ಸಿರಿಗನ್ನಡ ರಂಜಿನಿ ಕವನ ಸಂಕಲನಕ್ಕೆ ಕವಿತೆಗಳ ಆಹ್ವಾನ

ಕೊಪ್ಪಳ: ಸಿರಿಗನ್ನಡ ರಂಜನಿ ಸಾಂಸ್ಕೃತಿಕ ಸಂಸ್ಥೆ (ರಿ) ಮುರಡಿ ಇವರ ಆಶ್ರಯದಲ್ಲಿ ಸಿರಿಗನ್ನಡ ರಂಜಿನಿ ಎಂಬುವ ಶಿರ್ಷಿಕೆಯಡಿ ರಾಜ್ಯೋತ್ಸವದ ಅಂಗವಾಗಿ ಉದಯೋನ್ಮುಖ ಬರಹಗಾರರಿಂದ ಕವಿತೆಗಳನ್ನು ಸಂಗ್ರಹಿಸಿ, ಈ ತಿಂಗಳ ಕೊನೆಯಲ್ಲಿ ಕವನ ಸಂಕಲನ ಹೊರತರುವ ಉದ್ದೇಶ ಹೊಂದಿದೆ. 
ಕನ್ನಡ ನಾಡು-ನುಡಿ ಸಾಂಸ್ಕೃತಿ ಸಂಪ್ರದಾಯ ಮತ್ತು ಸಾಮಾಜಿಕ ವಿಡಂಬನಾತ್ಮಕ ವಿಷಯಗಳ ಕುರಿತಾದ ಕವಿತೆಗಳಿಗೆ ಆದ್ಯತೆ ನೀಡಲಾಗುವದು. ಕರ್ನಾಟಕದ ಎಲ್ಲ ಕವಿಗಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಮುಖ್ಯವಾಗಿ ಕಾಲಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ಉದಯೋನ್ಮುಖ ಲೇಖಕರಿಗೆ ಆದ್ಯತೆ ನಿಡುವುದರ ಮೂಲಕ ಪ್ರೋತ್ಸಾಹಿಸಲಾಗುವುದು. 
ಕವಿತೆಗಳನ್ನು ಕಳುಹಿಸಿಕೊಂಡು ಮಲ್ಲನಗೌಡ ಬಿ. ಮಾಲಿಪಾಟೀಲ ಅಧ್ಯಕ್ಷರು. ಸಿರಿಗನ್ನಡ ರಂಜನಿ ಸಂಸ್ಥೆ (ರಿ) ಮುರಡಿ  ೫೮೩೨೩೭ ತಾ|| ಯಲಬುರ್ಗಾ ಜಿ|| ಕೊಪ್ಪಳ, ಮತ್ತು  ranjiani@gmail.com  ಈ ವಿಳಾಸಕ್ಕೆ  ಕಳುಹಿಸಲು ಸೂಚಿಸಲಾಗಿದೆ. 
 ಕವನಗಳನ್ನು ಕಳುಹಿಸಲು ೧೫-೧೧-೨೦೧೨ ಕೊನೆಯ ದಿನಾಂಕ ವಾಗಿರುತ್ತದೆ. 
ಹೆಚ್ಚಿನ ಮಾಹಿತಿಗಾಗಿ ೯೬೩೨೧೨೦೬೫ ಈ ದೂರವಾಣಿಗೆ ಸಂಪರ್ಕಿಸಿ.  
Please follow and like us:
error