ಮ್ಯಾನ್‌ಹೋಲ್ ಸಾವು : ಸರಕಾರಿ ಹತ್ಯೆಗಳು : ಭಾರಧ್ವಾಜ್

ಹುಬ್ಬಳ್ಳಿಯ ಮ್ಯಾನ್‌ಹೊಲನಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಕ್ಕೆ ಮಹಾನಗರಪಾಲಿಕೆಯ ಆಯುಕ್ತರು ಮತ್ತು ಒಳ ಚರಂಡಿ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿಸಿ ೩೦೨ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಸಿಪಿಐಎಂಎಲ್ ರಾಜ್ಯಕಾರ್ಯದರ್ಶಿ ಭಾರಧ್ವಾಜ್   ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಒಳಚರಂಡಿಯಲ್ಲಿ ಇರುವ ಕಟ್ಟಿಗೆಗಳನ್ನು ತೆಗೆಸಲು ಕಾರ್ಮಿಕರನ್ನು ಒಳಚರಂಡಿಯಲ್ಲಿ ಇಳಿಸಲಾಗಿತ್ತು. ಕಾರ್ಮಿಕರಿಗೆ ಯಾವುದೇ ಜೀವರಕ್ಷಕ ಉಪಕರಣಗಳನ್ನು ಕೊಡದೇ ಒಳಚರಂಡಿಯಲ್ಲಿ ಇಳಿಸಿದ್ದು ಅಪರಾಧ. ಇದಕ್ಕೆ ಹೊಣೆಗಾರರನ್ನಾಗಿಸಿ ಹುಬ್ಬಳ್ಳಿ ಮಹಾನಗರಪಾಲಿಕೆ ಆಯುಕ್ತರಾದ ಎಂ.ನೂರಮನ್ಸೂರ್ ಇವರನ್ನು ಮತ್ತು ಗುತ್ತಿಗೆದಾರರಾದ ಈಗಲ್ ಕನ್ಸಟ್ರಕ್ಷನ್ ಕಂಪನಿಯ ಚೇರಮನ್‌ರ ವಿರುದ್ಧ ಕಲಂ ೩೦೨ ರಲ್ಲಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕೆಂದಿದ್ದಾರೆ. 
ಮೃತ ಕಾರ್ಮಿಕರಾದ ಸುಫಲ್‌ಬಿಸ್ವಾಸ್ ಮತ್ತು ಹನುಮಂತ ಚವ್ಹಾಣ ಇವರ ಕುಟುಂಬಕ್ಕೆ ತಲಾ ೫೦ ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಹುಬ್ಬಳ್ಳಿ ಮಹಾನಗರಪಾಲಿಕೆ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ನಡೆಯದೇ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಅಪರಾಧಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಸಿಪಿಐಎಂಎಲ್ ಪಕ್ಷ ಎಚ್ಚರಿಸಿದೆ

Leave a Reply