ಮಿಸ್ಟರ್ ರಾಮಾಚಾರಿ ಹೆಸರಿನ ಬಳೆಗಳಿಗೆ ಜಾತ್ರೆಯಲ್ಲಿ ಭಾರೀ ಬೇಡಿಕೆ

ಕೊಪ್ಪಳ : ನಗರದ ಶ್ರೀಗವಿಸಿದ್ಧೇಶ್ವರ ಜಾತ್ರೆಯಲ್ಲಿ ವಿವಿಧ ತರಹದ ಬಳೆಗಳ ಅಂಗಡಿ ವ್ಯಾಪಾರ ಬಲು ಜೋರಾಗಿದೆ. ಹಳೆಯ  ಚಲನ ಚಿತ್ರಗಳ ಹೆಸರಿನ ಬಳೆಗಳಿಗೆ ಬೇಡಿಕೆ  ಇಲ್ಲದೇ ಆಧುನಿಕ ಚಲನಚಿತ್ರಗಳ ಹಾಗೂ ಧಾರಾವಾಹಿಗಳ

ಹೆಸರಿನ ಬಳೆಗಳಿಗೆ  ಜಾತ್ರೆಯಲ್ಲಿ ಭಾರೀ ಬೇಡಿಕೆ ಬಂದಿದೆ.  ಚಲನಚಿತ್ರಗಳ  ಹೆಸರಿನ ಬಳೆಗಳಾದ ಮಿಸ್ಟರ್ ರಾಮಾಚಾರಿ, ಮಂಡ್ಯ ಇನ್ ಲವ್, ಪಿ.ಕೆ ಮತ್ತು ತಮಿಳಿನ ಲಿಂಗಂ ಈ ಹೆಸರಿನ ಬಳೆಗಳಿಗೆ ಗವಿಮಠದ ಜಾತ್ರೆಯಲ್ಲಿ ಭಾರೀ ಬೇಡಿಕೆ ಇವೆ. ಅಲ್ಲದೇ ಧಾರಾವಾಹಿಗಳಾದ  ಅರಗಿಣಿ, ಕಾವೇರಿ,ಕುಂಕುಮ ಭಾಗ್ಯ, ಭಾಗ್ಯದ ಲಕ್ಷ್ಮಿ ಬಾರಮ್ಮಾ, ಮಂದಾರ, ಅಮೃತ ವರ್ಷಿಣಿ, ಖುಷಿ, ಈ ಮೊದಲಾದ  ಚಲನಚಿತ್ರಗಳ  ಹೆಸರಿನ ಬಳೆಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಅದರಲ್ಲಿಯಂತೂ ಮಿಸ್ಟರ್ ರಾಮಾಚಾರಿಈ ಚಲನಚಿತ್ರಗಳ ಹೆಸರಿನ ಬಳೆಗಳು ಭರ್ಜರಿ ವ್ಯಾಪಾರವಾಗುತ್ತಿವೆ ಮತ್ತು ಈ ವರ್ಷ ಬಳೆಗಳ ವ್ಯಾಪರ  ಉತ್ತಮ ಇದೆ ಎಂದು  ೩೦ ವರ್ಷಗಳಿಂದಲೂ ಬಳೆಯ ವ್ಯಾಪಾರಿಯಾಗಿ ಕೊಪ್ಪಳದ ಜಾತ್ರೆಗೆ ಬರುತ್ತಿರುವ ಹೊಸಪೇಟೆಯ ನಾಗರಾಜ ಹೇಳುತ್ತಾರೆ. ಕೊಪ್ಪಳ, ಕಂಪ್ಲಿ,ಕಾರಟಗಿ, ಹುಬ್ಬಳ್ಳಿ, ಬಹದ್ದೂರಬಂಡಿ, ಭಾಗ್ಯನಗರ,ಹಿಟ್ನಾಳ, ಗದಗ, ಕೂಡ್ಲಿಗಿ, ಬೆಂಗಳೂರ ಹಾಗೂ ಮೊದಲಾದ ನಗರಗಳ ವ್ಯಾಪಾರಿಗಳು ಈ ಜಾತ್ರೆಯಲ್ಲಿ ಬಳೆಗಳ ಅಂಗಡಿ ಇಟ್ಟು ಉತ್ತಮ ವ್ಯಾಪಾರ ಕಂಡುಕೊಳ್ಳುತ್ತಿದ್ದಾರೆ.

