You are here
Home > Koppal News > ಕನ್ನಡ, ಕರ್ನಾಟಕ ರೂಪಗೊಂಡ ಬಗೆ ಒಂದು ಅವಲೋಕನ

ಕನ್ನಡ, ಕರ್ನಾಟಕ ರೂಪಗೊಂಡ ಬಗೆ ಒಂದು ಅವಲೋಕನ

ಕನ್ನಡ ನಾಡನ್ನು ಕುರಿತು ಅದರ ಕನ್ನಡದ ಬಗೆಗೆ ನಾವು ಚಿಂತಿಸುತ್ತ ಹೋದಾಗ ನಮಗೆ ಅನೇಕ ರೂಪಗಳು ಸಿಗುತ್ತವೆ. ಕರ್ನಾಟಕದ ಪ್ರಾಚೀನತೆ ಕ್ರಿ.ಪೂರ್ವದಿಂದಲೂ ಇದೆ. ಕ್ರಿ.ಪೂ.೩ನೇ ಶತಮಾನದಲ್ಲಿ ಸಂಸ್ಕ್ರತ ಮಹಾಭಾರತದಲ್ಲಿ ‘ಕರ್ಣಾಟ’ ಎಂಬ ಉಲ್ಲೇಖವಿದೆ. ತಮಿಳಿನ ಶಿಲಪ್ಪದಿಗಾರಂ ಕೃತಿಯಲ್ಲಿ ‘ಕರುನಾಡರ್’ ಎಂದು,ಅಪಭ್ರಂಶ, ಪ್ರಾಕೃತಗಳಲ್ಲಿ ‘ಕನ್ನಡ’ ಎಂದಿದ್ದರೆ ಗುಜರಾತಿಯಲ್ಲಿ ಕನಡಿ, ಮರಾಠಿಯಲ್ಲಿ ಕಾನಡಿ ಎಂಬ ರೂಪಗಳನ್ನು ಕಾಣುತ್ತೇವೆ.
ಹೀಗೆ ಪೂರ್ವರೂಪಗಳನ್ನು ಗಮನಿಸಿದ ಮೇಲೆ ನಂತರ ರಾಜಕೀಯವಾಗಿ ಕದಂಬರು ಕನ್ನಡದ ರಾಜಮನೆತನವಾಗಿ ಕ್ರಿ.ಶ. ೪ನೇ ಶತಮಾನದಿಂದ ೬ನೇ ಶತಮಾನದವರೆಗೆ ಆಳ್ವಿಕೆ ನೆಡೆಸಿದರು. ಅದೇ ಸಂದರ್ಭದಲ್ಲಿ ಕರ್ನಾಟಕದ ದಕ್ಷಿಣ ಭಾಗದಲ್ಲಿ ಗಂಗರು ಕ್ರಿ.ಶ. ೩೫೦. ರಿಂದ ೯೯೯ರ ವರೆಗೆ ಆಳಿದರು. ನಂತರ ಬಂದ ಚಾಲುಕ್ಯರು ಕನ್ನಡ ಭಾಷಿಕರನ್ನೆಲ್ಲ ಒಂದುಗೂಡಿಸಿ ಆಡಳಿತ ನೆಡೆಸಿದರು. ತದನಂತರದಲ್ಲಿ ಬಂದ ಮಳಕೇಟದ ರಾಷ್ಟ್ರಕೂಟರು ಕನ್ನಡ ನಾಡು-ನುಡಿ, ಸಂಸ್ಕೃತಿ ಕುರಿತಾದ ಕಲ್ಪನೆ ಬೆಳೆಯಿತು. ಕವಿರಾಜಮಾರ್ಗಕಾರ ಕನ್ನಡ ನಾಡಿನ ಎಲ್ಲೆಗಳನ್ನು “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ” ಎಂದು ವಿಸ್ತಾರವಾದ ಕನ್ನಡ ನಾಡಿನ ಚಹರೆಗಳ ಕುರಿತು ವಿವರಿಸಿದ. ಆನಂತರ ಬಂದ ಕಲ್ಯಾಣಿ ಚಾಲಿಕ್ಯರುಕ್ರಿ.ಶ.೯೭೩ ರಿಂದ ೧೧೯೮ರ ವರೆಗೆ ಆಳಿದ ಇವರು ತಮ್ಮ ಅವಧಿಯಲ್ಲಿ ಆಂಧ್ರದ ಪಶ್ಚಿಮ ಭಾಗಗಳಿ, ಮಹಾರಾಷ್ಟ್ರದ ದಕ್ಷಿಣ ಭಾಗಗಳವರೆಗೆ ವಿಸ್ತರಿಸಿದರು. ತದನಂತರ ಕರ್ನಾಟಕದ ಉತ್ತರ ಭಾಗವನ್ನು ಸೇವುಣರು, ದಕ್ಷಿಣದ ಭಾಗವನ್ನು ಹೊಯ್ಸಳರು ಹಂಚಿಕೊಂಡು ಆಳ್ವಿಕೆ ನೆಡೆಸಿದರು. ಇದಾದ ಮೇಲೆ ೧೩ನೇ ಶ.ಮಾನದ ಕೊನೆಯಲ್ಲಿ ಉತ್ತರದ ಕಿಲ್ಜಿಗಳು ದಕ್ಷಿಣ ರಾಜ್ಯಗಳ ಮೇಲೆ ದಾಳಿ ಆರಂಭಿಸಿದರು. ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ವಾರಂಗಲ್ಲಿನ ಕಾಕತಿಯರನ್ನು, ದೇವಗಿರಿಯ ಸೇವುಣರನ್ನು, ದ್ವಾರಸಮುದ್ರದ ಹೊಯ್ಸಳರನ್ನು ಸೋಲಿಸಿದ. ಕಾಕತಿಯ ಪ್ರತಾಪ ರುದ್ರನನ್ನು ಸೋಲಿಸಿದ ಕಾಫರನು ಅವನ ಜಾಗದಲ್ಲಿ ಹರಿಹರ, ಬುಕ್ಕರನ್ನು ಕಂಪಲಿ ಮತ್ತು ಆನೆಗುಂದಿ ಪ್ರದೇಶಗಳಿಗೆ ನೇಮಿಸಿದ. ನಂತರ ಹರಿಹರ ಬುಕ್ಕರು ದೆಹಲಿ ಸುಲ್ತಾನರ ಸಂಬಂಧ ಕಡಿದುಕೊಂಡು ಕ್ರಿ.ಶ.೧೩೩೬ರಲ್ಲಿ ಹೊಸದಾಗಿ  ‘ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಕ್ರಮವಾಗಿ ಸಂಗಮ, ಸಾಳವ, ತುಳವ ಮತ್ತು ಅರವೀಡು ಮನೆತನಗಳು ೨೨೦ವರ್ಷಗಳ ಕಾಲ ವಿಜಯನಗರವನ್ನು ಆಳಿದರು. ಇದೇ ಸಂದರ್ಭದಲ್ಲಿ ಕೃಷ್ಣಾನದಿಯ ಉತ್ತರದ ಗಡಿಯಿಂದ ಕ್ರಿ.ಶ.೧೩೪೭ರಲ್ಲಿ ಬಹುಮನಿ ರಾಜ್ಯ ಉದಯಿಸಿತು. ಕಲಬುರ್ಗಿಯನ್ನು ರಾಜಧಾನಿ ಮಾಡಿಕೊಂಡ ಇವರು ಗೋವಾದವರೆಗೆ ರಾಜ್ಯ ವಿಸ್ತರಿಸಿದರು. ಆಮೇಲೆ ಬಹುಮನಿ ರಾಜ್ಯರಲ್ಲಿ ಒಡಕುಂಟಾಗಿ ಐದು ರಾಜ್ಯಗಳಾದವು. ಅವುಗಳೆಂದರೆ ೧. ವಿಜಾಪುರದ ಆದಿಲ್ ಶಾಹಿ, ೨. ಬೀದರಿನ ಬರೀದ್ ಶಾಹಿ, ೩. ಗೋಲ್ಕಂಡದ ಕುತುಬ್ ಶಾಹಿ, ೪. ಅಹಮದ್ ನಗರದ ನಿಜಾಂಶಾಹಿ ೫. ಬಿರಾರ್ ನಲ್ಲಿ ಇಮಾದ ಶಾಹಿ. ಕ್ರಿ.ಶ.೧೫೬೫ರಲ್ಲಿ ನಡೆದ ರಕ್ಕಸ ತಂಗಡಿಗಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಸೋಲನುಭವಿಸಿತು. ನಂತರ ಇದರ ಒಡಲಿಂದ ಮೈಸೂರು ಸಂಸ್ಥಾನ ಮತ್ತು ಕೆಳದಿ ಸಂಸ್ಥಾನಗಳು ತಲೆಯೆತ್ತಿದವು.
ಆಮೇಲೆ ಮೈಸೂರನ್ನಾಳಿದ ಹೈದರ್ ಕೆಳದಿಯನ್ನು ವಶಪಡಿಸಿಕೊಂಡ. ಟಿಪ್ಪುವಿನ ಕಾಲದಲ್ಲಿ ಕೇರಳ, ಮಲಬಾರ್, ತಮಿಳುನಾಡು, ಆರ್ಕಾಟ್ ಮತ್ತು ಗೋವಾದವರೆಗೆ ವಿಸ್ತರಿಸಿದ. ಕ್ರಿ.ಶ.೧೭೯೯ರಲ್ಲಿ ಟಿಪ್ಪು ಕಾಲವಾದ ಮೇಲೆ ೧೮ನೇ ಶತಮಾನದಲ್ಲಿ ಮೈಸೂರು ಸಂಸ್ಥಾನ ಬ್ರಿಟಿಷರ ವಶವಾಯಿತು. ಆನಂತರ ಕನ್ನಡ ನಾಡಿನ ಪ್ರದೇಶಗಳು ಮದರಾಸಯ ಪ್ರಾಂತ,ಹೈದ್ರಾಬಾದ್ ಪ್ರಾಂತ, ಮುಂಬೈ ಪ್ರಾಂತಗಳಲ್ಲಿ ಹಂಚಿಹೋದವು. ಈ ಹಿನ್ನೆಲೆಯಲ್ಲಿ ಭಾಷಾವಾರು ಆಧಾರದ ಮೇಲೆ ಕರ್ನಾಟಕ ಪ್ರಾಂತದ ರಚನೆಗಾಗಿ ಆರಂಭವಾದ ಆಂದೋಲನ ಸ್ವಾತಂತ್ರ್ಯ ಸಂಗ್ರಾಮದ ಜೊತೆಯಲ್ಲಿಯೇ  ಮೂಡಿಬರತೊಡಗಿತು.
