ಶ್ರೀನಿವಾಸ ಪಂಡಿತ್‌ಗೆ ಅಂತರಾಷ್ಟ್ರೀಯ ಕರಾಟೆಯಲ್ಲಿ ಕಂಚು : ಅಭಿನಂದನೆ


ಕೊಪ್ಪಳ, ಜೂ. ೨. ಕೊಪ್ಪಳ ಜಿಲ್ಲೆಯ ಅಂತರಾಷ್ಟ್ರೀಯ ಕರಾಟೆಪಟು ಶ್ರೀನಿವಾಸ ಶಂ. ಪಂಡಿತ್‌ರಿಗೆ ನೇಪಾಳ ದೇಶದ ಕಠ್ಮಂಡುವಿನಲ್ಲಿ ಇದೇ ತಿಂಗಳು ೨೭ ರಿಂದ ೩೦ ರವರೆಗೆ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನ ಫೈಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಲಭಿಸಿದೆ.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮಂಜುನಾಥ ಜಿ. ಗೊಂಡಬಾಳ, ಮಲ್ಲಿಕಾರ್ಜುನ ಕೊತಬಾಳ, ಸುರೇಶ ಬಡಿಗೇರ, ಮಂಜುನಾಥ ಡಿ. ಡೊಳ್ಳಿನ ಅಭಿನಂದನೆ ತಿಳಿಸಿದ್ದಾರೆ. 
 ನೇಪಾಳ ದೇಶದ ಕಠ್ಮಂಡುವಿನಲ್ಲಿ ಇದೇ ತಿಂಗಳು ೨೭ ರಿಂದ ೩೦ ರವರೆಗೆ ನಡೆಯುವ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ ಮಾಡಿ ಸೋಮುವಾರ ನಗರಕ್ಕೆ ಆಗಮಿಸುವ ಅವರಿಗೆ ಸ್ನೇಹಿತ ಬಳಗ ಸನ್ಮಾನ ಮಾಡಲಿದ್ದು, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊಪ್ಪಳದಲ್ಲಿ ಕರಾಟೆಗೆ ಹೆಚ್ಚಿನ ಸಹಾಯ ಸಹಕಾರ ನೀಡುವದರೊಂದಿಗೆ ಇಲ್ಲಿನ ಕರಾಟೆಪಟುಗಳಿಗೆ ನೆರವಾಗುವದರೊಂದಿಗೆ, ಕ್ರೀಡಾ ಇಲಾಖೆಯಲ್ಲಿ ಇರುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಯೋಜನೆ ರೂಪಿಸಬೇಕು, ಇಲಾಖೆಗೆ ಖಾಯಂ ಅಧಿಕಾರಿಯನ್ನು ನಿಯುಕ್ತಿಗೊಳಿಸಬೇಕು ಎಂದು ಉಸ್ತುವಾಇ ಸಚಿವ ಶಿವರಾಜ ತಂಗಡಗಿಯವರನ್ನು ಒತ್ತಾಯಿಸಿದ್ದಾರೆ.

Please follow and like us:
error