fbpx

ಹೃದಯ ಕಾಯಿಲೆ ಚಿಕಿತ್ಸೆಗೆ ಸಹಾಯ ಕೋರಿ ಮನವಿ

ಕೊಪ್ಪಳ,ನ,10-  ನಗರದ ದಿಡ್ಡಿಕೇರಿಯ ಬಡ ನಿವಾಸಿ ಕೂಲಿ ಕಾರ್ಮಿಕ ಮೈನುದೀನ್ ಡೋಣಿ ಎಂಬುವವರ ಮಗಳಾದ ಕು.ನಸರೀನ್ ಬಾನು(೧೭)ಎಂಬ ಯುವತಿಗೆ ತೀವ್ರ ಹೃದಯ ಕಾಯಿಲೆ ಲೈಂ ಫೋಮೋ ಥೈಮೋಮೋ ಎಂಬ ಕ್ಯಾನ್ಸರ್ ಇದ್ದು ಈಗ ಬೆಂಗಳೂರಿನ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬಿಪಿಎಲ್ ಪಡಿತರ ಚೀಟಿ ಮೇಲೆ ಸುಮಾರು ೨ಲಕ್ಷ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಈಗಾಗಲೇ ೧ ತಿಂಗಳದಿಂದ ಸುಮಾರು ೧ಲಕ್ಷರೂ ಖರ್ಚಾಗಿರುತ್ತದೆ. ಕನಿಷ್ಟ ಇನ್ನೂ ೨ ಲಕ್ಷರೂ ಬೇಕಾಗಿರುತ್ತದೆ. ತೀವ್ರ ಕಡುಬಡ ಕುಟುಂಬದವರಾಗಿದ್ದು ಮಗಳ ಹೃದಯ ಕಾಯಿಲೆ ಚಿಕಿತ್ಸೆಗೆ ಪತ್ರಿಕಾ ಪ್ರಕಟಣೆ ಮೂಲಕ ಮೈನುದೀನ್ ಡೋಣಿಅವರು ಮನವಿ ಮಾಡಿಕೊಂಡಿದ್ದಾರೆ. ಸಹಾಯ ಧನ ಮಾಡಬಯಸುವವರು ಕೊಪ್ಪಳ ಶಾಖೆಯ ಆಂಧ್ರ ಬ್ಯಾಂಕ್ ಖಾತೆ ೧೯೫೧೧೦೧೦೦೦೬೩೦೧೧ಕ್ಕೆ  ಮೈನುದೀನ್ ತಂದೆ ರಹೇಮಾನ ಸಾಬ್ ದೋಣಿ ರವರ ಖಾತೆ ಸಂಖ್ಯೆಗೆ ಸಹಾಯ ಧನ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ೯೯೬೪೪೪೫೫೭೧ ಕ್ಕೆ ಸಂಪರ್ಕಿಸಬಹುದಾಗಿದೆ.

Please follow and like us:
error

Leave a Reply

error: Content is protected !!