ಈ ಏಕೀಕರಣದ ಕಲ್ಪನೆ ಆಂದೋಲನವಾಗಿ ರೂಪಗೊಳ್ಳಲು ಬ್ರಿಟಿಷ್ ಅಧಿಕಾರಿಗಳು, ಬುದ್ಧಿಜೀವಿಗಳು, ಕವಿಗಳು, ಪತ್ರಕರ್ತರು, ಲೇಕರು ಕಾರಣರಾದರು. ಇವರ ಪ್ರಯತ್ನದಿಂದ ಜನರಲ್ಲಿ ಭಾವನಾತ್ಮಕತೆಯ ವಾತಾವರಣವು ಸ್ವತಂತ್ರ ಗಳಿಕೆಗೂ ಕಾರಣವಾಯಿತು. ಈ ಸಂದರ್ಭದಲ್ಲಿ ರಾಜಕಾರಣಿಗಳು ಏಕೀಕರಣದ ಕುರಿತು ಬೆಂಬಲಿಸತೊಡಗಿದರ. ನಾಲ್ಕು ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕರ್ನಾಟಕದ ಭಾಗಗಳಲ್ಲಿ ಆಡಳಿತ ಭಾಷೆಯ ಸಮಸ್ಯೆ ಉದ್ಭವಿಸಿತು. ೧೯ನೇ ಶತಮಾನದ ಅಂತ್ಯದ ವೇಳೆಗೆ ರಾಷ್ಟ್ರೀಯಪ್ರಜ್ಞೆ ಬೆಳೆದಂತೆ ಬ್ರಿಟಿಷರನ್ನು ವಿರೋಧಿಸತೊಡಗಿದರು.ಇದರ ಫಲವಾಗಿ ಭಾಷಾವಾರು ಪ್ರಾಂತಗಳ ರಚನೆಯ ಬಗ್ಗೆ ಚಳವಳಿ ಆರಂಭವಾಯಿತು.
ಮೊದಲಿಗೆ ೧೮೫೬ರಲ್ಲಿ ಡ್ಯೆಪುಟಿ ಚನ್ನಬಸಪ್ಪ ಈ ಚಳವಳಿಯನ್ನು ಉತ್ತರ ಕರ್ನಾಟಕದಲ್ಲಿ ಆರಂಭಿಸಿದರು. ೧೮೫೮ರಲ್ಲಿ ಭಾಷಾವಾರು ಪ್ರಾಂತ ಮಾಡಬೇಕೆಂದು ಜಾನ್ ಬ್ರೈಟ್ ಎಂಬುವವನು ಬ್ರಟಿಷ್ ಪಾರ್ಲಿಮೆಂಟಿಗೆ ಸೂಚಿಸಿದ. ಇದು ಬೇಧೋಪಾಯ ನೀತಿಯಿಂದ ವಿಫಲವಾಯಿತು. ಇದೇರೀತಿ ೧೮೭೪ ರಿಂದ ೧೮೭೬ ರಲ್ಲಿ ಬಂಗಾಳ, ಓರಿಸ್ಸಾ, ಅಸ್ಸಾಂಗಳಲ್ಲಿ ಭಾಷಾವಾರು ಪ್ರಾಂತಗಳ ಕೂಗು ಆರಂಭವಾಯಿತು. ಇದರಿಂದ ಕನ್ನಡಿಗರಿಗೆ ಹೆಚ್ಚಿನ ಹುಮ್ಮಸ್ಸು ಮೂಡಿತು.೧೯೦೨ರಲ್ಲಿ ಭಾರತ ಸರಕಾರದ ಗೃಹಕಾರ್ಯದರ್ಶಿಯಾಗಿದ್ದ ಎಚ್.ಎಚ್.ರಿಸಲಿ ತನ್ನ ಆಡಳಿತದಲ್ಲಿ ಭಾಷಾವಾರು ಪ್ರಾಂತಗಳ ರಚನೆಗೆ ಸಲಹೆ ನೀಡಿದ. ಆದರೆ ಭಾರತೀಯರನ್ನು ಒಂದುಗೂಡಿಸುವ ಮನಸು ಇರಲಿಲ್ಲ ಈ ಸಲಹೆನೂ ತಿರಸ್ಕೃತವಾಯಿತು. ಭಾರತೀಯರಲ್ಲಿ ರಾಷ್ಟ್ರೀಯತೆ ಜಾಗೃತಿ ಉಂಟಾಗಬಹುದೆಂಬ ಅಭಿಪ್ರಾಯ ಬ್ರಿಟಿಷರದಾಗಿತ್ತು. ಹೀಗೆ ಒಡೆದಾಳುವ ನೀತಿಯನ್ನಾದರಿಸಿ ಬಂಗಾಳ ಪ್ರಾಂತವನ್ನು ಧಾರ್ಮಿಕವಾಗಿ ಹಿಂದೂ-ಮುಸ್ಲಿಂ ಬಹುಸಂಖ್ಯಾತವುಳ್ಳ ಎರಡು ಪ್ರದೇಶಗಳನ್ನಾಗಿ ವಿಂಗಡಿಸಿದರು. ಇದರಿಂದ ಪ್ರತ್ಯೇಕತೆಯ ಬದಲಾಗಿ ಜನರಲ್ಲಿ ಭಾಷಾ ಐಕ್ಯತೆಯ ಜಾಗೃತಿ ತೀವ್ರಗೊಂಡಿತು. ಹೀಗೆ ಭಾಷಾವಾರುವಾಗಿ ಆಯಾ ಭಾಷಿಕರಲ್ಲಿ ಒಂದು ಎನ್ನುವ ಭಾವನೆ ಮೂಡಲು ಆರಂಭವಾಯಿತು. 
