ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಸಿಪಿಐ(ಎಂ) ಆಗ್ರಹ

ಕೊಪ್ಪಳ, ಸೆ.೨೬: ರಾಜ್ಯದಲ್ಲಿ  ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿದ್ದು ಕೂಡಲೇ ರಾಜ್ಯ ಸರಕಾರ ಎಚ್ಚೆತ್ತು ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಮುಂದಾಗಬೇಕೆಂದು  ಸಿಪಿಐ(ಎಂ) ಭಾರತ ಕಮ್ಯೂನಿಷ್ಠ ಪಕ್ಷ (ಮಾರ್ಕವಾದಿ) ತಾಲೂಕ ಸಮಿತಿ ಪ್ರತಿಭಟನೆ ನಡೆಸಿ ಒತ್ತಾಯಿಸಿತು.
ಈ ಕುರಿತು ಸಮಿತಿಯು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಇತ್ತಿಚ್ಚಿಗೆ ಬೆಂಗಳೂರಿನಲ್ಲಿ ೬ ವರ್ಷದ ಬಾಲಕಿಯೊರ್ವಳ ಮೇಲೆ ಕ್ರೀಡಾ ಶಿಕ್ಷಕ ವರ್ಗದವರು ಅತ್ಯಾಚಾರ ವೆಸಗಿದ್ದು ವರದಿಯಾಗಿದೆ. ರತ್ನಾ ಕೊಟ್ಟಾರಿ ಎಂಬ ೧೭ ವರ್ಷದ ವಿದ್ಯಾರ್ಥಿನಿ  ಉಡಪಿ ಜಿಲ್ಲೆ ಬೈಂದೂರು ಸಮಿಪದ ತನ್ನ ಮನೆ ದಾರಿಯಲ್ಲಿ ನಿಗೂಡವಾಗಿ ಕೊಲೆಯಾಗಿದ್ದಾಳೆ. ಮತ್ತು ವಿವಿದ ಜಿಲ್ಲೆಗಳಲ್ಲಿ ಬಾಲಕಿಯರ ವಸತಿ ನಿಲಯಗಳಲ್ಲಿ ಅತ್ಯಾಚಾರ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕೆಲವೆ ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲೂ ರಾಜ್ಯದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರಗಳು ಕೊಲೆಗಳು ಆಗುವುದು ವರದಿಯಾಗುತ್ತಲೆ ಇವೆ. ಜಿಲ್ಲೆಯ ಕನಕಗಿರಿ ತಾಲೂಕಿನ ಹೊಸಗುಡ್ಡ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆಮಾಡಿದ್ದಾರೆ ದಲಿತರಿಗೆ ಮರಕುಂಬಿಯಲ್ಲಿ ಬಹಿಷ್ಕಾರ ಹಾಕಿದ್ದಾರೆ ಹೀಗೆ ದಲಿತರನ್ನು ಇನ್ನೊಂದುಕಡೆ ಶೋಷಣೆ ಮಾಡುತ್ತಿದ್ದಾರೆ ಮಕ್ಕಳು ಮತ್ತು ಮಹಿಳೆಯರ ಅತ್ಯಾಚಾರಗಳು ದೌರ್ಜನ್ಯಗಳು ಹೆಚ್ಚಾಗುತ್ತಿವೆ. ರಾಜ್ಯ ಸರಕಾರವಾಗಲಿ ಕೇಂದ್ರ ಸರಕಾರವಾಗಲಿ ಮಹಿಳೆಯರಿಗೆ ಮತ್ತು ದಲಿತರಿಗೆ ಭದ್ರತೆ ನೀಡುವಲ್ಲಿ ವಿಫಲವಾಗಿದೆ. ಆದ ಕಾರಣ ಮಹಿಳೆಯರ ಮೇಲಿನ ಅತ್ಯಾಚರಗಳು ದಲಿತರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸಬೇಕು. ಅಲ್ಲದೆ ಸ್ಥಳೀಯ ಬೇಡಿಕೆಗಳಾದ ಕನಕಗಿರಿ ತಾಲೂಕ ಹೊಸಗುಡ್ಡ ಗ್ರಾಮದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆಮಾಡಿರುವವರನ್ನು ಕೂಡಲೆ ತನಿಖೆ ಮಾಡಿ ಬಂಧಿಸಿ ಕಠಿಣ ಶಿಕ್ಷಯನ್ನು ವಿದಿಸಬೇಕು. ಮರಕುಂಬಿಯಲ್ಲಿ  ಬಹಿಷ್ಕಾರಕ್ಕೆ ಒಳಗಾಗಿರುವ ದಲಿತ ಕುಟುಂಬಗಳಿಗೆ ಒಂದು