ಭೂತಾಯಿ ಹೆತ್ತ ತಾಯಿ ಋಣ ತಿರಿಸುವುದು. ಮನುಷ್ಯನ ಕರ್ತವ್ಯವಾಗಿದೆ -ಪ್ರೊ|| ವಾಲಿ

ಮನುಷ್ಯ ಭೂತಾಯಿ ಮತ್ತು ಹೆತ್ತ ತಾಯಿ ಋಣ ತಿರಿಸುವಂತಹ ಸ್ಮರಣೀಯ ಕಾರ್ಯ ಕೈಗೊಳ್ಳಬೇಕು, ಮಾನವೀಯ ಮೌಲ್ಯಗಳು ಮಾಯವಾಗುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಅಂತಹ ಮೌಲ್ಯಗಳನ್ನು ಬೆಳಸುವ ಕಾರ್ಯಗಳನ್ನು ಇಂತಹ ಕಾರ್ಯಕ್ರಮದ ಮೂಲಕ ಶ್ರೀ ಗವಿಮಠ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಮಾಸಿಕ ೩೪ ನೇ ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಬಿಜಾಪುರದ ಜಾನಪದ ವಿದ್ವಾಂಸರಾದ ಪ್ರೊ|| ಮಲಿಕಾರ್ಜುನ ವಾಲಿ ಹೇಳಿದರು. 
ಮುಂದುವರೆದು ಮಾತನಾಡಿದ ಅವರು ಜಾನಪದಗಳಲ್ಲಿ ತಾಯಿಯ ಕುರಿತ ಹಾಡುಗಳನ್ನು ಉಲ್ಲೇಖಿಸಿ ತಾಯಿಯ ಮಹತ್ವವನ್ನು ಮನವರಕೆ ಮಾಡಿದರು. ಶ್ರೀ ಮುರಘೇಶ ಗಾಜರೆ, ದುಬೈರವರು ತಮ್ಮ ತಂದೆಯವರಾದ    ದಿ. ಕಲ್ಲಪ್ಪ ಗಾಜರೆ ಸ್ಮರಣಾಥ೯ ಪ್ರತಿಭಾವಂತ ಬಡಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ದಾನಗೈಯುತಿರುವದು  ಹೃದಯ ವೈಶಾಲತೆ, ಸಮಾಜದ ಪ್ರತಿಯೊಬ್ಬರಿಗೂ ಈ ಕಾಯ೯ ಅನುಕರಣೀಯ ಎಂದು  ಪ್ರೊ|| ಮಲಿಕಾರ್ಜುನ ವಾಲಿಯವರು ಅಭಿಪ್ರಾಯಪಟ್ಟರು.  
ಪ್ರತಿಭಾವಂತ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಮಾತನಾಡಿದ    ಮುರಘೇಶ ಕಲ್ಲಪ್ಪ ಗಾಜರೆಯವರು ಈಗ ಪುರಸ್ಕಾರ ಪಡೆದ ವಿದ್ಯಾರ್ಥಿಗಳು  ಮುಂದೆ ತಾವು ಸಹ ಪ್ರತಿಭಾವಂತ ಬಡಮಕ್ಕಳಿಗೆ ಸಹಾಯ ಮಾಡುವ ಉದಾರ ಗುಣವನ್ನು ಬೆಳಸಿಕೊಳ್ಳಬೇಕು ಆ ಮೂಲಕ ಪ್ರತಿಭಾವಂತರ ಬೆಳವಣಿಗೆ ಮಂದುವರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ  ವಿಜಯ ಡಂಬಳಯವರು ಮಾತನಾಡಿ, ನಾವು ಮಾಡುವ ವೃತ್ತಿಯನ್ನು ಸಂತೋಷದಿಂದ ಮಾಡಬೇಕು ಮತ್ತು ಆ ವೃತ್ತಿಯಲ್ಲಿ ಸಂತೃಪ್ತಿಯನ್ನು ಕಾಣಬೇಕು.  ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಢಿಕೊಳ್ಳಬೇಕು ಹಾಗೂ ಕಠಿಣ ಅಭ್ಯಾಸಿಗಳಾಗಬೇಕೆಂದು ಕಿವಿಮಾತು ಹೇಳಿದರು. 
ಕಾರ್ಯಕ್ರಮ ಭಕ್ತಿಸೇವೆಯನ್ನು ಡಾ|| ಆರ್. ಎಮ್. ಪಾಟೀಲರು ವಹಿಸಿಕೊಂಡಿದ್ದರು. ಗವಿಸಿದ್ದಪ್ಪ ಕೊಪ್ಪಳರವರು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಮೊದಲು  ಶ್ರೀಮತಿ ಶಕುಂತಲಾ ಬಡಿಗೇರವರ ಭಕ್ತಿ-ಸಂಗೀತ ಜರುಗಿತು. 

Leave a Reply