ಅಭಿವೃದ್ಧಿಗಾಗಿ ಮತ ನೀಡಿ – ಕರಡಿ ಸಂಗಣ್ಣ

ಹಾಲವರ್ತಿ, ೧೯ : ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೨೨೦ ಕೆ. ವಿದ್ಯುತ್ ಸ್ಟೇಷನ್ ಮಂಜುರಾಗಿ ಕಾಮಗಾರಿ ಪ್ರಾರಂಭವಾಗಿದೆ. ಇದರಿಂದ ಸುತ್ತಲಿನ ಕೈಗಾರಿಕೆಗಳಿಗೆ ಮತ್ತು ಏತ ನೀರಾವರಿ ಯೋಜನೆಗಳಿಗೆ ಮುಖ್ಯವಾಗಿ ಕೊಪ್ಪಳ ನಗರದ ಜನತೆಯ ವಿದ್ಯುತ್ತಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಲ್ಲದೇ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ಶಾಸಕ ಕರಡಿ ಸಂಗಣ್ಣ ಹೇಳಿ, ಹಾಲವರ್ತಿ ಗ್ರಾಮದಲ್ಲಿ ದಿ. ೧೯-೦೪-೧೩ ರಂದು ಮತ ಯಾಚಿಸಿದರು.
ಹಾಲವರ್ತಿ ಗ್ರಾಮದಲ್ಲಿ ೫೦ ಲಕ್ಷ ರೂ. ಸುವರ್ಣಗ್ರಾಮ ಯೋಜನೆಯಡಿಯಲ್ಲಿ ಸಿ.ಸಿ. ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕ್ಷೇತ್ರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯದವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ೮೦೦ ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮನೆಗಳಿಗೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಟ್ಟು ಆರೋಗ್ಯವಂತ ಸಮಾಜ ಕಟ್ಟೋಣ ಎಂದು ನುಡಿದರು.
ಭೂ ನ್ಯಾಯ ಮಂಡಳಿ ಸದಸ್ಯ ಹಾಲೇಶ ಕಂದಾರಿ ಮಾತನಾಡಿ ಕರಡಿ ಸಂಗಣ್ಣನವರು ಅಭಿವೃದ್ಧಿ ಪರ ಚಿಂತನೆಯನ್ನು ಹೊಂದಿದವರಾಗಿದ್ದು, ಸೂರು ರಹಿತರಿಗೆ ಗ್ರಾಮಾಂತರ ಪ್ರದೇಶದಲ್ಲಿ ೭೦೦೦ ಮನೆಗಳ ಹಾಗೂ ನಗರ ಪ್ರದೇಶದಲ್ಲಿ ೪೦೦೦ ಮನೆಗಳ ನಿರ್ಮಾಣವಾಗಿವೆ. ಅಲ್ಲದೇ ಶೈಕ್ಷಣಿಕವಾಗಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು, ತೋಟಗಾರಿಕಾ ಕಾಲೇಜು ಮಂಜೂರಾಗಿವೆ ಎಂದು ಹೇಳಿದರು.
ಮುಖಂಡರಾದ ಭರತ್ ನಾಯ್ಕ್, ಜಡೆಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಾಲವರ್ತಿ ಗ್ರಾ. ಪಂ. ಅಧ್ಯಕ್ಷ ಹನುಮಂತಪ್ಪ ಗುರಿಕಾರ, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಸಂಗಮೇಶ ಡಂಬಳ, ಹಿರಿಯರಾದ ವೆಂಕೋಬ್‌ರಾವ್ ಕಾಮನೂರ, ಗ್ರಾ.ಪಂ. ಸದಸ್ಯ ಫಕೀರಗೌಡ್ರು ಗಿರೇಗೌಡ್ರು, ಮಹೇಂದ್ರ ಹಾಲವರ್ತಿ, ಬಾಬಾ ಅರಗಂಜಿ, ಸುರೇಶ ಮುಧೋಳ, ಟಿ.ಎ.ಪಿ.ಸಿ.ಎಂ.ಎಸ್. ಉಪಾಧ್ಯಕ್ಷ ಚಂದ್ರಯ್ಯ ಮಹಾಂತಯ್ಯನಮಠ, ನಿಂಗಜ್ಜ ಶಹಾಪುರ ಮುಂತಾದವರು ಉಪಸ್ಥಿತರಿದ್ದರು ಎಂದು ಪಕ್ಷದ ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.
ಸುದ್ದಿ ೨ : ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ
ಓಜಿನಹಳ್ಳಿ : ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಗಳನ್ನು ಮತ್ತು ಸಂಗಣ್ಣ ಕರಡಿಯವರ ಅಭಿವೃದ್ಧಿಪರ ಧೋರಣೆಗಳನ್ನು ಓಜಿನಹಳ್ಳಿ ಗ್ರಾಮದ ಮುಖಂಡರಾದ ಗವಿಸಿದ್ಧಪ್ಪ ಜಂತ್ಲಿ ಇವರು ಕಾಂಗ್ರೆಸ್ ತೊರೆದು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿ.ಜೆ.ಪಿ. ಕೊಪ್ಪಳ ವಿಧಾನಸಭಾ ಅಭ್ಯರ್ಥಿ ಸಂಗಣ್ಣ ಕರಡಿಯವರು ಗವಿಸಿದ್ಧಪ್ಪ ಜಂತ್ಲಿಯವರನ್ನು ಶಾಲು ಹೊದಿಸಿ, ಪಕ್ಷಕ್ಕೆ ಬರಮಾಡಿಕೊಂಡರು.

