ಅರಿವು ಸಾಲ ಯೋಜನೆ ಆದಾಯ ಮಿತಿ ೪.೫ ಲಕ್ಷ ದಿಂದ ೬ ಲಕ್ಷ ರೂ. ಗೆ ಏರಿಕೆ.

ಕೊಪ್ಪಳ, ಜು. ೦೧ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅರಿವು ಸಾಲ ಯೋಜನೆಯಡಿ ಸಾಲ ಪಡೆಯಲು ಚಾಲ್ತಿಯಲ್ಲಿದ್ದ ಕೌಟುಂಬಿಕ ವಾರ್ಷಿಕ ಆದಾಯ ಮಿತಿಯನ್ನು ೪.೫೦ ಲಕ್ಷ ರೂ. ದಿಂದ ೦೬ ಲಕ್ಷ ರೂ.ಗಳಿಗೆ ಸರ್ಕಾರದ ಆದೇಶದನ್ವಯ ಪರಿಷ್ಕರಿಸಲಾಗಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಝಾಕೀರಹುಸೇನ ಕುಕನೂರು ತಿಳಿಸಿದ್ದಾರೆ. ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಮತ್ತು ಆಂಗ್ಲೋ ಇಂಡಿಯನ್ (೨ಎ, ೨ಬಿ, ೩ಎ, ೩ಬಿ) ಸಮುದಾಯದ ವಿದ್ಯಾರ್ಥಿಗಳಿಗೆ  ಎಂ.ಬಿ.ಬಿ.ಎಸ್, ಬಿ.ಬಿ.ಎ, ಬಿ.ಇ, ಎಂ.ಇ, ಡಿ.ಎಡ್, ಬಿ.ಎಡ್, ಎಂ.ಸಿ.ಎ, ಎಮ್.ಎ, ಎಂ.ಎಸ್.ಸಿ, ಬಿ.ಡಿ.ಎಸ್, ಬಿ.ಎ.ಎಂ.ಎಸ್, ಎಂ.ಬಿ.ಎ, ಎಂ.ಡಿ, ಎಂ.ಎ, ಎಂ.ಕಾಂ, ಬಿ.ಬಿ.ಎಂ, ಬಿ.ಸಿ.ಎ, ಬಿ.ಎಸ್.ಸಿ, ಎಲ್.ಎಲ್.ಬಿ, ಬಿ.ಎಸ್.ಡಬ್ಲ್ಯು, ಎಂ.ಸಿ.ಡಬ್ಲು, ಡಿಪ್ಲೋಮಾ, ಐ.ಟಿ.ಐ, ಎಂ.ಎಸ್ (ಅಗ್ರಿಕಲ್ಚರ್), ಬಿ.ಫಾರ್ಮಾ, ಬಿ.ಎಸ್.ಸಿ (ನರ್ಸಿಂಗ್), ಬಿ.ಎಸ್.ಸಿ (ಬಯೋಟೆಕ್), ಎಮ್.ಎಸ್.ಡಬ್ಲ್ಯು  ಇತ್ಯಾದಿ ಕೋರ್ಸುಗಳಿಗೆ ಅರಿವು ಸಾಲ ಯೋಜನೆಯಡಿ ಸಾಲ ಪಡೆಯಲು ಕೌಟುಂಬಿಕ ವಾರ್ಷಿಕ ಆದಾಯ ಮಿತಿಯನ್ನು ಚಾಲ್ತಿಯಲ್ಲಿದ್ದ ೪.೫೦ ಲಕ್ಷದಿಂದ ೬.೦೦ ಲಕ್ಷಕ್ಕೆ ಸರ್ಕಾರದ ಆದೇಶದನ್ವಯ ಪರಿಷ್ಕರಿಸಲಾಗಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಈ ಪರಿಷ್ಕರಣೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಪಿಜಿಸಿಇಟಿ ಮತ್ತು ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲ್ಪಡುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಹಾಜರಾಗುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲು ನಿಗಮದಿಂದ ಪಡೆದ ಸಾಲದ ಅರ್ಜಿಯೊಂದಿಗೆ ಇತ್ತೀಚಿನ ೦೪ ಫೋಟೋ, ಆಧಾರಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಿಇಟಿ ಸಂಖ್ಯೆ, ಸಿಇಟಿ ಅರ್ಜಿ ಸಂಖ್ಯೆ ಮತ್ತು ದೂರವಾಣಿ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಭವನ, ಕೊಪ್ಪಳ ಕಛೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ : ೦೮೫೩೯-೨೨೫೦೦೮ ನ್ನು ಸಂಪರ್ಕಿಸುವಂತೆ ತಿಳಿಸಿದೆ.
Please follow and like us:

Leave a Reply