ಮಹಾದಾಸೋಹಕ್ಕೆ ತೋಟದಬಾವಿ(ಬನ್ನಿ ಗೋಳಓಣಿ) ಭಕ್ತರಿಂದ ೨ ಕ್ವಿಂಟಾಲ ಸಿಹಿ ಬೂಂದಿ
ಕೊಪ್ಪಳ : ಗವಿಮಠದ ಮಹಾದಾಸೋಹಕ್ಕೆ ಇಂದು ದಿನಾಂಕ ೧೧-೦೧-೨೦೧೫ ರಂದು ೧೦ ನೇ ವಾರ್ಡನ ತೋಟದ ಬಾವಿ ಭಕ್ತರಿಂದ ( ಬನ್ನಿಗೋಳ ಓಣಿ)  ೨ ಕ್ವಿಂಟಾಲ ಸಿಹಿ ಬೂಂದಿಯನ್ನು  ಮಹಾ ದಾಸೋಹಕ್ಕೆ ಸಮರ್ಪಣೆ ಮಾಡಲಾಯಿತು. ಸಮಸ್ತ ಓಣಿಯ ಭಕ್ತ ಜನರು ಭಾಜಾಭಜಂತ್ರಿ ಮೆರವಣಿಗೆಯ ಮೂಲಕ ಗವಿಮಠಕ್ಕೆ ಬಂದು ಈ ಸಿಹಿ ಬೂಂದಿಯನ್ನು ಸಮರ್ಪಿಸಿದರು. ದಾನಿಗಳಿಗೆಲ್ಲ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶಿರ್ವದಿಸಿದ್ದಾರೆ.
ರವಿವಾರ ಮತ್ತೊಂದು ಜಾತ್ರೆಯಷ್ಟು ಭಕ್ತಜನರು ಜಾತ್ರೆಯಲ್ಲಿ
ಕೊಪ್ಪಳ : ಗವಿಮಠದ ಜಾತ್ರೆಯು ಜರುಗಿ ೪ ದಿನಗಳಾದರೂ ಮಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಇಂದು ದಿನಾಂಕ ೧೧-೦೧-೨೦೧೫ ರವಿವಾರ ರಜಾ ದಿನವಾದ್ದರಿಂದ ಮತ್ತೊಮ್ಮೆ ಜಾತ್ರೆಯಷ್ಟು ಭಕ್ತ ಜನರು ಸೇರಿದ್ದರು. ಭಕ್ತರು ಶ್ರೀಗವಿಮಠದ ಕರ್ತೃ ಗವಿಸಿದ್ಧೇಶ್ವರನಿಗೆ ಕಾಯಿ ಕರ್ಪೂರ ಸಲ್ಲಿಸಿ ಭಕ್ತಿ ಭಾವ ಮೆರೆದು, ಪೂಜ್ಯ ಶ್ರೀಗಳ ದಶನಾಶಿರ್ವಾದ ಪಡೆಯುತ್ತಿರುವದು ಹಾಗೂ ಭಕ್ತರು ಸಾಲು ಸಾಲಾಗಿ ನಿಂತುಕೊಂಡು ಅಚ್ಚುಕಟ್ಟಾಗಿ ಪ್ರಸಾದವನ್ನು ಮಹಾದಾಸೋಹದಲ್ಲಿ ಸ್ವೀಕರಿಸುವದು ಶ್ರೀಗವಿಮಠದಲ್ಲಿ ಕಂಡು ಬಂದಿತು. 
ಆಕರ್ಷಕ ಘೋಷ ವಾಕ್ಯಗಳು
ಕೊಪ್ಪಳ : ಗವಿಮಠದ ಜಾತ್ರೆಯ ಅಂಗವಾಗಿ ಜಾತ್ರೆಯಲ್ಲಿನ  ಆವರಣಗಳಲ್ಲಿನ ಎಲ್ಲ ಅಂಗಡಿಮುಂಗಟ್ಟುಗಳು ಭರ್ಜರಿ  ಸಾಗುತ್ತಿವೆ. ಅದರಲ್ಲಿಯಂತೂ ಮಿಠಾಯಿ ಅಂಗಡಿಗಳ ಮಾಲಕರು  ಜನ ಜಾಗೃತಿಯನ್ನು ಮೂಡಿಸುವಂತಹ ಘೋಷವಾಕ್ಯಗಳನ್ನು ಮಿಠಾಯಿಯಲ್ಲಿ ಬರೆಸಿರುತ್ತಾರೆ. ಮಕ್ಕಳ ಮೇಲೆ ಉಗ್ರರ ದಾಳಿ ಎಷ್ಟು ಸರೀ? ಕಾಡು ಬೆಳೆಸಿ ನಾಡು ಉಳಿಸಿ, ಸ್ವಚ್ಛ ಭಾರತ ಅಭಿಯಾನ, ವಿದ್ಯೆಯೇ ಸುಖದ ಸಾಧನ, ಕನ್ನಡಿಗನ ಮಾತು ಚಿನ್ನ,  ಹೃದಯ ದಾನಿಗಳಿಗೆ ಸಲಾಂ ನಂಬಿ ಕರೆದಡೆ ಓ ಎನ್ನನಾ ಗುರು ಗವಿಸಿದ್ಧೇಶ್ವರ ಈ ಮೊದಲಾದ ಘೋಷವಾಕ್ಯಗಳು ಮಿಠಾಯಿಯಲ್ಲೆ ಕಲಾತ್ಮಕವಾಗಿ ರಚನೆಯಾಗಿದ್ದು, ಜಾತ್ರೆಗೆ ಬಂದ ಲಕ್ಷ ಲಕ್ಷ ಭಕ್ತ ಜನರಲ್ಲಿ ಜಾಗೃತಿ ಹಗೂ ಚಿಂತನೆಯನ್ನು ಮೂಡಿಸುವಲ್ಲಿ ಮಿಠಾಯಿ ಅಂಗಡಿಗಳ ಶ್ರಮ ಸಾರ್ಥಕ
      

Leave a Reply