೧೯೧೯ರಲ್ಲಿ ಜಾರಿಗೆ ಬಂದ ಮಾಂಟೆಂಗೊ ಚಲ್ಮ್ಸಫರ್ಡ್ ಸುಧಾರಣೆ ಜನಾಂಗೀಯ ಹಾಗೂ ಭಾಷಾವಾರು ಪ್ರಾಂತಗಳ ಬಗ್ಗೆ ಒಲವು ಮೂಡಿತಾದರೂ ಸಾಧ್ಯವಾಗಲಿಲ್ಲ. ಆದರೆ ಜನರಿಂದ ತೀವ್ರತರವಾದ ಒತ್ತಾಯ ಬಂದಾಗ ವೈಸ್ರಾಯಗೆ ಅಧಿಕಾರ ನೀಡಲಾಯಿತು. ಅನಂತರದಲ್ಲಿ ಎರಕೀಕರಣಕ್ಕಾಗಿ ಸಾಹಿತ್ಯ-ಸಾಂಸ್ಕೃತಿಕ ಸಂಘ ಸಂಸ್ಥೆಗಳ ಪಾತ್ರ ಬಹುಮುಖ್ಯವಾದುದು. ವಿದ್ಯಸಭ್ಯಾಸದಿಂದ ಉಂಟಾದ ಸಾಂಸ್ಕೃತಿಕ ಪುನರುಜ್ಜೀವನ ಪ್ರಾಂತೀಯ ಭಾಷೆಗಳ ಅಭಿವೃದ್ಧಿಗೆ ಅವಕಾಸದವಾಯಿತು. ಆಗ ಪ್ರಾಂತೀಯ ಭಾಷೆಗಳು, ಸಂಸ್ಕೃತಿಗಳು ವಸಾಹತುಶಾಹಿಗಳ ವಿರುದ್ಧ ಧ್ವನಿ  ಎತ್ತತೊಡಗಿದವು.  ೧೮೩೪ರಲ್ಲಿ ರಚನೆಯಾದ ವೆಸ್ಲಿಯನ್ ಎಜ್ಯುಕೇಷನ್ ಸೊಸೈಟಿ ಇಂಗ್ಲಿಷ್ ಜೊತೆ ಕನ್ನಡ ಮಾಧ್ಯಮ ಶಾಲೆಗಳನ್ನು  ತೆರೆಯಿತು. ೧೮೩೬ರಲ್ಲಿ ಮಂಗಳೂರಿನಲ್ಲಿ ಭಾಷೆಲ್ ಮಿಷನ್, ೧೮೭೮ರಲ್ಲಿ ಜಸ್ಸೂಇಟ್ ಎಜ್ಯುಕೇಷನ್ಸೊಸೈಟಿ, ೧೮೬೧ರಲ್ಲಿ ಮೈಸೂರಿನಲ್ಲಿ ಶಾರದಾ ವಿಲಾಸ ಎಜ್ಯುಕೇಷನ್ ಸೊಸೈಟಿ, ೧೯೧೭ರಲ್ಲಿ ಬನುಮಯ್ಯ ವೊದ್ಯಾಸಂಸ್ಥೆ, ೧೮೯೦ರಲ್ಲಿ ಧಾರವಾಡದಲ್ಲಿ ಸ್ಥಾಪನೆಯಾದ ಕರ್ನಾಟಕ ವಿದ್ಯಾವರ್ಧಕ ಸಂಸ್ಥೆ, ೧೯೧೬ರಲ್ಲಿ ರಚನೆಯಾದ ಕರ್ನಾಟಕ ಇತಿಹಾಸ ಸಂಶೋಧನ ಸಂಘ, ೧೯೧೫ರ ಕರ್ನಾಟಕ. ಸಭಾ, ೧೯೧೬ರಲ್ಲಿ ಬಾಗಲಕೋಟದಲ್ಲಿ ಸ್ಥಾಪನೆಯಾದ ಬಸವೇಶ್ವರ ವಿದ್ಯಾವರ್ಧಕ ಸಂಘ, ೧೯೨೬ರಲ್ಲಿ ವೀರಶೈವ ವಿದ್ಯಾವರ್ಧಕ ಸಂಘ, ೧೯೧೭ರಲ್ಲಿ ನಿರ್ಮಾಣವಾದ ಕರ್ನಾಟಕ. ಎಜ್ಯುಕೇಷನ್ ಬೋರ್ಡ್, ೧೯೧೭ರಲ್ಲಿ ತುಮಕೂರುನಲ್ಲಿ ಹುಟ್ಟಿದ ಸಿದ್ಧಗಂಗಾ ವಿದ್ಯಾಸಂಸ್ಥೆ, ೧೯೧೫ರಲ್ಲಿ ಕನ್ನಡ ನಾಡು ನುಡಿಯ ಉಳುವಿಗಾಗಿ ಹುಟ್ಟಿದ ಕನ್ನಡ ಸಾಹಿತ್ಯ.ಪರಿಷತ್ತು, ೧೯೧೭ರಲ್ಲಿ ಜನ್ಮಥಿಯಾಸಾಫಿಕಲ್ ಸೊಸೈಟಿ, ೧೯೩೪ರ ಕರ್ನಾಟಕ ಏಕೀಕರಣ ಸಭಾ ಮುಂತಾದವು ಶಿಕ್ಷಣದ ಜೊತೆಗೆ ಕನ್ನಡ ನಾಡಿನ ಜಲ, ನಾಡು, ನುಡಿ, ಕಲೆ, ಸಂಸ್ಕೃತಿ, ಭಾಷೆಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸಿದವು. ಜನರಲ್ಲಿ ಆ ಮೂಲಕ ಜಾಗೃತಿಯನ್ನು  ಮೂಡಿಸಿದವು.
