ವೀರಣ್ಣ ತಂದೆ ಶಾಂತಪ್ಪ ಮುದಗಲ್ ನಿಧನ ವಾರ್ತೆ

ಕೊಪ್ಪಳ, ಮೇ.೨೦: ನಗರದ ಹಿರಿಯ ಕಿರಾಣಿ ವರ್ತಕರಾಗಿದ್ದ ವೀರಣ್ಣ ತಂದೆ ಶಾಂತಪ್ಪ ಮುದಗಲ್, ವಾರಕರ್ ಓಣಿ ಕೊಪ್ಪಳ ಇವರು ಇಂದು ದಿ.೨೦ ರಂದು ಬೆಳ್ಳಿಗ್ಗೆ ೯.೩೦ ಕ್ಕೆ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ. 
ಇವರಿಗೆ ೯೫ ವರ್ಷ ವಯಸ್ಸಾಗಿತ್ತು. ಮೃತರು ಹೆಂಡತಿ, ನಾಲ್ಕು ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು.ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ತೃತೀಯ ಮಗನಾದ ಮಂಜುನಾಥ ವಿ. ಮುದಗಲ್ ನಗರದ ಖ್ಯಾತ ವಕೀಲರಾಗಿದ್ದಾರೆ. ಮೃತರ ಅಂತ್ಯ ಕ್ರಿಯೆಯನ್ನು ಇಂದು ಸಂಜೆ ವೀರಶೈವ ಪದ್ಧತಿಯಂತೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಸಲಾಗುವುದು ಎಂದು ಅಮರದೀಪ ಎ.ಆರ್. ತಿಳಿಸಿದ್ದಾರೆ.
Please follow and like us:
error