ಹಿರಿಯ ಸಂಶೋಧಕ,ಸಾಹಿತಿ ಬಿ.ಸಿ.ಪಾಟೀಲ್ ಇನ್ನಿಲ್ಲ

ಕೊಪ್ಪಳದ ಹಿರಿಯ ಸಾಹಿತಿ,ಸಂಶೋಧಕ ಬಿ.ಸಿ.ಪಾಟೀಲ್ ಇಂದು ಬೆಳಿಗ್ಗೆ ನಿಧನರಾದರು. ಸಂಶೋಧನೆಯಲ್ಲಿ ಹೆಸರು ಮಾಡಿದ್ದ ಬಿ.ಸಿ.ಪಾಟೀಲರು ತಮ್ಮ 90ನೇ ವಯಸ್ಸಿನಲ್ಲಿಯೂ ಎಳೆಯರನ್ನು ನಾಚಿಸುವಂತೆ ಸಾಹಿತ್ಯ ಕಾರ್ಯಕ್ರಮ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರ ನಿಧನದಿಂದ ಹಳೆಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಸಾಹಿತ್ಯ ಲೋಕ ಸಂತಾಪ ವ್ಯಕ್ತಪಡಿಸಿದೆ. ಕೊಪ್ಪಳದ ಸಂಶೋಧನೆ ಮತ್ತು ಸಾಹಿತ್ಯಕ್ಕೆ ಮೊದಲು ಮೆರಗು ತಂದುಕೊಟ್ಟವರು ಬಿ.ಸಿ.ಪಾಟೀಲರು ಅವರ ಸಾಹಿತ್ಯ ಸೇವೆ ಶೈಕ್ಷಣಿಕ ಸೇವೆ ಯಾವತ್ತೂ ಚಿರಸ್ಮರಣೀಯ ಎಂದು ಸಾಹಿತ್ಯ ಲೋಕ ಕೊಂಡಾಡಿದೆ.
Please follow and like us:
error