You are here
Home > Koppal News > ಆನೆಗೊಂದಿ ಉತ್ಸವ :ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು

ಆನೆಗೊಂದಿ ಉತ್ಸವ :ವಿಚಾರ ಸಂಕಿರಣ, ಕವಿ ಕಾವ್ಯ ಕುಂಚ ಕಾರ್ಯಕ್ರಮಗಳು

ಕೊಪ್ಪಳ ಮಾ. : ಆನೆಗೊಂದಿ ಉತ್ಸವದ ಅಂಗವಾಗಿ ವಿಚಾರವಾದಿಗಳ, ಸಂಶೋಧಕರನ್ನು ಚಿಂತನ-ಮಂಥನಕ್ಕೆ ಹಚ್ಚಿಸುವಂತೆ ವಿಚಾರ ಸಂಕಿರಣ, ಕವಿತೆಯಲ್ಲಿ ಕಲ್ಪನೆಯನ್ನು ಸೃಷ್ಠಿಸುವಂತಹ ಕವಿ ಕಾವ್ಯ ಜೊತೆಗೆ ಅದಕ್ಕೆ ರೂಪ ನೀಡುವ ಕುಂಚ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ.
ಮಾ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಆನೆಗೊಂದಿ ಗ್ರಾಮದಲ್ಲಿ ನಿರ್ಮಿಸಿರುವ ಕುಪ್ಪಮ್ಮ ರಾಣಿ ವೇದಿಕೆಯಲ್ಲಿ ಆನೆಗೊಂದಿ ಇತಿಹಾಸ ಮತ್ತು ಸಂಸ್ಕೃತಿ ಕುರಿತಂತೆ ವಿಶೇಷ ವಿಚಾರಸಂಕಿರಣ ಏರ್ಪಡಿಸಲಾಗಿದ್ದು, ಪ್ರೊ. ಲಕ್ಷ್ಮಣ ತೆಲಗಾವಿ ಅವರು ವಿಚಾರಸಂಕಿರಣದ ಅಧ್ಯಕ್ಷತೆ ವಹಿಸುವರು. ಕೊಪ್ಪಳದ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಅವರಿಂದ ಆಶಯದ ನುಡಿ, ನಂತರ ಗಂಗಾವತಿಯ ಕೆ.ಎಸ್.ಸಿ. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಅವರು ಆನೆಗೊಂದಿ, ರಾಜಕೀಯ ಪರಂಪರೆ ಕುರಿತು ತಮ್ಮ ಪ್ರಬಂಧ ಮಂಡನೆ ಮಾಡುವರು. ಜೊತೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ. ಕೊಟ್ರೇಶ್ ಅವರು ಆನೆಗೊಂದಿ, ಸಾಂಸ್ಕೃತಿ ಪರಂಪರೆ ಕುರಿತು ತಮ್ಮ ಪ್ರಬಂಧ ಮಂಡಿಸುವರು. ಕಾರ್ಯಕ್ರಮದಲ್ಲಿ ಗಂಗಾವತಿಯ ಹೆಚ್.ಆರ್.ಎಸ್.ಎಂ. ಕಾಲೇಜಿನ ಉಪನ್ಯಾಸಕ ಪ್ರೊ. ಎಫ್.ಎಚ್. ಚಿತ್ರಗಾರ, ಸರ್ಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕ ಡಾ. ನಾರಾಯಣ ಕಂದಗಲ್, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್, ಕುಕನೂರಿನ ಹೊಸಮನಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಪವನಕುಮಾರ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಾ. ೨೪ ರಂದು ಮಧ್ಯಾಹ್ನ ೧೨-೩೦ ಗಂಟೆಗೆ ಯುವ ಕವಿ ಕಾವ್ಯ ಕುಂಚ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬಾಗಲಕೋಟೆಯ ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮದಲ್ಲಿ ಕವಿಗಳಾದ ಸಲೀಮಾ ಎಂ. ಮಂಗಳೂರು, ರಮೇಶ್ ಗಬ್ಬೂರ, ಜಿ.ಎಸ್. ಗೋನಾಳ, ಸಿರಾಜ್ ಬಿಸರಳ್ಳಿ, ಈಶಪ್ಪ ಮಳಗಿ, ಎನ್. ಜಡಿಯಪ್ಪ, ನಟರಾಜ ಸೋನಾರ, ಸೋಮು ಕುದರಿಹಾಳ, ಸತೀಶ ಎಚ್.ಆರ್., ಮಮ್ತಾಜ್ ಬೇಗಂ, ರುದ್ರಮ್ಮ ಆಶಿನಾಳ, ಆಂಜನೇಯ ಟಿ., ರವೀಂದ್ರ ಬಾಕಳೆ ಅವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಗಾಯಕರುಗಳಾದ ದೊಡ್ಡಯ್ಯ ವಿ. ಕಲ್ಲೂರ, ಕೆ.ಎಫ್. ಮುದ್ದಾಬಳ್ಳಿ, ಹಣಮಂತರಾವ್ ಕುಲಕರ್ಣಿ, ವೆಂಕಟೇಶ ದಾಸನಾಳ, ಜುಜ್ಜವರಪು ನಾಗೇಶ್ವರರಾವ್, ಹಂದ್ರಾಳ ವಿಶ್ವನಾಥ, ಶಿವಪ್ಪ ಹುಳ್ಳ, ಸುರಯ್ಯ ಬೇಗಮ್ ಮುದ್ದಾಬಳ್ಳಿ, ಎಸ್.ಎಸ್.ಎಂ. ರುದ್ರಾಣಿ ಕಂಪ್ಲಿ, ವಿದ್ಯಾಶ್ರೀ ಸಾಲಮಠ, ಗೀತಾ ಕಾಶೆಟ್ಟಿ, ಮತ್ತು ಛತ್ರಪ್ಪ ತಂಬೂರಿ ಅವರು ಭಾಗವಹಿಸುವರು. ಕವಿಗಳ ಕಾವ್ಯಕ್ಕೆ ಗಾಯಕರು ಜೀವ ನೀಡಿದರೆ, ಅದಕ್ಕೆ ರೂಪ ನೀಡಲು ಕುಂಚ ಕಲಾವಿದರುಗಳಾದ ಚಂದ್ರಶೇಖರ ಕಲ್ಮನಿ, ಜಿ.ಕೆ. ಬಡಿಗೇರ, ಅಣ್ಣಪ್ಪ ಚಿತ್ರಗಾರ, ವೀರಾಚಾರಿ ಕಮ್ಮಾರ, ಮಲ್ಲಿಕಾರ್ಜುನ ಸುರತಾನಿ, ಪ್ರಶಾಂತ, ಯಶೋಧಾ ಪತ್ತಾರ, ಸಾಗರ ಚಿತ್ರಗಾರ ಹಾಗೂ ಹನಿರಾಜ ಅವರು ಭಾಗವಹಿಸುವರು. ಈ ಕಾರ್ಯಕ್ರಮಕ್ಕೆ ಕಸಾಪ ಗಂಗಾವತಿ ತಾಲೂಕು ಅಧ್ಯಕ್ಷ ಬಸವರಾಜ ಕೋಟೆ ಅವರ ಸಂಯೋಜನೆಯಿದ್ದು, ಕೊಪ್ಪಳ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಕೆ.ಎಫ್. ಮುದ್ದಾಬಳ್ಳಿ ಅವರ ಸಂಗೀತ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

Leave a Reply

Top