You are here
Home > Koppal News > ಪುಣ್ಯಸ್ಮರಣೆಯ ಕಾರ್ಯಕ್ರಮ

ಪುಣ್ಯಸ್ಮರಣೆಯ ಕಾರ್ಯಕ್ರಮ

ಕೊಪ್ಪಳ: ಲಿಂ.ಶ್ರೀ ಮ.ನಿ.ಪ್ರ.ಸ್ವ.ಜ.ಮರಿಶಾಂತವೀರ ಮಹಾಸ್ವಾಮೀಜಿಗಳು  ಈ ನಾಡಿನ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಅರಿತಿದ್ದರು. ಅಂತಯೇ ಅವರು  ಎಸ್.ಜಿ.ಟ್ರಸ್ಟ ಸ್ಥಾಪಸಿ  ಅದರ ಅಡಿಯಲ್ಲಿ  ಶಾಲಾ, ಕಾಲೇಜುಗಳನ್ನು ಸ್ಥಾಪಿಸುವದರ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು.  ಇಂದು ಬೃಹದಾಕಾರವಾಗಿ ತಲೆಯೆತ್ತಿ ನಿಂತಿರುವ ಎಲ್ಲ ಶಿಕ್ಷಣ ಸಂಸ್ಥೆಗಳು  ಲಿಂ.ಪೂಜ್ಯ ಮರಿಶಾಂತವೀರ ಸ್ವಾಮಿಗಳ  ಹಿರಿಯ ಸಂಕಲ್ಪಗಳಲ್ಲೊಂದಾಗಿದೆ  ಎಂದು ಹಿರಿಯ ನ್ಯಾಯವಾದಿಗಳಾದ ವಿ.ಎಂ.ಭೂಸನೂರಮಠ  ನುಡಿದರು. ಅವರು ಶ್ರೀಗವಿಸಿದ್ಧೇಶ್ವರ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳು ಜಂಟಿಯಾಗಿ ಆಯೋಜಿಸಿದ್ಧ ಶೀ.ಮ.ನಿ.ಪ್ರ.ಜ.ಲಿಂ ಮರಿಶಾಂತವೀ

ರ ಮಹಾಸ್ವಾಮಿಗಳ ೪೬ ನೇ ಪೂಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿಂದು ಉಪನ್ಯಾಸಕರಾಗಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು  ಕರ್ನಾಟಕದಲ್ಲಿ  ಶಿಕ್ಷಣ ಕಟ್ಟುವಲ್ಲಿ ವೀರಶೈವ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಈ ದಿಸೆಯಲ್ಲಿ ಶ್ರೀಗವಿಮಠದ ಪೂಜ್ಯ ಲಿಂ.ಮರಿಶಾಂತವೀರ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವದರ ಜೊತೆಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ವಸತಿ ಒದಗಿಸಿ ಆಶ್ರಯ ಕೊಟ್ಟಿದ್ದರು.  ಇವರು ಬಹುಭಾಷಾ ಬಲ್ಲವರಾಗಿದ್ದರು. ಜೊತೆಗೆ ಆಯುರ್ವೇದ ಪಂಡಿತರಾಗಿ ನಾಡಿನ ಹಲವಾರು ಭಕ್ತರ ರೋಗಗಳನ್ನು ನಿವಾರಿಸುತ್ತಿದ್ದರು.  ಶುಚಿತ್ವಮನಸುಳ್ಳವರು,ಲಿಂಗಪೂಜಾನಿಷ್ಟರು,ತಪಸ್ವಿಗಳಾಗಿ ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದರು ಎಂದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಲ್ ಮಾಲೀಪಾಟೀಲ ವಹಿಸಿ ಮಾತನಡಿದರು. ವೇದಿಕೆಯಲ್ಲಿ  ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪರೀಕ್ಷಿತರಾಜ ಉಪಸ್ಥಿತರಿದ್ದರು. ನಿರೂಪಣೆ ಪ್ರೊ.ಶರಣಬಸಪ್ಪ ನೆರವೇರಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳುಭಾಗವಹಿಸಿದ್ದರು.

Leave a Reply

Top