೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಹಿರೇಮಠ

ಹಿಟ್ನಾಳ ಹೋಬಳಿಯ ಮುನಿರಾಬಾದ್ ಡ್ಯಾಂ ನಲ್ಲಿ ೪ ನೇ ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾದ ಕೊಪ್ಪಳದ ಹಿರಿಯ ಸಾಹಿತಿಗಳಾದ ಶ್ರೀಮತಿ ಶಾಂತಾದೇವಿ ಹಿರೇಮಠ ಇವರನ್ನು ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಹಾಗೂ ಇತರರು ಅವರ ಮನೆಗೆ ತೆರಳಿ ಶಾಲು ಹೊದಿಸಿ ಸನ್ಮಾನ ಮಾಡುವದರ ಮೂಲಕ ಗೌರವ ನೀಡಲಾಯಿತು.
ಈ ಸಂದರ್ಭದಲ್ಲಿ  ತಾಲೂಕಾ ಕಸಾಪ ಅಧ್ಯಕ್ಷ ಶಿ.ಕಾ. ಬಡಿಗೇರ, ಗೌರವ ಕಾರ್ಯದರ್ಶಿ ಡಾ. ಪ್ರಕಾಶ ಬಳ್ಳಾರಿ ಹಾಗೂ ಹುಸೇನಪಾಶಾ, ಕೋಶಾಧ್ಯಕ್ಷರಾದ ಮೈಲಾರಗಡ್ರ, ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಪಾಟೀಲ, ಅರುಣಾ ನರೇಂದ್ರ, ಅನುಸೂಯಾ ಜಾಗೀರದಾರ, ಅಂಜನಾ ದೇವಿ ಕಲ್ಲೂರಕರ್, ಕಿಶನ್‌ಗೋಪಾಲ್ ಜಾಜಿ, ವೀರಣ್ಣ ಬಂಡಿ, ಪ್ರಲ್ಹಾದ ಅಗಳಿ, ಚುಸಾಪದ ಹನುಮಂತಪ್ಪ ಅಂಡಗಿ, ವಿಜಯಲಕ್ಷ್ಮಿಕೊಟಗಿ, ಡಾ.ಪಾರ್ವತಿ ಪೂಜಾರ , ಉಪನ್ಯಾಸಕ ಡಾ.ಸಿದ್ಲಿಂಗಪ್ಪಕೊಟ್ನೆಕಲ್ ಹಾಗೂ ಬಾಳು ಭಾಗವಹಿಸಿದ್ದರು.

Leave a Reply