೧೮೯೦ರಲ್ಲಿ ಧಾತವಾಡದಲ್ಲಿ ಆರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘ ಕರ್ನಾಟಕ ಸ್ವಯತ್ತತೆ ಪಡೆಯಲು ತುಂಬಾ ಶ್ರಮಿಸಿತು. ಈ ಸಂಘದಲ್ಲಿ ಬೆನಗಲ್ ರಾಮರಾಯರು,ರಾ.ಹ. ದೇಶಪಾಂಡೆ, ಕುಲ ಪುರೋಹಿತ ಆಲೂರ ವೆಂಕಟರಾಯರು ಇವರೆಲ್ಲ ಸೇರಿ ಏಕೀಕರಣದ ಕಹಳೆಯನ್ನು ಊದಿದರು. ಇದೇ ಸಂದರ್ಭದಲ್ಲಿ ಸುಹಾಸಿನಿ ಮಾಸಪತ್ರಿಕೆ ಕನ್ನಡಪರವಾದ ಅನೇಕ ಲೇಖನಗಳನ್ನು, ಕವಿತೆಗಳನ್ನು ಪ್ರಕಟಿಸಿ ಮತ್ತಷ್ಟು ಹೋರಾಟ ಉರುಪಾಯಿತು. ಆಲೂರು ವೆಂಕಟರಾಯರಂತುಏಕೀಕರಣವನ್ನೇ ತಮ್ಮ ಜೀವಿತದ ಗುರಿಯಾಗಿಸಿಕೊಂಡು ಕರ್ನಾಟಕದ ಉದ್ದಗಲಕ್ಕೂ ಸುತ್ತಿ ಕರ್ನಾಟಕದ. ವೈಭವವನ್ನು ಸಾರುವ “ಕರ್ನಾಟಕ ಗತವೈಭವ” ಕೃತಿ ರಚಿಸಿದರು.
೧೯೧೫ ರಲ್ಲಿ ರಚನೆಯಾದ ಕನ್ನಡ. ಸಾಹಿತ್ಯ ಪರಿಷತ್ತು ಇದು ಬ್ರಿಟಿಷರ ವಿಕೇಂದ್ರೀಕರಣದ ವಿರುದ್ಧ ಸೆಟೆದು ನಿಂತ ಈ ಪರಿಷತ್ತು ಅಖಿಲ ಕರ್ನಾಟಕದ ವ್ಯಾಪ್ತಿಯನ್ನು ಗುರುತಿಸಲು ಪ್ರಾರಂಭಿಸಿತು ಇದಕ್ಕೆ ಮಹಾರಾಜರು ಪೋಷಕರಾದರು. ಇದರ ಅಸ್ತಿತ್ವದಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಶ್ಲಾಗನೀಯವಾದುದು. ಇದರಲ್ಲಿ ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ಫ.ಗು. ಹಳಕಟ್ಟಿ, ಬೆನಗಲ್ ರಾಮರಾಯರು, ಕೆ. ರಾಜಗೋಪಾಲ ಕೃಷ್ಣರಾಯರು, ತಮ್ಮಪ್ಪಣ್ಣ ಚಿಕ್ಕೋಡಿ, ಎಚ್.ಎ. ನಂಜುಂಡಯ್ಯ, ಕೆ.ಪಿ.ಪುಟ್ಟಣ್ಣ ಚೆಟ್ಟ, ಕರ್ಪೂರ ಶ್ರೀನಿವಾಸರಾಯರು ಎಂ. ಕಾಂತರಾಜೇ ಅರಸ್, ಎಂ. ವೆಂಕಟಕೃಷ್ಣಯ್ಯ, ಆರ್. ರಾವ್ ಬಹದ್ದೂರ್, ನರಸಿಂಹಾಚಾರ್ ಮೊದಲಾದವರು ಕನ್ನಡ ಭಾಷೆಯುಳ್ಳ ಪ್ರತ್ಯೇಕ ಕನ್ನಡ. ರಾಜ್ಯವನ್ನು ಕಟ್ಟುವುದು ಇವರ ಕನಸಾಗಿತ್ತು.
೧೯೧೬ರಲ್ಲಿ ಧಾರವಾಡದಲ್ಲಿ ಕರ್ನಾಟಕ. ಸಭಾವನ್ನು ಆಲೂರು ವೆಂಕಟರಾಯರು ಸ್ಥಾಪಿಸಿದರು. ಇದರಲ್ಲಿ ಆಲೂರು ವೆಂಕಟರಾಯರು, ಕಡಪ ರಾಘವೇಂದ್ೃಅಯರು, ಮುದವೀಡು ಕೃಷ್ಣರಾವ್, ಗದಿಗಯ್ಯ ಹೊನ್ನಾಪುರಮಠ ಇದ್ದವರು. ಇವರು೧೯೧೮ರ ವೇಳೆಗೆ ಅಖಿಲ ಭಾರತ ಕಾಂಗ್ರೆಸ್ ಅದಿವೇಷನದಲ್ಲಿ ಭಾಗವಹಿಸಿದ ಕನ್ನಡಿಗರೂ ಆಗಿದ್ದರು. ಕರ್ನಾಟಕದ. ರಚನೆ ಬಗ್ಗೆ ಸುತ್ತೋಲೆ ಆರಂಭಿಸಿದರು.  ಏಕೀಕರಣ. ನಿತ್ಯದ ಕೂಗಾಗತೊಡಗಿತು. ಎನ್.ಎಸ್.ಹರ್ಡಿಕರ್ ಈ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರು.  ದೇಶಾಭಿಮಾನದ ದೃಷ್ಟಿಯಿಂದ ಕವಿಗಳು ರಚಿಸಿದ ದೇಶ ಭಕ್ತಿಗೀತೆಗಳು ಹೋರಾಟಕ್ಕೆ ಒಂದು ಮೊನಚನ್ನು ತಂದಕೊಟ್ಟವು. ೧೯೨೪ರಲ್ಲಿ ಹುಯಿಲಗೋಳ ನಾರಾಯಣರಾಯರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ. ನಸಡು’ ಶಾಂತರಸರ ‘ರಕ್ಷಿಸು ಕರ್ನಾಟಕ ದೇವಿ ಸುರಕ್ಷಿಸು ಕರ್ನಾಟಕ ದೇವಿ
ಕದಂಬವಾಧಿ, ಚಾಲುಕ್ಯಾಂಕುಷ ಶೋಭವರನೆ’, ಪಂಜೆ ಮಂಗೇಶರಾಯರ ‘ತಾಯೇ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೇ, ಹರಸು ತಾಯೆ ಸಂತಸ ಕಾಯೆ ನಮ್ಮ ಜನ್ಮದಾತೆಯೇ’, ಬಿ.ಎಂ.ಶ್ರೀ. ಅವರ ‘ಹಾರಸಿ ಹಾರಿಸಿ ಕನ್ನಡ. ಭಾವುಟ’, ಕುವೆಂಪುರವರ ‘ಜೈ ಭಾರತ ಜನನಿಯ ತನುಜಾತೆ, ಜೈಏ ಕರ್ನಾಟಕ. ಮಾತೆ’ ಮುಂತಾದ ಗೀತೆಗಳು ಮತ್ತಷ್ಟು  ಪ್ರೇರಣೆ ನೋಡಿದವು. ೧೯೨೦ರಲ್ಲಿ ಮೊದಲ ಕರ್ನಾಟಕ ರಾಜಕೀಯ ಸಮ್ಮೇಳನ ಧಾರವಾಡದಲ್ಲಿ ಜರುಗಿತು ಇದರ ಅಧ್ಯಕ್ಷತೆಯನ್ನು ಮಾಜಿ ದಿವಾನರಾದ ವಿ.ಪಿ. ಮಾಧವರಾವ್ ವಹಿಸಿದ್ದರು. ಇದರಲ್ಲಿ ಕನ್ನಡ ಮಾತಾಡುವ ಪ್ರದೇಶಗಳನ್ನು ಒಂದುಗೂಡಿಸಬೇಕೆಂದು ನಿರ್ಣಯಿಸಲಾಯುತು. ಅದೇ ಸಂದರ್ಭದಲ್ಲಿ  ನಾಗಪುರದಲ್ಲಿ ನೆಡೆದ ಕಾಂಗ್ರೆಸ್ ಅದಿವೇಷನದಲ್ಲಿ ಕಡಪ ರಾಘವೇಂದ್ರರಾವ್ ಅವರ ನೇತೃತ್ವದಲ್ಲಿ ೮೦೦ ಜನ ಕನ್ನಡಿಗರು ಪ್ರತ್ಯೇಕ. ಕಾಂಗ್ರೆಸ್  ವಲಯ ಕೇಳಿದರು. ಆಮೇಲೆ ೩೧ ಭಾಷಾವಾರು ಕಾಂಗ್ರೆಸ್  ವಲಯಗಳನ್ನು ಸ್ಥಾಪಿಸಿತು. ೧೯೨೪ರಲ್ಲಿ ಬೆಳಗಾವಿಯಲ್ಲಿ ಸಭೆ ನೆಡೆಸಲಾಯಿತು. ಇದರಲ್ಲಿ ಕೊಡಗು, ಹೈದ್ರಾಬಾದ್ ಕರ್ನಾಟಕ,  ದೇಶೀಯ ಸಂಸ್ಥಾನಗಲು ಸೇರಿದ್ದವು. ಆದರೆ ಮೈಸೂರು ಸಂಸ್ಥಾನ ಸೇರಿರಲಿಲ್ಲ. ೧೯೨೧ರಲ್ಲಿ ಎ.