fbpx

ಬಲಿಷ್ಠ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ – ಪಾನಘಂಟಿ

ಕಾಂಗ್ರೇಸ ನೇತೃತ್ವದ ಯು.ಪಿ.ಎ ಸರಕಾರವು ಪಾಕಿಸ್ತಾನದ ಸೈನಿಕರು ನಮ್ಮದೇಶದ ಗಡಿಯೊಳಗೆ ಅಕ್ರಮ ನುಸುಳುವಿಕೆ, ಬಾಂಗ್ಲಾ  ಪುಂಡಾಟಿಕೆ, ಗಡಿಯಲ್ಲಿ ಅಭದ್ರತೆ ಹಾಗೂ  ಆಂತರಿಕ ಭಯೋತ್ಪಾದನೆ, ನಕ್ಷಲಿಸಂ, ಮುಂತಾದ ಪಿಡುಗುಗಳನ್ನು ನಿವಾರಿಸಿ ದೇಶದ ಜನರು ಸುಬದ್ರ ಸ್ಥಿತಿಯಲ್ಲಿ ಬದುಕಲು ಭಾರತೀಯರ ಹೃದಯಸಾಮ್ರಾಟ ನರೇಂದ್ರ ಮೋದಿ ಪ್ರಧಾನಿಯಾದಾಗ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂದು ಭಾರತೀಯ ಜನತಾಪಾರ್ಟಿ ಜಿಲ್ಲಾ ಖಜಾಂಚಿ ಹಾಗೂ ನ್ಯಾಯವಾದಿಗಳಾದ ರಾಘವೇಂದ್ರ ಪಾನಘಂಟಿ ಹೇಳಿದರು. 
ಅವರು ದಿನಾಂಕ ೧೨-೦೪-೨೦೧೪ ರಂದು ಯತ್ನಟ್ಟಿ, ನರೇಗಲ್, ಮಾದಿನೂರ  ಗ್ರಾಮಗಳಲ್ಲಿ ಜರುಗಿದ ಪ್ರಚಾರ ಸಭೆಗಳಲ್ಲಿ ಮಾತನಾಡಿದರು. ದೇಶದಲ್ಲಿ ಅಪೌಷ್ಠಿಕತೆ, ಬೆಲೆ ಏರಿಕೆ, ಆರ್ಥಿಕ ಕುಸಿತ, ಇವೆಲ್ಲವುಗಳ ಪರಿಹಾರಕ್ಕೆ ರಾಮಭಾಣ ಬಿಜೆಪಿ ಆಗಿದೆ ಎಂದರು. ನಗರಸಭೆ ಸದಸ್ಯರಾದ ಅಪ್ಪಣ್ಣ ಪಧಕಿ ಮಾತನಾಡಿ ಹಿಂದಿನ ಬಿಜೆಪಿ ಸರಕಾರವು ಯತ್ನಟ್ಟಿ ಭಾಗ್ಯನಗರದ ನಡುವೆ ಬಹುದಿನದ ಬೇಡಿಕೆಯಾದ ಯತ್ನಟ್ಟಿ ಬ್ರೀಜ್‌ಗೆ ಅನುದಾನ ಬಿಡುಗಡೆ ಮಾಡಿದರು. ಇದು ವರೆಗೂ ಯಾವುದೇ ಟೆಂಡರ್ ಕರೆಯದೆ ಕಾಮಗಾರಿಯನ್ನು ಪ್ರಾರಂಬಿಸಿಲ್ಲ. ಕಾಂಗ್ರೇಸ್‌ಗೆ ಅಭಿವೃದ್ದಿಗಿಂತ ಕಾಲಹರಣ ಮುಖ್ಯವಾಗಿದೆ. ಯುಪಿಎ ಬ್ರಷ್ಠಾಚಾರದಿಂದ ಇಡೀ ದೇಶವನ್ನು ಕೊಳ್ಳೆಹೊಡೆದಿದೆ. ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್, ವಿಮಾನ ಖರೀದಿಯಲ್ಲಿ ಹಗರಣ ಇನ್ನು ಮುಂತಾದ ಅನೇಕ ಹಗರಣಗಳು ದೇಶದ ಜನರ ಬೊಕ್ಕಸವನ್ನು ಖಾಲಿ ಮಾಡಿದ್ದಾರೆ, ಆದ್ದರಿಂದ ಕಾಂಗ್ರೇಸ್‌ಗೆ ದಿಟ್ಟ ಉತ್ತರ ನೀಡಿ ಬಿಜೆಪಿಗೆ ಮತ ನೀಡಬೇಕೆಂದು ಕೋರಿದರು. 
ಈ ಸಂದರ್ಭದಲ್ಲಿ  ತಾಲೂಕ ಪಂಚಾಯತ ಸದಸ್ಯರಾದ ರಮೇಶ ಚೌಡ್ಕಿ, ಡಾ. ಕೊಟ್ರೇಶ್ ಶೇಡ್ಮಿ, ದೇವಪ್ಪ ಕುಟಗನಹಳ್ಳಿ, ಶಂಕರ್ ಲಿಂಗನಬಂಡಿ, ಗವಿಸಿದ್ದಪ್ಪ ಮೆತಗಲ್, ಪ್ರಭುಗೌಡ ಪೋಲಿಸಪಾಟೀಲ್, ಪರ್ವತಗೌಡ , ಮುದಿಯಪ್ಪ ಚಿತ್ತಾಪೂರ, ಸಿದ್ದನಗೌಡ ಪಾಟೀಲ್, ಮಂಜುನಾಥ ಪಾಟೀಲ್, ಹುಲಗಪ್ಪ ಬಾರಕೇರ, ಸುರೇಶ ನರೆಗಲ್ ಇನ್ನು  ಮುಂತಾದವರು ಉಪಸ್ಥಿತರಿದ್ದರೆಂದು ಬಿಜೆಪಿ ಮಾದ್ಯಮ ಪ್ರಮುಖರಾದ ಹಾಲೇಶ್ ಕಂದಾರಿ ಪ್ರಕಟಣೆಗೆ ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!