fbpx

ಸ್ವ-ಸಹಾಯ ಸಂಘಗಳ ಒಕ್ಕೂಟದ ಉದ್ಗಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ (ರಿ) ಯಲಬುರ್ಗಾ ಇವರ ಮಾರ್ಗದರ್ಶನದಲ್ಲಿ ದಿ ೧೮ರಂದು ತಳಕಲ್ಲ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ ತಳಕಲ್ಲ/ತಳಬಾಳ ಎ.ಬಿ.ಸಿ. ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ಉದ್ಗಾಟನಾ ಸಮಾರಂಭ ಏರ್ಪಡಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸದ್ಗುರು ಆತ್ಮನಂದಾ ಭಾರತಿ ಸ್ವಾಮಿಗಳು ಸಿದ್ದಾರೂಡಮಠ ದದೇಗಲ್ ನೆರವೆರಿಸಿ ಎಲ್ಲಾ ಮಹಿಳೆಯರಿಗೆ ಆಶಿರ್ವಾದಗಳನ್ನು ಮಾಡಿದರು. ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ಮಹಮ್ಮದ ಶಿರಾಜುದ್ದಿನ- ಮಹಿಳೆಯರು ಅಬಲೆ ಅಲ್ಲ ಸಬಲೆಯರು ಅವರು ಮನಸ್ಸು ಮಾಡಿದರೆ ಎಂತಹ ಕಷ್ಠಗಳನ್ನು ಸರಿ ಪಡಿಸುತ್ತಾರೆ ಮತ್ತು ಮಹಿಳೆಯರು ಒಗ್ಗಟ್ಟಾಗಿರುವುದು ಒಳ್ಳೆಯದು ಅವರು ದುಶ್ಚಟಗಳ ವಿರುದ್ದ ಹೋರಾಡಬೇಕು ಅದಕ್ಕೆ ನಮ್ಮ ಸಹಕಾರ ಇದ್ದೆ ಇರುತ್ತದೆ ಎಂದು ತಿಳಿಸಿದರು ಮತ್ತು  ಮುಖ್ಯ ಅತಿಥಿಯಾಗಿ   ಸಂದ್ಯಾ ಮಾದಿನೂರು ಹಿರಿಯ ವಕೀಲರು ಮಾತನಾಡಿ ಮಹಿಳೆಯರು ಆರ್ಥಿಕದಿಂದ, ಶಿಕ್ಷಣದಿಂದ ಅವಕಾಶಗಳಿಂದ ವಂಚಿತರಾಗಿದ್ದಾರೆ, ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮೂಲೆ ಗುಂಪಾಗುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಎಲ್ಲರು ಒಗ್ಗಟ್ಟಿನಿಂದ ಹೋರಾಡೋಣ ಏಳಿ ಏದ್ದೇಳಿ ಮಹಿಳೆಯರು ಎಲ್ಲರು ಮುಂದೆ ಬನ್ನಿ ಎಂದು ಕರೆ ನೀಡಿದರು  
 ಮುಖ್ಯ ಅತಿಥಿಗಳಾದ ಶಿವಣ್ಣ ರಾಯರಡ್ಡಿ, ತಿಮ್ಮಣ್ಣ ಚೌಡಿ, ಯಂಕಣ್ಣ ಹಳ್ಳೂರು ಇವರು ಮಾತನಾಡಿ ಶ್ರೀ ಕ್ಷೇತ್ರದ ಧಮಾಧಿಕಾರಿಗಳ ಈ ಕಾರ್ಯಕ್ರಮ ನಮ್ಮ ಊರಿಗೆ ಕೊಟ್ಟ ಉಡುಗೊರೆ ಇದನ್ನು ನಾವೆಲ್ಲರು ಒಗ್ಗಟ್ಟಿನಿಂದ ಒಕ್ಕೊರಲಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮಹಿಳೆಯರಿಗೆ ಏನೆ ತೊಂದರೆ ಬಂದರೆ ನಿಮ್ಮ ಜೊತೆ ನಾವು ಇದ್ದೇವೆ ಎಂದು ತಿಳಿಸಿದರು. ಪ್ರಸ್ತಾವಿಕವಾಗಿ ಶ್ರೀ ಕ್ಷೇತ್ರದ ಗ್ರಾಮೀಣ ಅಭಿವೃದ್ದಿಯ ಕೊಪ್ಪಳ ಜಿಲ್ಲೆಯ ನಿರ್ದೇಶಕರಾದ ಶಿವರಾಯ ಪ್ರಭು ಇವರು ಶ್ರೀ ಕ್ಷೇತ್ರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಮತ್ತು ತಳಕಲ್/ ತಳಬಾಳ, ಕೋಮಲಾಪುರ ಗ್ರಾಮಗಳಲ್ಲಿ ಇಲ್ಲಿಯವರೆಗೆ ನಡೆಸಲಾದ ಅಭಿವೃದ್ದಿ ಯೋಜನೆಯ ಪ್ರಗತಿ ವರದಿಯನ್ನು ತಳಕಲ್ ಸೇವಾ ಪ್ರತಿನಿಧಿಯಾದ ವೀರುಪಾಕ್ಷ ಹದ್ಲಿ ಇವರು ಓದಿದರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಯಲಬುರ್ಗಾ ಯೋಜನಾಧಿಕಾರಿಗಳಾದ  ಹರೀಶ ಆರ್.ಎಸ್ ಮಾಡಿದರು ಕಾರ್ಯಕ್ರಮದಲ್ಲಿ ಮೂರು ಒಕ್ಕೂಟದ ಅಧ್ಯಕ್ಷರಾದ ಬಸಮ್ಮ ವಿರುಪಾಕ್ಷಪ್ಪ ಹದ್ಲಿ, ಸುಮೀತ್ರಾ ಗುಗ್ಗಳ್ಳ, ರತ್ನಮ್ಮ ಆದಾಪೂರ, ತಾ.ಪಂ ಸದಸ್ಯರಾದ ಪದ್ಮಾವತಿ ಭೀಮಪ್ಪ ಕೋಮಲಾಪೂರ ಸೇವಾ ಪ್ರತಿನಿಧಿಗಳಾದ ಶ್ರೀಮತಿ ನೀಲಮ್ಮ ತೋಟದ, ಯಲ್ಲಮ್ಮ ಕೋಮಲಾಪೂರ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಕುನೂರಿನ ಮೇಲ್ವಿಚಾರಕರಾದ ಕು.ಸವೀತಾ ಮಾಡಿದರು, ವೀರುಪಾಕ್ಷ ಹದ್ಲಿ  ಇವರು ವಂದನೆಗಳನ್ನು ಮಾಡಿ ಕಾರ್ಯಕ್ರಮಕ್ಕೆ ವಿರಾಮ ನೀಡಿದರು,.   
ಕಾರ್ಯಕ್ರಮದಲ್ಲಿ ಸುಮಾರು ೨೦೦೦ ಸಾವಿರ ಮಹಿಳೆ ಭಾಗವಹಿಸಿದ್ದರು ಮತ್ತು ಕುಂಬ ಮೆರವಣಿಗೆ ಕೂಡ ನಡೆಯಿತು.   
Please follow and like us:
error

Leave a Reply

error: Content is protected !!