ದನಕನದೊಡ್ಡಿ: ಬೂದಗುಂಪಾ: ರೈಲ್ವೇ ಕಾಮಗಾರಿ ತಡೆದು ರೈತರಿಂದ ೧೫ನೇ ದಿನಕ್ಕೆ

ಮುಖ್ಯಮಂತ್ರಿ ಪ್ರವಾಸ ಖಂಡಿಸಿ ಭಜನೆ ಮಾಡುವ ಮುಖಾಂತರ ಆಹೋರಾತ್ರಿ ಧರಣಿ
         ದಿನಾಂಕ: ೧೩-೧೨-೨೦೧೪ ರಂದು ಕೊಪ್ಪಳದ ಬಸ್ಸಾಪೂರ ಬಲ್ಡೋಟ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಜಿಲ್ಲೆಯ ಜ್ವಲಂತ ರೈತರ ಸಮಸ್ಯೆಯಾದ ರೇಲ್ವೇ ಭೂಸ್ವಾಧೀನದ ಸಂತ್ರಸ್ತರ ಧರಣಿ ಸ್ಥಳಕ್ಕೆ ಬರದೇ ಹೋದ, ರೈತರ ಕುರಿತು ಅಸಡ್ಡೆ ತೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಖಂಡಿಸುತ್ತದೆ.  ಮುನಿರಾಬಾದ್-ಮಹೆಬೂಬನಗರ ರೈಲ್ವೇ ಯೋಜನೆಯ ಕಾಮಗಾರಿ ನಡೆಯತ್ತಿದ್ದ ದನಕನದೊಡ್ಡಿ, ಬೂದಗುಂಪಾ  ಗ್ರಾಮಗಳ ರೈತರು ೧೫ನೇ ದಿನದಲ್ಲಿ ಭಜನೆ ಮಾಡುವುದರ ಮೂಲಕ ಅಹೋರಾತ್ರಿ ಧರಣಿ ನಡೆಸಿ, ಕಾಮಗಾರಿ ತಡೆಯಲಾಗಿದೆ. 
         ೨೦೦೯ ರಿಂದ ಇಲ್ಲಿಯವರೆಗೆ ರೈತರಿಗೆ ಭೂಪರಿಹಾರ ನೀಡದೇ, ಕನಿಷ್ಟ ಬೆಳೆ ಪರಿಹಾರವನ್ನೂ ನೀಡದೆ ಒಕ್ಕಲಬ್ಬಿಸಿದ್ದರಿಂದ ಭೂಮಿ ಕಳೆದುಕೊಂಡ ರೈತರಿಗೆ ಜೀವನೋಪಾಯ ನಡೆಸಲು ಆಗುತ್ತಿಲ್ಲವೆಂದು, ಕೂಡಲೇ ಭೂಪರಿಹಾರ ನೀಡಬೇಕೆಂದು ಆಗ್ರಹ ಮಾಡಲಾಗಿತ್ತು. ಇಲ್ಲಿಯವರೆಗೆ ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ , ಕೇಂದ್ರದ ಮೇಲೆ ರಾಜ್ಯ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತ ಕಾಲ ನೂಕಿದ್ದರಿಂದ ಬಾದಿತ ಕುಟುಂಬಗಳು ಬೀದಿಪಾಲಾಗುವ  ಹಂತಕ್ಕೆ ತಲುಪಿವೆ. ಮೊದಲ ಹಂತದ ಮತ್ತು ಎರಡನೇ ಹಂತದ ಭೂಸ್ವಾಧೀನ ಪೂರ್ಣಗೊಳಿಸಿದ್ದು. ಜೀವನೋಪಾಯಕ್ಕಾಗಿ ಇದ್ದ ಎಕರೆ ಎರಡು ಎಕರೆ ಭೂಮಿಯನ್ನು ಕಿತ್ತುಕೊಂಡಿದ್ದು,.