ಸುದ್ದಿ ೩ : ಹಳ್ಳಿಗಳಲ್ಲಿ ಕರಡಿ ಸಂಗಣ್ಣ ಮತ ಯಾಚನೆ
ಕೊಪ್ಪಳ, ೧೯ : ಕೊಪ್ಪಳ ಕ್ಷೇತ್ರದ ವಿಧಾನಸಭಾ ಬಿ.ಜೆ.ಪಿ. ಅಭ್ಯರ್ಥಿ ಸಂಗಣ್ಣ ಕರಡಿ ಇವರು ಇಂದು ಸುತ್ತಲಿನ ಹಳ್ಳಿಗಳಲ್ಲಿ ಪ್ರಚಾರ ನಡೆಸಿ ಮತ ಯಾಚನೆ ಮಾಡಿದರು. ಅಲ್ಲಾನಗರ, ಹಾಲವರ್ತಿ, ಓಜಿನಹಳ್ಳಿ, ಹಿರೇ ಬಗನಾಳ ಮುಂತಾದ ಗ್ರಾಮೀಣ ಭಾಗಗಳಲ್ಲಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತ ಯಶಸ್ವಿ ಮತಯಾಚನೆ ಮಾಡಿದರು. ಬೃಹತ್ ಸಂಖ್ಯೆಯ ಜನಸ್ತೋಮ ಸಂಗಣ್ಣ ಕರಡಿಯವರನ್ನೇ ಬೆಂಬಲಿಸುವ ಭರವಸೆ ನೀಡಿದ್ದು ಈ ಸಾರೆ ಮತ್ತೆ ಕರಡಿ ಸಂಗಣ್ಣನವರ ಜಯ ನಿಶ್ಚಿತ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಶಾಸಕರೊಂದಿಗೆ ಮತಯಾಚನೆಯ ಸಂದರ್ಭದಲ್ಲಿ ಅಪ್ಪಣ್ಣ ಪದಕಿ, ಚಂದ್ರು ಕವಲೂರು, ಸದಾಶಿವಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಅನೇಕರು ಬಿ.ಜೆ.ಪಿ.ಯನ್ನು ಸೇರಿ, ಕರಡಿ ಸಂಗಣ್ಣನವರನ್ನು ಬೆಂಬಲಿಸುವ ವಾಗ್ದಾನ ಮಾಡಿದರು ಎಂದು ಪಕ್ಷದ ವಕ್ತಾರ ಹಾಲೇಶ ಕಂದಾರಿ ತಿಳಿಸಿದ್ದಾರೆ.
Please follow and like us:
error

Related posts

Leave a Comment