ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

 ಕ್ರೀಡೆ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಉತ್ತಮವಾದ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಿರುವ ಯುವಜನರಿಗೆ ಹಾಗೂ ಯುವಕ/ಯುವತಿ ಸಂಘಗಳಿಗೆ ೨೦೧೨-೧೩ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದಿನಾಂಕ:೦೧/೦೪/೨೦೧೨ ರಿಂದ ೩೧/೦೩/೨೦೧೩ವರೆಗೆ ಯುವಕ/ಯುವತಿ ಮಂಡಳಿ ಹಾಗೂ ಯುವಕ/ಯುವತಿಯರು ತಾವು ಕೈಗೊಂಡಿರುವ ಕಾರ್ಯಕ್ರಮಗಳ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು, ಅರ್ಜಿದಾರರು/ಯುವಕ/ತಿಯರು ೧೫ ರಿಂದ ೩೫ ವಯೋಮಿತಿಯವರಾಗಿರಬೇಕು ದಿನಾಂಕ :೩೧/೦೩/೨೦೧೩ ಕ್ಕೆ ೩೫ ವರ್ಷ ಮೀರಬಾರದು, ವಯೋಮಿತಿ ಬಗ್ಗೆ ವಯಸ್ಸಿನ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಡೀಕರಿಸತಕ್ಕದ್ದು ಹಾಗೂ ಯಾವುದೇ ಕ್ರೀಮಿನಲ್ ಮುಖದ್ದಮೆಗಳಿಲ್ಲದಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಂದ ದೃಢೀಕರಣದ ಮೂಲ ಪ್ರತಿಗಳೊಂದಿಗೆ ಅರ್ಜಿಗಳನ್ನು  ಸಲ್ಲಿಸತಕ್ಕದ್ದು. 
ದಿನಾಂಕ:೦೧/೦೪/೨೦೧೨ ರಿಂದ ೩೧/೦೩/೨೦೧೩ವರೆಗೆ ನಡುವಿನ ಅವಧಿಯಲ್ಲಿ ನಡೆಸಿದ ಕಾರ್ಯಕ್ರಮಗಳ ಅನುಸಾರ ಪತ್ರಿಕಾ ವರದಿ ಛಾಯಾಚಿತ್ರ ಬ್ಯಾನರಗಳು ಸ್ಪಷ್ಟವಾಗಿ ಕಾಣುವಂತೆ ಒದಗಿಸುವುದು. ಈ ಎಲ್ಲಾ ಸ್ಪಷ್ಟವಾದ ವಿವರದೊಂದಿಗೆ ಪ್ರಸ್ತಾವನೆಗಳನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ಮಳೇಮಲ್ಲೇಶ್ವರ ರಸ್ತೆ ಕೊಪ್ಪಳ ಈ ಕಛೇರಿಯಲ್ಲಿ ನಿಗಧಿತ ನಮೂನೆಯನ್ನು ಪಡೆದು ಭರ್ತಿಮಾಡಿ ಸಾಧನೆಗಳ ದಾಖಲೆಗಳೊಂದಿಗೆ ಜುಲೈ ೦೧ ರೊಳಗಾಗಿ ೩ ಪ್ರತಿಗಳೊಂದಿಗೆ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ  ತಿಳಿಸಿದ್ದಾರೆ. 
Please follow and like us:
error