ಮಹಿಳಾ ಕೂಲಿಕಾರರ ಸಮಸ್ಯೆಗಳಿಗೆ ಸ್ಪಂದಿಸುವೆ – ಕವಿತಾ ಈಶ್ವರ್ ಸಿಂಗ್

ಹೊಸಪೇಟೆ: ಬಡ ಕೂಲಿಕಾರ ಮಹಿಳೆಯರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ಹಾಗೂ ಅವರಿಗೆ ಎಲ್ಲಾ ರೀತಿಯ ನೆರವು ನೀಡಲು ತಾಯಮ್ಮ ಶಕ್ತಿ ಸಂಘ ಬದ್ಧ ಎಂದು ತಾಯಮ್ಮ ಶಕ್ತಿಸಂಘದ ಅಧ್ಯಕ್ಷ ಕವಿತಾ ಈಶ್ವರ ಸಿಂಗ್ ಹೇಳಿದರು.
ವೆಂಕಟಾಪುರ ಕ್ಯಾಂಪ್‌ನಲ್ಲಿ ಶನಿವಾರ ತಾಯಮ್ಮ ಶಕ್ತಿಸಂಘದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲಿದೆ ಎಂದರು. ಇಂತಹ ಸಮಸ್ಯೆ ಇದ್ದರೆ ಸಂಘದ ಗಮನಕ್ಕೆ ಈ ವಿಷಯ ತರಬೇಕೆಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣ, ಶಾಲೆಯ ಶಿಕ್ಷಕರಾದ ಸುಕನ್ಯಾ, ರಮಾದೇವಿ, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು ಹಾಗೂ ತಾಯಮ್ಮ ಶಕ್ತಿ ಸಂಘದ ಸದಸ್ಯರಾದ ಲಲಿತಾ ಮತ್ತಿತರರರು ಹಾಜರಿದ್ದರು. 

Related posts

Leave a Comment