ಪತ್ರಕರ್ತರ ಮೇಲೆ ಹಲ್ಲೆ : ಕೊಪ್ಪಳ ಮೀಡಿಯಾ ಕ್ಲಬ್ ಖಂಡನೆ

ಕೊಪ್ಪಳ : ಚಿತ್ರದುರ್ಗದ ಹಿರಿಯೂರಿನಲ್ಲಿ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಪೋಲೀಸರು ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
    ಪಬ್ಲಿಕ್ ಟಿವಿ ವರದಿಗಾರ ಮತ್ತು ಕ್ಯಾಮಾರಾಮನ್ ಜೊತೆ ಅನುಚಿತವಾಗಿ ವರ್ತಿಸಿದ  ಮತ್ತು ಹಲ್ಲೆ ಮಾಡಿದ ಪಿಎಸೈ ಅವರನ್ನು ತಕ್ಷಣವೇ ಅಮಾನುತಗೊಳಿಸಬೇಕು,ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಅಲ್ಲದೇ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗದ ಮೇಲೆ ಭರವಸೆ ಇಲ್ಲ ಎಂದು ಹೇಳಿರುವ  ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕುಮಾರ ಹೇಳಿಕೆಯನ್ನು ಕೊಪ್ಪಳ ಮೀಡಿಯಾ ಕ್ಲಬ್ ಖಂಡಿಸಿದೆ.
ಈ ಸಂದರ್ಭದಲ್ಲಿ ಸೋಮರಡ್ಡಿ ಅಳವಂಡಿ, ಶರಣಪ್ಪ ಬಾಚಲಾಪೂರ, ದೇವು ನಾಗನೂರ, ನಾಭಿರಾಜ ದಸ್ತೇನವರ, ಶಿವರಾಜ ನುಗಡೊಣಿ,ಶ್ರಿಪಾದ ಆಯಾಚಿತ, ಗಂಗಾಧರ ಬಂಡಿಹಾಳ, ತಿಪ್ಪನಗೌಡ ಪಾಟೀಲ್, ದತ್ತಪ್ಪ ಕಮ್ಮಾರ, ಬಸವರಾಜ ಬಿನ್ನಾಳ, ಸಿರಾಜ್ ಬಿಸರಳ್ಳಿ, ಜಗದೀಶ ಕುಂಬಾರ, ವಿಠ್ಠಪ್ಪ ಗೋರಂಟ್ಲಿ , ಬಸವರಾಜ ಶೀಲವಂತರ ,ಶರಣಪ್ಪ ಕೊತಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply