fbpx

ಕಾಂಗ್ರೆಸ್ ಮುಕ್ತ ಭಾರತ – ಮಲ್ಕಾಪುರೆ ಕರೆ.

   ದಿ.೨೩/೦೨/೨೦೧೪ ರಂದು ನಡೆಯಲಿರುವ ರಾಜ್ಯ ಬಿ.ಜೆ.ಪಿ ಘಟಕದಿಂದ ಹಿಂದೂಳಿದ ವರ್ಗದ ಸ್ವಾಬಿಮಾನಿ ಸಮಾವೇಶದ ಪೂರ್ವ ಭಾವಿಸಿದ್ದತೆ ಸಭೆಗೆ ಕೊಪ್ಪಳ ಜಿಲ್ಲಾ ಬಿ.ಜೆ.ಪಿ ಕಾರ್ಯಲಯದಲ್ಲಿ ಇಂದು ಆಗಮಿಸಿದ ರಾಜ್ಯ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿಯಾದ ರಘುನಾಥ್ ಮಲ್ಕಾಪುರೆಯವರು ಕಾರ್ಯಕರ್ತ

ರನ್ನು ಉದ್ದೇಶಿಸಿ. ಯು.ಪಿ.ಎ. ಸರಕಾರದ ಭ್ರಷ್ಠಾಚಾರವನ್ನು ಏಳೆ ಏಳೆಯಾಗಿ ಬಿಚ್ಚಿಟ್ಟರು. ಭಾರತ ದೇಶದ ಇತಿ

ಹಾಸದಲ್ಲಿ ಯಾರು ಮಾಡದ ಸಾಧನೆಗಳನ್ನು ಈ ಹಿಂದೆ ವಾಜಪೇಯಿ ಸರಕಾರ ಮಾಡಿತ್ತು. ಕಾಂಗ್ರೆಸ್ ಕೇವಲ್ ಮತ ಬ್ಯಾಂಕ್‌ಗಾಗಿ ಹಿಂದೂಳಿದವರನ್ನು ಉಪಯೋಗಿಸಿಕೊಳ್ಳುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ೬೫ ವರ್ಷ ದೇಶವನ್ನು ಆಳಿದ ಕಾಂಗ್ರೆಸ್‌ಗೆ ಒಬ್ಬ ಹಿಂದೂಳಿದ ವರ್ಗದ ವ್ಯಕ್ತಿಯನ್ನು  ಪ್ರಧಾನಿ ಆಗಲಿಲ್ಲ ಏಕೆ ಎಂದು ಪ್ರಶ್ನಿಸಿದರು?  ಯು.ಪಿ.ಎ.ಸರಕಾರವು ಪಾತಾಳದಲ್ಲಿ ಭೂಮಿಯ ಮೇಲೆ ಆಕಾಶದಲ್ಲಿ ಎಲ್ಲಾ ಕಡೆಗೂ ಭ್ರಷ್ಟಾಚಾರ ತಾಂಡವಾಡುತ್ತಾ ಬಂದಿದೆ. ಹಾಗೂ ದೇಶದ ಭದ್ರತೆಗೆ ದಕ್ಕೆ ತಂದಿದೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಮಾನವನ್ನು ಹರಾಜು ಮಾಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು. ಹಾಗೂ ಈ ಚುನಾವಣೆಯೂ ಕೇವಲ ೨ ಪಕ್ಷ ಹಾಗೂ ೨ ಜಾತಿಯ, ಇಬ್ಬರ ನಾಯಕರ ನಡುವೆ ನಡಿಯುವ ಚುನಾವಣೆಯಲ್ಲ ಇದು ಸಮೃದ್ದ ಭಾರತ ಸಂಕಲ್ಪಕ್ಕಾಗಿ ಅಭಿವೃದ್ದಿಯ ಪರ ಭಾರತಕ್ಕಾಗಿ ನಡೆಯುವ ಸ್ವಾಭಿಮಾನಿ ಚುನಾವಣೆ ಇದನ್ನು ದೇಶದ ಜನತೆ ಗಂಭಿರವಾಗಿ ತಗೆದುಕೊಂಡು ಭಾರತ  ದೇಶದ ಭವಿಷ್ಯದ ರಾಜಕಾರಣ ಹಾಗೂ ರಾಷ್ಟ್ರದ ನೇತಾರ, ಗುಜರಾತಿನಲಲಿ ಅಭಿವೃದ್ದಿಯ ಶೆಕೆಯನ್ನು ಕ್ರಾಂತಿ ಮಾಡಿದ ನರೇಂದ್ರ ಮೊದಿಯನ್ನು ಪ್ರಧಾನಿಯನ್ನಾಗಿ ಭಾರತದ ದೇಶದ ಜನ ಪ್ರತಿಜ್ಞೆ ಸ್ವಿಕರಿಸಬೇಕೆಂದು ಕರೆಕೊಟ್ಟರು.

ಮಾಜಿ ಸಚಿವರಾದ ಸುನೀಲ ವೈಲಾಪೂರೆ ಮಾತನಾಡಿ ಹೈದ್ರಾಬಾದ ಕರ್ನಾಟಕದಲ್ಲಿ ೩೭೧ ಕಲಂ ಜಾರಿಗೆ ಬರಬೇಕಾದರೆ ಸುಮ್ಮನೆ ಬರಲಿಲ್ಲ ವೈಜನಾಥ ಪಟೇಲರ ಜೋತೆಗೂಡಿ ನಾವೆಲ್ಲರೂ ಹೋರಾಟದಿಂದ ಬಂದ ಈ ಸೌಲಭ್ಯ ಈ ಭಾಗಕ್ಕೆ ಬರುವಂತಾಯಿತು. ಎಂದು ಹೇಳಿದರು. ಇದನ್ನು ಉಪಯೋಗ ಮಾಡಿಕೊಂಡು ಕಾಂಗ್ರೆಸ್ಸಿನವರು ಮಲ್ಲಿಕಾರ್ಜುನ ಖರ್ಗೆ, ಧರಮಸಿಂಗ್ ಇವರಿಂದಲೆ ೩೭೧ ನೇ ಕಲಂ ಜಾರಿಯಾಗಿದ್ದು ಎಂದು ಬಿಂಬಿಸುತ್ತಿರುವುದು ಹೋರಾಟಗಾರರಿಗೆ ಮಾಡಿರುವ ಅಪರಾದ 
ಪ್ರಾರಂಭದಲ್ಲಿ ಸಭೆಯ ಅಧ್ಯಕ್ಷತೆಯನನು ವಹಿಸಿದ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ ಮಾತನಾಡುತ್ತಾ ರಾಷ್ಟ್ರದ ಹಿತದೃಷ್ಠಿಯಿಂದ ಜನರ ಕಲ್ಯಾಣಕ್ಕಾಗಿ ಯುವಕರು ಒಂದು ಗೂಡಿ ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡಿ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಲು ತಮ್ಮ ಕೊಡುಗೆ ನೀಡಬೇಕೆಂದು ಹೇಳಿದರು.  
ಈ ಸಭೆಯಲ್ಲಿ ಸಂಸದರಾದ ಶಿವರಾಮೆಗೌಡ, ವಿಧಾನ ಪರಿಷತ್ತ ಸದಸ್ಯರಾದ ಹಾಲಪ್ಪ ಆಚಾರ, ಮಜಿ ಶಾಸಕರಾದ ಪರಣ್ಣ ಮನವಳ್ಳಿ, ಮಾಜಿ ಸಂಸದರಾದ ಕೆ.ವಿರುಪಾಕ್ಷಪ್ಪ, ಅಶೋಕ ದಸ್ತಿ, ಬಿ.ಜೆ.ಪಿ ಮುಖಂಡರಾದ ಹೆಚ್.ಆರ್ ಚನ್ನಕೇಶವ, ಹನುಮಂತಪ್ಪ ಅಂಗಡಿ, ಶಿವಲೀಲಾ ದಳವಾಯಿ, ಉಮೇಶ ಸಜ್ಜನ, ಮಾರೇಶ ಮೂಷ್ಠೂರು, ಗುಡದನಗೌಡ,ಅಂಬಣ್ಣ, ಅಪ್ಪಣ್ಣ ಪದಕಿ, ಚನ್ನವಿರನಗೌಡ ಕೋರಿ, ನರಸಿಂಹರಾವ್ ಕುಲಕರ್ಣಿ, ರಾಜು ಬಾಕಳೆ, ಮಂಡಲ ಅದ್ಯಕ್ಷರುಗಳಾದ ಡಾ.ಕೊಟ್ರೇಶ ಶಡ್ಮಿ, ಚಂದ್ರು ಕವಲೂರು, ಶಂಕ್ರಪ್ಪ ಪಳುಟಗಿ, ಸಿದ್ದರಾಮಸ್ವಾಮಿ, ಮನೋಹರ ಹೆರೂರ, ಶಶಿಧರ ಕವಲಿ, ಬಿ.ಜೆ.ಪಿ ಮುಖಂಡರುಗಳಾದ ಚಂದ್ರಕಾಂತ ವಡಗೇರಿ, ಸದಾಶಿವಯ್ಯ, ವಿರುಪಣ್ಣ, ಕೆ.ರವೀಂದ್ರರಾವ್, ಶ್ಯಾಮಲಾ ಕೋನಾಪೂರ, ಗವಿಸಿದ್ದಪ್ಪ ಕಂದಾರಿ, ಜಿಲ್ಲಾ ಬಿ.ಜೆ.ಪಿ ವಕ್ತಾರರಾದ ಚಂದ್ರಶೇಖರಗೌಡ ಪಟೀಲ ಹಲಗೇರಿ. ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಬಿ.ಜೆ.ಪಿ ಅಭಿಮಾನಿಗಳು, ಕಾರ್ಯಕರ್ತರು ಮೋದಿ ಅಭಿಮಾನಿಗಳು ಭಾಗವಹಿಸಿದ್ದರು. ಹಾಲೇಶ ಕಂದಾರಿ ಕಾರ್ಯಕ್ರಮ ನಿರೂಪಿಸಿದರು.   
Please follow and like us:
error

Leave a Reply

error: Content is protected !!