ತಿಂಗಳ ಆಹಾರ  ದಾನ್ಯಗಳನ್ನು ಒದಗಿಸಬೇಕು. ಪ್ರತಿ ಶಾಲೆಯಲ್ಲಿ ಕಡ್ಡಾಯವಾಗಿ ದೂರು ಪೆಟ್ಟಿಗೆಯನ್ನು ಇಡತಕ್ಕದ್ದು ಹಾಗೂ ಅದನ್ನು ೧೫ ದಿನಗಳಿಗೊಮ್ಮೆ ಶಾಲಾ ಅಭಿವೃದ್ದಿ ಸಮಿತಿಯ ಸಮ್ಮುಖದಲ್ಲಿ ಮುಖ್ಯೋಪಾಧ್ಯರನ್ನು ಕರೆದು ಬಂದಿರುವ ದೂರುಗಳನ್ನು ಪರಿಶಿಲಿಸಿ ಕ್ರಮ ಜರುಗಿಸಬೇಕು. ಪ್ರತಿ ಶಾಲೆಯಲ್ಲಿ ಜಾಗೃತಿ ಮೂಡಿಸಲು ಆಗಾಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮಾಡತಕ್ಕದ್ದು,  ಚಲಚಿತ್ರ ದೂರದರ್ಶನ ಜಾಹಿರಾತು ಮುಂತಾದ ದೃಶ್ಯ ಮಾಧ್ಯಮಗಳಲ್ಲಿ ಕ್ರೌರ್ಯ, ಅತ್ಯಾಚಾರ ಅಸ್ಲಿಲತೆಯನ್ನು ಭೀಕರವಾಗಿ ಹಾಗೂ ವೈಭಿಕರಿಸಿ ತೋರಿಸುವುದಕ್ಕೆ ಕಡಿವಾಣ ಹಾಕಲು ಸೂಕ್ತ ಕಾನೂನು ರಚನೆ ನಿಕ್ಷಪಕ್ಷಪಾತವಾಗಿ ಜಾರಿಗೆ ಗೊಳಿಸತಕ್ಕದ್ದು ಇವುಗಳಿಗೆಲ್ಲ ಸೂಕ್ತ ಸೆನ್ಸಾರ ಮಂಡಳಿ ರೂಪಿಸತಕ್ಕದ್ದು ಕೆಲ ಮಾಧ್ಯಮಗಳು ಪೊಲೀಸರಂತೆ ತಾವೆ ಕಾನೂನು ಎಂಬಂತೆ ವರ್ತಿಸುವುದನ್ನು ನಿಗ್ರಹಿಸುವುದು.  ಇಂತಹ ದೌರ್ಜನ್ಯ ಪ್ರಕರಣಗಳಲ್ಲಿ ದೂರು ಬಂದ ಕ್ಷಣ ಸಾಕ್ಷ ನಾಶಪಡಿಸದ ರೀತಿಯಲ್ಲಿ ಕೂಡಲೆ ಪೊಲೀಸರು ದೂರು ದಾಖಲಿಸುವುದು  ಉಡುಪು ಒಳಉಡುಪು ಮುಂತಾದ ಸಾಕ್ಷ್ಯಗಳನ್ನು ಸಂಗ್ರಹಿಸಿ ವೈಧ್ಯಕಿಯ ತಪಾಸಣೆ ನಡೆಸಿ ಕೂಡಲೆ ಪ್ರಮಾಣ ಪತ್ರಗಳನ್ನು ನೀಡುವುದು ದೂರು ನೀಡಿದ ತತಕ್ಷಣ ದೂರು ದಾಖಲಿಸಿಕೊಂಡು ೨೪ ಘಂಟೆ ಒಳಗಾಗಿ ವೈದ್ಯಕೀಯ ಪರಿಕ್ಷೆ ಮಾಡಿಸುವುದು ಸಾಕ್ಷಿಗಳನ್ನು ಸಂಗ್ರಹಿಸುವುದು ಎಫ್ ಐ ಆರ್ ಹಾಕಿ ಪ್ರತಿಗಳನ್ನು ದೂರುದಾರರಿಗೆ ನೀಡುವಂತೆ ಕಡ್ಡಾಯ ನಿಯಮ ಹೇರಬೇಕು. ಅತ್ಯಾಚಾರ ಲೈಂಗಿಕ ಕಿರುಕಳಗಳ ಪ್ರಕರಣಗಳಲ್ಲಿ ಸಿಲುಕಿಕೊಂಡವರಿಗೆ ಯಾವುದೆ ಹುದ್ದೆ ಅಧಿಕಾರವನ್ನು ನೀಡಬಾರದು. ಕೆಲಸ ಮಾಡುವ ಸ್ಥಳಗಳಲ್ಲಿ ಲೈಗಿಂಕ ಕಿರುಕುಳ ವಿರೋಧಿ ಸಮಿತಿಗಳನ್ನು ಕಡ್ಡಾಯಗೊಳಿಸಿ   ಆರೋಪಿ ದೂರುಗಳ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲ್ಲು ಕಠಿಣ ಕ್ರಮವನ್ನು ರಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ಸಿ.ಪಿ.ಐ.ಎಮ್ ತಾಲೂಕ ಸಮಿತಿ ಕಾರ್ಯದರ್ಶಿ ಸುಂಕಪ್ಪ ಗದಗ, ಹುಲಗಪ್ಪ ಗೋಕಾವಿ, ಹುಸೇನಸಾಬ ನಧಾಪ್, ನಾಗಪ್ಪ ಚಳ್ಳಾರಿ, ಯಮನವ್ವ ಶಾವಿ, ಪಕೀರಮ್ಮ ಮಿರಗನತಂಡಿ, ಬಸವರಾಜ ಗೋನಾಳ, ಅಡಿವೆಪ್ಪ, ಬುಡನ್‌ಸಾಬ ಬಲಬಂಚಿ, ಯಮನವ್ವ, ಮಂಜುಲಾ ಹೊಳಿ, ಗಂಗಮ್ಮ ಸೇರಿದಂತೆ ಇತರರು ವಹಿಸಿದ್ದರು.
Please follow and like us:
error