ಬಿ.ಲಟ್ಟೆ, ಉಡುಪಿ ರಾಮರಾಯರು ಕರ್ನಾಟಕ.ರಾಜ್ಯದ. ಬೇಡಿಕೆಯನ್ನು ಮಂಡಿಸಿದರು. ಆದರೆ ಬ್ರಿಟಿಷ್ ಸರಕಾರ ಅದನ್ನು ತಲ್ಲಿಹಸಕಿತು.ಮತ್ತೆ ೧೯೨೯ರಲ್ಲಿ ಬೆನಗಲ್ ರಾಮರಾಯರು ಏಕೀಕರಣದ ಬೇಡಿಕೆಯನ್ನು ಮಡಿಸಿದರು. ವಿರೋದ ಮಧ್ಯದಲ್ಲಯೂ ಅಪಾರ ಜನಬೆಂಬಲ ದೊರಕಿತು. ಮುಂದೆ ೧೯೨೪ರ ಕರ್ನಾಟಕದ ಏಕೀಕರಣ ಸಭಾ, ಮತ್ತು ಕಾಂಗ್ರೆಸ್ ಅದಿವೇಷನಗಳು ಬೆಳಗಾವಿಯಲ್ಲಿ ನೆಡೆದವು. ಏಕೀಕರಣದ ಚರ್ಚೆ ನೆಡೆಯಿತು. ಏಕೀಕರಣ. ಸಭಾದ ಮೊದಲ ಅಧ್ಯಕ್ಷರಾಗಿ ಶ್ರೀ ದಿದ್ಧಪ್ಪ ಕಂಬಳಿ ಆದರು. ೧೯೨೬ರಂದ ೧೯೪೭ರ ವರೆಗೆ ಸುಮಾರು ೧೧ ಬಾರಿ ಕರ್ನಾಟಕ. ಏಕೀಕರಣ. ಸಮ್ಮೇಳನ ನೆಡೆಸಿ ಕರ್ನಾಟಕದ ಗತವೈಭವವನ್ನು ಪುನಃ ನೆನೆಪಿಗೆ ತಂದುಕೊಟ್ಟರು.೧೯೨೮ರಲ್ಲಿ ನೆಹರೂ ಸಮಿತಿ ರಚಿಸಲಯಿತು. ಇದರಲ್ಲಿ ಸುಭಾಸ್ ಚಂದ್ರಬೋಸ್, ತೇಜಬಹದ್ದೂರ್ ಶಾಹಿಬ್, ಖುರೇಷಿ, ಅಲಿ ಇಮಾಮ್ ಸದಸ್ಯರಾಗಿ ಸಲಹೆ ನೀಡಿದರು. ಆನಂತರ ಕರ್ನಾಟಕ ಏಕೀಕರಣ ಸಂಘ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಸೇರಿಕಂಡಯ ಪ್ರತ್ಯೇಕರಾಜ್ಯದ ಬೇಡಿಕೆಯಿಟ್ಟವು. ಇದನ್ನು ಒಪ್ಪಿದ ಕಾಂಗ್ರೆಸ್ ಬ್ರಿಟಿಷರ ಸಹಕಾರಕ್ಕೆ ಬೇಡಿಕೆ ಸಲ್ಲಿಸಿತು. ೧೯೩೧ರಲ್ಲಿ ದುಂಡುಮೇಜಿನ ಸಮ್ಮೇಳನದಲ್ಲಿ ಬೆನಗಲ್ ರಾಮರಾಯರು, ಮಿರ್ಜಾ ಇಸ್ಮಾಯಿಲ್ ಮತ್ತೆ ಚರ್ಚಿಸಿದರು. ಆಮೇಲೆ ಪ್ರವಾಸ ಕೈಗೊಂಡು ಜಾಗೃತಿ ಮೂಡಿಸಲು ತೀರ್ಮಾನಿಸಿ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂಭಾ, ಗೋಕಾಕ್, ಪಂಜೆ, ಗೋವಿಂದ ಪೈ, ಕಾರಂತ, ಶ್ರೀಕಂಠಯ್ಯ, ರಾಮಸ್ವಾಮಿ ಅಯ್ಯಂಗಾರ್, ಅನಕೃ, ಎನ್.ಎಸ್.ಹರ್ಡಿಕರ್, ತಸರನಾಥ, ಕೆ. ಕೃಷ್ಣರಾಯ, ಅಂದಾನಪ್ಪ ದೊಡ್ಡಮೇಟಿ, ಎಸ್. ನಿಜಲಿಂಗಪ್ಪ, ಸಿ.