ. ಬಿಯರ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ೯ ಪ್ರಕರಣಗಳಿಗೆ ಸಂಬಂಧಿಸಿದಂತೆ ೧೦ ಜನರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
  ಉಪಚುನಾವಣೆಗೆ ಸಂಬಂಧಿಸಿದಂತೆ ಸೆ. ೦೫ ರಿಂದ ೧೩ ರವರೆಗೆ ಅಬಕಾರಿ ನಿರೀಕ್ಷಕರು, ಕೊಪ್ಪಳ ವಲಯ, ಮತ್ತು ಜಿಲ್ಲಾ ವಿಚಕ್ಷಣ ದಳ, ಅಬಕಾರಿ ನಿರೀಕ್ಷಕರು ಕುಷ್ಟಗಿ ಹಾಗೂ ಅಬಕಾರಿ ಉಪನಿರೀಕ್ಷಕರು, ಗಂಗಾವತಿ ಇವರ ಜಂಟಿ ಕಾರ್ಯಾಚರಣೆಯಲ್ಲಿ ಒಟ್ಟು ೦೯ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದುವರೆಗೂ ೪೪. ೦೭ ಲೀ. ಮದ್ಯ, ೧೧. ೨ ಲೀ. ಬಿಯರ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.  ಅಲ್ಲದೆ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ೧೦ ಜನರನ್ನು ಬಂಧಿಸಲಾಗಿದೆ.    ಸೆ. ೫ ರಂದು ೧೨. ೯೬೦ ಮದ್ಯ ಹಾಗೂ ೧೦. ೫೬೦ ಬಿಯರ್ ಜಪ್ತಿ ಮಾಡಿಕೊಳ್ಳಲಾಗಿದ್ದು, ಒಬ್ಬ ವ್ಯಕ್ತಿಯ ಬಂಧವಾಗಿದೆ.  ಸೆ. ೧೦ ರಂದು ೩. ೨೧೦ ಲೀ. ಮದ್ಯ ವಶ ಹಾಗೂ ಇಬ್ಬರ ಬಂಧನ, ಸೆ. ೧೧ ರಂದು ೨೨. ೨೯ ಲೀ. ಮದ್ಯ ವಶ ಹಾಗೂ ನಾಲ್ವರ ಬಂಧನ, ಸೆ. ೧೩ ರಂದು ೩. ೪೨ ಲೀ. ಮದ್ಯ, ೦. ೬೫೦ ಲೀ. ಬಿಯರ್ ವಶ ಹಾಗೂ ಮೂವರ ಬಂಧನವಾಗಿದೆ ಎಂದು ಅಬಕಾರಿ ಉಪಆಯುಕ್ತರು ತಿಳಿಸಿದ್ದಾರೆ.
Please follow and like us:
error