ಪೇಶ ಇಮಾಮ್ ಮತ್ತು ಮೌಜ್ಜನರ ಗೌರವಧನ ಅರ್ಜಿ ಆಹ್ವಾನ.

ಕೊಪ್ಪಳ, ಜ.೦೨ (ಕ ವಾ) ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಮಸ್ಜೀದ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಜ್ಜನರಿಗೆ ಗೌರವಧನ ನೀಡಲಾಗುತ್ತಿದ್ದು, ಅರ್ಜಿ ಆಹ್ವಾನಿಸಲಾಗಿದೆ.
     ಸರ್ಕಾರದಿಂದ ಗೌರವಧನವನ್ನು ಇದುವರೆಗೂ ಪಡೆಯದವರು, ಬೇರೆಯವರ ಹೆಸರಿನ ಖಾತೆಗೆ ಗೌರವಧನ ಜಮಾ ಆದವರು ಮತ್ತು ಹೊಸದಾಗಿ ಗೌರವಧನ ಪಡೆಯಲಿಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಭರ್ತಿ ಮಾಡಿದ ಅರ್ಜಿಯೊಂದಿಗೆ ೧೦೦೦ ರೂ.ಗಳು ಜಮಾ ಇರುವ ಹಾಗೂ ಬ್ಯಾಂಕಿನಲ್ಲಿ ಡಿ.೩೧ ರವರೆಗಿನ ವ್ಯವಹಾರದ ಪಟ್ಟಿಯನ್ನು ನಮೂಸಿಕೊಂಡು ಬಂದಿರುವ, ತಮ್ಮ ಬ್ಯಾಂಕ್ ಖಾತೆಯ ಪುಸ್ತಕದ ವಿವರ ಮತ್ತು ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಒಂದು ವಾರದೊಳಗಾಗಿ ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯಕ್ಕೆ, ಕಛೇರಿ ಸಮಯದಲ್ಲಿ ಸಲ್ಲಿಸಬಹುದಾಗಿದೆ. 
      ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಕಾರ್ಯಾಲಯ, ಜಿಲ್ಲಾಡಳಿತ ಭವನ, ಕೊಪ್ಪಳ, ದೂರವಾಣಿ ಸಂಖ್ಯೆ ೦೮೫೩೯-೨೨೧೦೪೫ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು  ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವಕ್ಫ್ ಅಧಿಕಾರಿ ಅತಾವುಲ್ಲಾ ಖಾನ್ ಅವರು ತಿಳಿಸಿದ್ದಾರೆ. 
Please follow and like us:
error