ಜಾತ್ರೆಯ ರಕ್ತದಾನ ಶಿಬಿರದಲ್ಲಿ ಇಂದು ೧೭೮ ಜನರು ರಕ್ತದಾನ

 ಕೊಪ್ಪಳ: ಕೊಪ್ಪಳ ಗವಿಮಠದ ಜಾತ್ರೆಯಲ್ಲಿ  ಕೊಪ್ಪಳ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಜರುಗುತ್ತಿದ್ದು ಹೆಮ್ಮೆಯ ವಿಷಯ. ಈ ರಕ್ತದಾನ ಶಿಬಿರದ ಎರಡನೇ ದಿನದಲ್ಲಿ ದಿನಾಂಕ ೯-೧-೨೦೧೫ ರಂದು  ೧೭೮ ಜನರು ರಕ್ತದಾನ ಮಾಡಿದರೆಂದು ಕೊಪ್ಪಳ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ ಶ್ರೀನಿವಾಸ ಹ್ಯಾಟಿ  ತಿಳಿಸಿದ್ದಾರೆ. ಇಂದು ಸಹ ಜಾತ್ರೆಗೆ  ಬಂದಿರುವ ಹಲವು ಭಕ್ತರು ಸ್ವಯಂಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನ ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ರೋಗಿಗಳಿಗೆ ಜೀವದಾನ ಮಾಡುವಲ್ಲಿ ಮಾನವೀಯತೆ ಮೆರೆದರು.  

Leave a Reply