You are here
Home > Koppal News > ಬಾಬಣ್ಣ ಕಲ್ಮನಿ ಇವರ ಗೌರವಾರ್ಥ ಅಜಾತ ಶತ್ರು ಶ್ರೀನಾಗಲಿಂಗ ಲೀಲೆ ನಾಟಕ ಪ್ರದರ್ಶನ

ಬಾಬಣ್ಣ ಕಲ್ಮನಿ ಇವರ ಗೌರವಾರ್ಥ ಅಜಾತ ಶತ್ರು ಶ್ರೀನಾಗಲಿಂಗ ಲೀಲೆ ನಾಟಕ ಪ್ರದರ್ಶನ

ಕೊಪ್ಪಳ: ನಗರದಲ್ಲಿನ ಸಾಹಿತ್ಯ ಭವನದಲ್ಲಿ ದಿನಾಂಕ ೨೧-೦೭-೨೦೧೩ ರವಿವಾರ ಸಂಜೆ ೬-೩೦ ಕ್ಕೆ   ಹಿರಿಯ ರಂಗ ಕಲಾವಿದರಾದ ಕುಕನೂರನ    ಬಾಬಣ್ಣ  ಕಲ್ಮನಿ ಇವರ ಗೌರವಾರ್ಥ ಶ್ರೀ ಶಿವಶಂಕೆರ ವಿರಚಿತ ಅಜಾತ ಶತ್ರು ಶ್ರೀನಾಗಲಿಂಗ ಲೀಲೆ  ನಾಟಕ ಪ್ರದರ್ಶನ ನಡೆಯಲಿದೆ.   ಉದ್ಘಾಟನೆಯನ್ನು  ಸ್ಥಳೀಯ ಶಾಸಕರಾದ   ರಾಘವೇಂದ್ರ ಹಿಟ್ನಾಳ ನೆರವೇರಿಸುತ್ತಾರೆ. ಅಧ್ಯಕ್ಷತೆಯನ್ನು   ಬಸವರಾಜ ರಾಯರೆಡ್ಡಿ ಶಾಸಕರು ಯಲಬುರ್ಗ ವಹಿಸಲಿದ್ದಾರೆ.  ಅತಿಥಿಗಳಾಗಿ ಗಂಗಾವತಿ ಶಾಸಕರಾದ  ಇಕ್ಬಾಲ್ ಅನ್ಸಾರಿ, ವಿಧಾ ಪರಿಷತ್ ಸದಸ್ಯರಾದ ಶ್ರೀ ಹಾಲಪ್ಪಾಚಾರ, ಕುಷ್ಟಗಿ ಶಾಸಕರಾದ   ದೊಡ್ಡನಗೌಡ ಪಾಟೀಲ,   ವಿಠ್ಠಲ ಪೂಜಾರಿ ಜಂಟಿ ನಿದೇಶಕರು ಮಾರುಕಟ್ಟೆ ಇಲಾಖೆ,   ಟಿ.ಜನಾರ್ದನ ಅಧ್ಯಕ್ಷರು ಜಿ.ಪಂ.ಕೊಪ್ಪಳ,  ವೈದ್ಯ ಡಾ.ಮಲ್ಲಿಕಾರ್ಜುನ ರಾಂಪುರೆ ಕೊಪ್ಪಳ,  ಉದ್ದಿಮೆದಾರ   ಶ್ರೀನಿವಾಸಗುಪ್ತಾ ಭಾಗ್ಯನಗರ,   ದಾನಪ್ಪ ಕವಲೂರ ಭಾಗ್ಯನಗರ,   ವೆಂಕನಗೌಡ ಪಾಟೀಲ ವಿಶ್ರಾಂತ ತಹಸಿಲ್ದಾರರು ಕೊಪ್ಪಳ  ಇವರು ಆಗಮಿಸಲಿದ್ದಾರೆ.  ಈ ಕಾರ್ಯಕ್ರಮದಲ್ಲಿ    ಬಾಬಣ್ಣ  ಕಲ್ಮನಿ ಮತ್ತು ಶ್ರೀಮತಿ ಮೆಹಬೂಬಿ ಕಲ್ಮನಿ ದಂಪತಿಗಳಿಗೆ ಸನ್ಮಾನ ಹಾಗೂ ಹಮ್ಮಿಣಿ ಅರ್ಪಣೆ ಇದೆ. ಸಕಲರು ಈ ನಾಟಕ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕೆಂದು ಅಧ್ಯಕ್ಷರು ಹಾಗೂ ಅಭಿನಂಧನಾ ಸಮಿತಿಯ  ಕುಕನೂರನ  ಹಾಗೂ ಕೊಪ್ಪಳ ಸದಸ್ಯರ ಪರವಾಗಿ ಅಲ್ಲಮಪ್ರಭು ಬೆಟ್ಟದೂರ ಹಾಗೂ ಎಚ್.ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Leave a Reply

Top