ಮನುಷ್ಯನ ಸಂಕಲ್ಪ ಶಕ್ತಿಯ ಮುಂದೆ ಉಳಿದೆಲ್ಲ ಶಕ್ತಿಗಳು ಶೂನ್ಯ-ಪೂಜ್ಯ ಶ್ರೀಗವಿಸಿದ್ಧಶ್ವರ ಶ್ರೀಗಳು

ಕೊಪ್ಪಳ; ಮನುಷ್ಯನ ಹುಟ್ಟಿನ ಸಾರ್ಥಕತೆಗಾಗಿ ಎಲ್ಲರೂ ಒಂದೊಂದು ಗಿಡವನ್ನು ನೆಡುವ ಅವಶ್ಯಕತೆ ಇದೆ ಎಂದು ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಕರೆ ನೀಡಿದರು. ಅವರು  ವನಮಹೋತ್ಸವ ಕಾರ್ಯಕ್ರಮ ಅಂಗವಾಗಿ ಗವಿಮಠದ ಕಲ್ಯಾಣ ಮಂಟಪದಲ್ಲಿ ಜರುಗಿದ ಪೂರ್ವಭಾವಿ ಸಬೆಯಲ್ಲಿ ಮಾತನಾಡಿದರು. ಮುಂದುವರೆದು ಮಾತನಾಡುತ್ತಾ  ಮನುಷ್ಯನ ಸಂಕಲ್ಪ ಶಕ್ತಿಯ ಮುಂದೆ  ಉಳಿದೆಲ್ಲ ಶಕ್ತಿಗಳು  ಶೂನ್ಯವಾಗುತ್ತವೆ.  ಪ್ರತಿಯೊಬ್ಬರು  ಒಂದೊಂದು ಗಿಡ ನೆಟ್ಟು ಆಮೂಲಕ ಪರಿಸರದ ಸಮತೋಲನ ಕಾಪಾಡುವ ಸಂಕಲ್ಪ ಮಾಡಿಕೊಳ್ಳುವ  ಅಗತ್ಯವಿದೆ.  ಇದರಿಂದ ಭೂಮಿಯ ತಾಪವನ್ನು ತಡೆಗಟ್ಟಹಬುದು.  ಕಳೆದ ವರ್ಷ ಜೂನ್ ತಿಂಗಳಲ್ಲಿ ಶ್ರೀಗವಿಮಠ ಹಾಗೂ ಇತರ ಸಂಘಟನೆಗಳಡಿಯಲ್ಲಿ  ೨೫ ಸಾವಿರ ಸಸಿಗಳನ್ನು ನೆಟ್ಟು ಕೊಪ್ಪಳದಲ್ಲಿ ಹಸಿರಿನ ವಾತಾವರಣ ನಿರ್ಮಿಸುವ ಬ್ರಹತ್ ಯೋಜನೆ ಹಮ್ಮಿಕೊಂಡಿತ್ತು.  ಈ ಸಾರೆಯೂ ಶ್ರೀಗವಿಮಠ,ವನಶ್ರೀ ಟ್ರಸ್ಟ ,ಜಿಲ್ಲಾಡಳಿತ, ನಗರ ಸಭೆ, ಅರಣ್ಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪರಿಸರ ಪ್ರಿಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ  ದಿನಾಂಕ ೩-೦೭-೨೦೧೩ ರಿಂದ ೦೭-೦೭-೨೦೧೩ ರವರೆಗೆ  ೫ ದಿವಸಗಳವರೆಗೆ ನಿರಂತರವಾಗಿ ೨೫ ಸಾವಿರ ಸಸಿಗಳನ್ನು  ಆಯಾ ವಾರ್ಡುಗಳಲ್ಲಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಈ ಕಾರ್ಯಕ್ರಮದಲ್ಲಿ ನಗರಸಭೆಯ ಎಲ್ಲ ನೂತನ ಸದಸ್ಯರು ತಮ್ಮ ತಮ್ಮ ವಾರ್ಡುಗಳಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳುವದರ ಮೂಲಕ ತಮ್ಮ ಅಭಿವೃದ್ಧಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕೆಂದು  ಕರೆನೀಡಿದರು.  ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ   ತುಳಸಿ ಮದ್ದಿನೇನಿ , ಶಾಸಕ   ರಾಘವೇಂದ್ರ ಹಿಟ್ನಾಳ್ ,ಅರಣ್ಯಾಧಿಕಾರಿಗಳಾದ   ರಾಜಶೇಖರ ಮೂರ್ತಿ ಮಾತನಾಡಿ ಸಂಪೂರ್ಣ ಸಹಾಯ ಸಹಕಾರ ನೀಡುವದಾಗಿ ಮಾತನಾಡಿದರು. ಸಭೆಯಲ್ಲಿ ನೂತನ ನಗರ ಸಭೆ ಸದಸ್ಯರು, ಪುರ ಪ್ರಮುಖರು ಭಾಗವಹಿಸಿದ್ದರು. 
Please follow and like us:
error