fbpx

ಎಲ್.ಐ.ಸಿ ಯ ೫೯ ನೇ ಸಂಸ್ಥಾಪನಾ ದಿನಾಚರಣೆ.

ಗಂಗಾವತಿ-02- ಎಲ್ ಐ ಸಿ ಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗಂಗಾವತಿಯ ಶಾಖೆಯಲ್ಲಿ ವಿಮಾ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಗಂಗಾವತಿ ಶಾಖೆಯ ಈ ದಿನದ ಪ್ರಥಮ ಪಾಲಿಸಿ ಕಂತನ್ನು ಸಂದಾಯ ಮಾಡಲು ಬಂದ ಪಂಪಾಪತಿ ಪೋಲೀಸ್ ಇಲಾಖೆ ಇವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಜೀವ ವಿಮಾ ಸಂಸ್ಥೆಯು ನಮ್ಮ ಪಾಲಿಸಿದಾರರಿಗೆ ಉತ್ತಮ ಸೇವೆಯನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಶಾಖಾಧಿಕಾರಿಗಳಾದ ಹೆಚ್.ಸಿ.ಲೋಕೇಶ್ ರವರು ಮಾತಾಡುತ್ತಾ ಈ ಸಂಸ್ಥೆಯು ನಮ್ಮದೇಶದ ಆರ್ಥಿಕ ಬೆನ್ನೆಲುಬಾಗಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಎಂದು ತಿಳೀಸಿದರು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಆರ್.ಎಸ್.ಮಲ್ಲಿಕಾರ್ಜುನ, ಏ.ಓ.ಸುದರ್ಶನ, ಏ.ಏ.ಓ ಮರಿಬಸ್ಸಪ್ಪ,

ಭಿ.ರಾಮಪ್ಪ, ಮಧು ನೆಲಪಟ್ಲ, ಜಿ.ಎಮ್. ಸಿಂಗ್, ಸರಸ್ವತಿ, ಶ್ರೀಲತಾ, ಧೀರೇಂದ್ರ, ಅಭಿವೃದ್ಧಿ ಅಧಿಕಾರಿಗಳಾದ ಎಸ್.ಬಿ.ಬುಳ್ಳಾ, ಎಸ್.ವಿ.ಜೋಷಿ, ಫಣಿರಾಜ, ಗುರುಪ್ರಸಾದ, ಪ್ರತಿನಿಧಿಗಳಾದ ಬಿ. ಮಲ್ಲಿಕಾರ್ಜುನ್, ನಾಗರಾಜ ಶೆಟ್ಟಿ ಮತ್ತು ಕಾರ್ಯದರ್ಶಿಗಳಾದ ಶ್ರೀಧರಾಚಾರ್ಯ ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!