fbpx

ಮನೆಯಲ್ಲಿ ಅರಮನೆ ಕಾರ್ಯಕ್ರಮಬ್ರಿಟಿಷರ ವಿರುದ್ಧದ ರಾಣಿ ಚನ್ನಮ್ಮರ ಸಮರ ನಮಗೆ ಪ್ರೇರಣೆ ಶಿವರಾಮಗೌಡ.

ಕಿತ್ತೂರು ರಾಣಿ ಚನ್ನಮ್ಮರು ಬ್ರಿಟಿಷರ ವಿರುದ್ಧ ಸಾರಿದ ಸಮರವೇ ನಮಗೆ ಪ್ರೇರಣೆ ಎಂದು ಮಾಜಿ ಸಂಸದ ಹಾಗೂ ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾದ ಶಿವರಾಮಗೌಡರವರು ಅಭಿಪ್ರಾಯಪಟ್ಟರು. ಅವರು ನಗರದ ಹಿರೇಜಂತಗಲ್ ಪ್ರದೇಶದ ಮಹಾಲಿಂಗಪ್ಪ ಪಾಟೀಲ ಅವರ ಮನೆಯಲ್ಲಿ ಶನಿವಾರ ರಾತ್ರಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮನೆಯಲ್ಲಿ ಅರಮನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಯೇ ಅರಮನೆ ಕಾಣುವಂತಾಗಲಿ ಎಂಬುದು ಈ ಕಾರ್ಯಕ್ರಮದ ಆಶಯವಾಗಿದ್ದು, ಸಮಾಜ ಬಾಂಧವರು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದ ಅವರು, ಪ್ರತಿಯೊಬ್ಬರೂ ಮುಖ್ಯ ವಾಹಿನಿಗೆ ಬರಬೇಕೆನ್ನುವ ದೃಢ ಸಂಕಲ್ಪದೊಂದಿಗೆ, ಸಹೋದರತ್ವ ಬಾಂಧವ್ಯ ಮರೆಯದೇ, ಬೇರುಮಟ್ಟದಿಂದ ಸಮಾಜ ಸಂಘಟನೆಯೆಡೆಗೆ ನಮ್ಮ ಗುರಿ ಇರಲಿ. ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ರಾಷ್ಟ್ರ ಮಹಿಳೆ ರಾಣಿ ಎಂದೇ ಖ್ಯಾತರಾದ ಚನ್ನಮ್ಮರ ಜೀವನ ನಮಗೆ ಮಾರ್ಗದರ್ಶನವಾಗಲಿ ಎಂದರು. ಪಂಚಮಸಾಲಿ ಸಮಾಜ ಸಂಘಟನೆಗೆ ಈ ಮೊದಲಿನಿಂದಲೂ ಹಮ್ಮಿಕೊಂಡು ಬರುತ್ತಿರುವ ಈ ಮನೆಯಲ್ಲಿ ಅರಮನೆ ಕಾರ್ಯಕ್ರಮದ ಮೂಲಕ ಸಮಾಜ ಬಾಂಧವರು ಒಗ್ಗೂಡುತ್ತಿದ್ದು, ಸಂಘಟನೆಗೆ ಸಹಕಾರಿಯಾಗಿದೆ. ಪ್ರತಿ ತಿಂಗಳೂ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ತಪ್ಪದೇ ಭಾಗವಹಿಸಿ ತಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕು. ಮುಂಬರುವ ದಿನಗಳಲ್ಲಿ ಸಮಾಜದ ಸಂಘಟನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದ ಅವರು, ಸಮಾಜದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಲು ತಿಳಿಸಿದರು. ರುದ್ರಪ್ಪ ತಾಳೂರು ಮಾತನಾಡಿ, ಶಿವರಾಮಗೌಡರು ಹೇಳಿದಂತೆ ನಾವೆಲ್ಲರೂ ಎಲ್ಲಾ ಸಮಾಜ ಬಾಂಧವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವುದರೊಂದಿಗೆ, ಗೌಡರ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಎಂದರು. ಈ ಹಿಂದೆ ಶಿವರಾಮಗೌಡರು ಆಯೋಜಿಸಿದಂತೆ ವ್ಯಕ್ತಿತ್ವ ವಿಕಸನ ಶಿಬಿರ ಏರ್ಪಡಿಸುವ ಕುರಿತು ಚಂದ್ರು ಬಿ. ಹಿರೂರು ಸಭೆಯ ಗಮನಕ್ಕೆ ತಂದರು. ವಕೀಲರಾದ ಸುಭಾಷರು ಸಮಾಜದ ಬಗ್ಗೆ ಹೆಮ್ಮೆಯಿರಲಿ, ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮರ ರಾಜ್ಯ ಸಂಘಟನೆಯು ನಮ್ಮ ಸಮಾಜ ಸಂಘಟನೆಗೆ ಮಾದರಿಯಾಗಲಿ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ ಕುಳಗಿ, ಮುಖಂಡರಾದ ಅಣ್ಣೂರು ಶರಣೇಗೌಡ, ಕಳಕನಗೌಡ, ಕಂಪ್ಲಿ ಬಸಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಚನ್ನವೀರನಗೌಡ ಕೋರಿ, ಚಂದ್ರಶೇಖರ ತೋಟದ, ಬಸಾಪಟ್ಟಣ ಬಸನಗೌಡ, ಶಿವಾನಂದ ಮೇಟಿ, ಎ.ಕೆ. ಮಹೇಶ ಕುಮಾರ, ಸಾಹಿತಿ ಎಸ್.ವಿ. ಪಾಟೀಲ ಗುಂಡೂರು, ವಿನಯ್ ಪಾಟೀಲ್, ಪ್ರಕಾಶ ಪಾಟೀಲ, ಮಹಾಲಿಂಗಪ್ಪ, ರಾಮತ್ನಾಳ ಬಸವರಾಜ, ಜಗದೀಶ ಬೀಳಗಿ, ಶ್ರೀಧರ ಗೋನಾಳ, ವೀಣಾ ಗ್ರೂಪ್ಸ್‌ನ ಎಸ್.ಬಿ. ಯಲಿಗಾರ್, ಬಸವರಾಜ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಸಮಾಜ ಬಾಂಧವರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!