ಎಂ. ಪೂಣಚ್ಚ ಮುಂತಾದವರ ಆ ಕೆಲಸವನ್ನು ಮಾಡಿದರು. ೧೯೨೮ರ ಸೈಮನ್ ಕಮಿಷನ್ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಕರ್ನಾಟಕ. ಏಕೀಕರಣ ಮಹಾಸಮಿತಿಯ ಅಧ್ಯಕ್ಷರಾಗಿ ಎಸ್. ನಿಜಲಿಂಗಪ್ಪರಾದರು. ೧೯೪೬ರಲ್ಲಿ ಬೋಂಬಾಯಿಯಲ್ಲಿ ಜರುಗಿದ ಕರ್ನಾಟಕ ಏಕೀಕರಣ ಸಮಿತಿಯ ೧೦ನೇ ಅದಿವೇಷನವನ್ನು ಸರದಾರ್ ವಲ್ಲಭಾಯಿ ಪಟೇಲ್ ನೆರವೇರಿಸಿದರು. ೧೯೪೭ರಲ್ಲಿ ಮೈಸೂರಿನಲ್ಲಿ ಸರಕಾರ ಅಸ್ತಿತ್ವಕ್ಕೆ ಬಂತು. ಮಹಾರಾಜರು ರಾಜ್ಯಪಾಲರಾಗುಳಿದರು. ಏಕೀಕರಣಕ್ಕಿದಗದ ಆತಂಕ ಬಗೆಹರಿಯಿತು. ೧೯೪೭ರಲ್ಲಿ ಕಾಸರಗೋಡಿನಲ್ಲಿ ರಂಗನಾಥ ದಿವಾಕರ ಅಧ್ಯಕ್ಷತೆಯಲ್ಲಿ ಏಕೀಕರಣ. ಸಮ್ಮೇಳನ ನಡೆಯಿತು. ೧೯೪೮ರ ಧಾರ್ ಕಮಿಟಿ, ೧೯೪೯ರ ಜೆವಿಪಿ ಕಮಿಟಿ, ೧೯೫೩ರ ಕಾಂಗ್ರೆಸ್ ಅದಿವೇಷನ,೧೯೫೩ರ ವಾಂಚೂ ಕಮಿಟಿ ಇವುಗಳ ಜೊತೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿದರು.ಇದಾದಮೇಲೆ ೧೯೫೩ ಡಿಸೆಂಬರ್ ೨೯ ರಂದು ರಾಜ್ಯ ಪುನರ್ ವಿಂಗಡಣಾ ಸಮಿತಿ ರಚಿಸಲಾಯಿತು. ಈ ಸಮಿತಿ ೧೯೫೫ರಲ್ಲಿ ಎಸ್. ಫಜಲ್ ಅಲಿ, ಎಚ್.ಎನ್.ಕುಂಜ್ರು, ಕೆ.ಎಂ.ಫಣಿಕ್ಕರ್ ವರದಿ ತಯಾರಸಿ ಸಲ್ಲಿಸಿದರು. ಈ ಸಮಿತಿಯ ಆದೇಶದಂತೆ ಕೆಲವು ತಿದ್ದುಪಡೆಗಳೊಂದಿಗೆ ಏಕೀಕರಣಗೊಂಡ ವಿಶಾಲ ಮೈಸೂರು ರಾಜ್ಯ ೧೯೫೬ ನವ್ಹಂಬರ್ ೧ ರಂದು ಅಸ್ತಿತ್ವಕ್ಕೆ ಬಂತಾದರೂ ಕರ್ನಾಟಕ ಎಂಬ ನಾಮಕರಣವಾಗಲಿಲ್ಲ ಎಂಬ ಬೇಸರ ಅನೇಕರಲ್ಲಿ ಉಂಟಾಯಿತು. ಮತ್ತೆ ೧೯೬೫ರಲ್ಲಿ ಮಹಾಜನ್ ಆಯೋಗ ರಚನೆಯಾಯಿತು. ಮಹಾರಾಷ್ಟ್ರ. ಆಂಧ್ರ, ಕಾಸರಗೋಡು ಮುಂತಾದ ಭಾಗಗಳಲ್ಲಿ ಭಾಷೆ ಸಮಸ್ಯೆ ತಲೆದೊರಿತು. ಇದಕ್ಕೆ ಸಂಬಂಧಿಸಿ ೧೯೬೭ರಲ್ಲಿ ಒಂದು ವರದಿ ಸಲ್ಲಿಸಿತು. ಆನಂತರ ೧೯೭೩ ನವ್ಹಂಬರ್ ೧ನೇ ತಾರಿಕಿನಂದು ಅಂದಿನ ಮುಖ್ಯಮತ್ರಿಗಳಾದ ಮಾನ್ಯಶ್ರಿ ದೇವರಾಜ ಅರಸ್ ಅವರ “ಕರ್ನಾಟಕ” ಎಂದು ನಾಮಕರಣ ಮಾಡಿದರು.
ಹೀಗೆ ಅನೇಕ ರಾಜಮಹಾರಾಜರ, ಸಾಮಂತರ,ಕವಿಗಳ, ಪತ್ರಕರ್ತರ, ಬುದ್ಧಿಜೀವಿಗಳ, ಹೋರಾಟಗಾರರ ಪರಿಶ್ರಮದಿಂದ ಕರ್ನಾಟಕ ರಾಜ್ಯ ನಿರ್ಮಾಣವಾಯಿತು. ಈ ೫೯ನೆಯ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಆ ಎಲ್ಲಾ ಮಹಾನೀಯರುಗಳಿಗೆ ಹೃದಯಪೂರ್ವಕವಾದ ಅಭಿನಂದನೆಗಳು.
ಡಾ. ಹಂದ್ರಾಳ ಗವಿಸಿದ್ದಪ್ಪ
ಕನ್ನಡ ಅಧ್ಯಾಪಕರು
ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ, ಕೊಪ್ಪಳ 

Leave a Reply

Top