ಕೂಡಲೇ ೨ ಹಂತದ ಭೂ ಪರಿಹಾರ ನೀಡಬೇಕೆಂದು, ರೈತರ ಜಮೀನುಗಳಿಗೆ ಸಂಪರ್ಕ ರಸ್ತೆಯನ್ನು ಎರಡೂ ಪಕ್ಕದಲ್ಲಿ ನಿರ್ಮಾಣ ಮಾಡಿಕೊಡಬೇಕೆಂದು, ಬೆಳೆನಷ್ಠ ಪರಿಹಾರ, ಜಂಟಿ ಸರ್ವೇ, ೬(೧), ೯(೧), ನೋಟಿಫಿಕೇಶನ್ ಮತ್ತು ಪತ್ರಿಕಾ ಪ್ರಕಟಣೆಗಳ ಸಹಿತ ಧರಣಿ ಬಿಡಾರಕ್ಕೆ ಜಲ್ಲಾಧಿಕಾರಿಗಳು ಆಗಮಸಿ ತಮ್ಮ ಮಧ್ಯಸ್ಥಿಕೆಯಲ್ಲಿ ಚೆಕ್‌ಗಳನ್ನು ವಿತರಿಸಬೇಕೆಂದು, ಬಿಡಿ-ಬಿಡಿಯಾಗಿ ಚೆಕ್ ನೀಡುವ ಕ್ರಮ ಸರಿಯಲ್ಲವೆಂದು ಖಂಡಿಸುತ್ತಾ ಪ್ರತಿ ರೈತರ ಸಣ್ಣ ಸಮಸ್ಯೆಗಳನ್ನು ಸಹಿತ ಇದೇ ಸ್ಥಳದಲ್ಲಿ ಇತ್ಯರ್ಥಪಡಿಸಬೇಕೆಂದು ಅಲ್ಲಿಯವರೆಗೆ ಕೇವಲ ಹೆಚ್ಚುವರಿ ಚೆಕ್ ವಿತರಿಸಿ ವಿರಮಿಸಲು ಬಿಡುವುದಿಲ್ಲವೆಂದು ಹೇಳುತ್ತಾ ಧರಣಿಯನ್ನು ಮುಂದುವರೆಸಲಾಗುವುದು.  
            ಈ ಸಂದರ್ಭದಲ್ಲಿ ಭಜನಾ ತಂಡದ ಹಿರೇಪಕಿರಪ್ಪ ಕುಷ್ಟಗಿ, ಪಂಪಣ್ಣ ವಂಟಿಗೇರ್, ಮೌಲಾಸಾಬ್ ವಾಲೇಕಾರ್, ಹನುಮಂತಪ್ಪ ಕೋರಿ, ನಿಂಗಪ್ಪ ಕುಷ್ಟಗಿ, ಕರಿಯಪ್ಪ ಜಬ್ಬಲಗುಡ್ಡ ಹಾಗೂ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹೊಳೆಯಾಚೆ, ಕಾರ್ಯದರ್ಶಿ ಗವಿಸಿದ್ದಪ್ಪ ಡೋಳ್ಳಿನ, ರೈತರಾದ ಪಕೀರಪ್ಪ ಕುಷ್ಟಗಿ, ಹಸಿರು ಸೇನೆ ಸಂಚಾಲಕರಾದ ನಿಂಗನಗೌಡ ಗ್ಯಾರಂಟಿ, ರೈತರಾದ ಕರಿಯಮ್ಮ, ಕರಿಯಣ್ಣ ಕೊಳ್ಳಿ ಮಲ್ಲಮ್ಮ, ಸೋಮವ್ವ ಬೆಟಗೇರಿ, ಹುಲಿಗೆಮ್ಮ ಸಂಗಟಿ, ಅಂಬಮ್ಮ ಸಂಗ್ಟಿ, ಹಾಗೂ ಇತರರು ಇದ್ದರು. 

Leave a Reply