ಸೆ. ೨೪ ರಿಂದ ಬೀದರ್‌ನಲ್ಲಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ

ಕೊಪ್ಪಳ ಸೆ. : ಪ್ರಸಕ್ತ ಸಾಲಿನ ಗುಲಬರ್ಗಾ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಬೀದರನ ನೆಹರು ಕ್ರೀಡಾಂಗಣದಲ್ಲಿ ಸೆ. ೨೪ ಮತ್ತು ೨೫ ರಂದು ಜರುಗಲಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತಿಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ಈ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.  ವಿಭಾಗಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಬೀದರ್‌ಗೆ ಹೋಗಿ ಬರುವ ಪ್ರಯಾಣ ಭತ್ಯೆ ಕ್ರೀಡಾಕೂಟ ಮುಗಿದ ನಂತರ ನೀಡಲಾಗುವುದು. ಅಲ್ಲದೆ ಕ್ರೀಡಾಪಟುಗಳಿಗೆ ವಸತಿ ಹಾಗೂ ಊಟೋಪಹಾರ ವ್ಯವಸ್ಥೆಯನ್ನು ಸಂಘಟಕರಿಂದ ಮಾಡಲಾಗುತ್ತಿದ್ದು, ಅರ್ಹ ಸ್ಪರ್ಧಾಳುಗಳು ಸೆ. ೨೩ ರ ಸಂಜೆ ೫ ಗಂಟೆಗೆ ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ಹಾಜರಿದ್ದು, ತಮ್ಮ ಹೆಸರುಗಳನ್ನು ನೊಂದಾಯಿಸಲು ಸೂಚಿಸಲಾಗಿದೆ. ಭಾಗವಹಿಸುವ ಸ್ಪರ್ಧಾಳುಗಳಿಗೆ ಸೆ. ೨೩ ಸಂಜೆಯಿಂದ ಸೆ. ೨೫ ರವರೆಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಕಡ್ಡಾಯವಾಗಿ ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಎರಡು ಭಾವಚಿತ್ರಗಳೊಂದಿಗೆ ಲಘು ಹಾಸಿಗೆಯೊಂದಿಗೆ ಹಾಜರಾಗಲು ಸೂಚಿಸಲಾಗಿದೆ.  ಸೆ. ೨೪ ರಂದು ಬೆಳಿಗ್ಗೆ ಜರುಗುವ ಉದ್ಘಾಟನೆ ಕಾರ್ಯಕ್ರಮ ಹಾಗೂ ಪಥ ಸಂಚನಲದಲ್ಲಿ ಸ್ಪರ್ಧಾಳುಗಳು ಕಡ್ಡಾಯವಾಗಿ ಹಾಜರಿರಬೇಕು. ಒಂದು ವೇಳೆ ಪಥ ಸಂಚಲನದಲ್ಲಿ ಗೈರು ಹಾಜರಾದಲ್ಲಿ ಅಥವಾ ವಸತಿ ಹಾಗೂ ಆಟದ ಮೈದಾನದಲ್ಲಿ ಅಶಿಸ್ತಿನಿಂದ ವರ್ತಿಸುವ, ಸಂಘಟಕರೊಂದಿಗೆ ಜಗಳವಾಡುವ ಸ್ಪರ್ಧಾಳುಗಳನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗುವುದು ಮತ್ತು ಅವರಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ, ದಿನ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿ.ಎನ್.ಘಾಡಿ, ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ ಅಥವಾ ಸಿ.ಎ.ಪಾಟೀಲ್, ಇಲಾಖೆಯ ಹಿರಿಯ ವ್ಹಾಲಿಬಾಲ್ ತರಬೇತುದಾರರು, ದೂರವಾಣಿ ಸಂಖ್ಯೆ ೯೩೪೨೩೮೭೯೩೫ ಹಾಗೂ ಖೋಖೋ ತರಬೇತುದಾರ ಎ.ಯತಿರಾಜು ಸೆಲ್ ೯೪೪೮೬೩೩೧೪೬ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Please follow and like us:
error